ತಾಲೂಕಾ ಆಡಳಿತ ದಿಂದ ದಿ/ ಡಿ. ದೇವರಾಜು ಅರಸು ರವರ – 110 ನೇ. ಜಯಂತಿ ಆಚರಣೆ.

ಮಾನ್ವಿ ಆ.21

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕಾ ಆಡಳಿತ ಹಾಗೂ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ದಿ/ ಡಿ.ದೇವರಾಜು ಅರಸು ರವರ 110 ನೇ. ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ತಹಸಿಲ್ದಾರ್ ಬೀಮರಾಯ.ಬಿ ರಾಮದುರ್ಗ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳಾಗಿ ದಿ/ ಡಿ.ದೇವರಾಜು ಅರಸು ರವರು ಅನೇಕ ಸುಧಾರಣೆಗಳನ್ನು ತರುವ ಮೂಲಕ ಹಿಂದುಳಿದ ವರ್ಗದವರು ಹಾಗೂ ಆರ್ಥಿಕವಾಗಿ ಅತ್ಯಂತ ದುರ್ಬಲ ವರ್ಗದವರಿಗಾಗಿ ಅನೇಕ ಯೋಜನೆಗಳನ್ನು ತರುವ ಮೂಲಕ ಹಿಂದುಳಿದ ವರ್ಗದವರ ಅಭಿವೃದ್ದಿಗೆ ಶ್ರಮಿಸಿದ್ದಾರೆ ಅವರ ಕರ್ನಾಟಕ ಭೂಸಧಾರಣೆ ಕಾಯ್ದೆಗಳು ಇಂದಿಗೂ ಕೂಡ ಕಂದಾಯ ಇಲಾಖೆಯಲ್ಲಿ ಜಾರಿಯಲ್ಲಿವೇ. ಇಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದಕ್ಕೆ ಹಾಗೂ ರೈತರು ಉಳ್ಳುವವನ್ನೆ ಭೂಮಿಯ ಒಡೆಯ ಕಾಯ್ದೆಯ ಮೂಲಕ ಬಡವರು ಕೂಡ ಭೂಮಿಯ ಒಡೆಯರನ್ನಾಗಿ ಮಾಡಿದ್ದಾರೆ. ದಿ/ಡಿ.ದೇವರಾಜು ಅರಸು ರವರು ರಾಜ್ಯದ ಸುಧೀರ್ಘ ಅವಧಿಯ ಮುಖ್ಯಮಂತ್ರಿಗಳಾಗಿ ಸಮ ಸಮಾಜ ನಿರ್ಮಾಣವಾಗುವಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.ಹಿರಿಯ ಮುಖಂಡರಾದ ಶಿವರಾಜ ನಾಯಕ ವಕೀಲರು ಮಾತನಾಡಿ ರಾಜ್ಯದಲ್ಲಿ ಹಿಂದುಳಿದವರ ಸಬಲಿಕರಣಕ್ಕಾಗಿ ಎಲ್.ಜಿ ಹಾವನೂರು ಅಯೋಗವನ್ನು ರಚಿಸುವ ಮೂಲಕ ರಾಜ್ಯದ ಹಿಂದುಳಿದ ವರ್ಗಗಳನ್ನು ಗುರುತಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಹಿಂದುಳಿದ ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯವಂತೆ ಮಾಡಿದ್ದರೆ ಎಂದು ತಿಳಿಸಿದರು.ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸುರೇಶ ರವರು ದಿ/ ಡಿ.ದೇವರಾಜು ಅರಸು ರವರ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಇಲಾಖೆಯಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉತ್ತಮವಾದ ಸೇವೆ ಸಲ್ಲಿಸಿದವರನ್ನು ತಾಲೂಕಾ ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪಟ್ಟಣದ ಬಸವ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೂ ದಿ/ ಡಿ.ದೇವರಾಜು ಅರಸು ರವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.ತಾ.ಪಂಚ ಗ್ಯಾರಂಟಿ ಸಮಿತಿಅಧ್ಯಕ್ಷರಾದ ಬಿ.ಕೆ ಅಂಬರೇಶಪ್ಪ, ಸರ್ಕಾರಿ ನೌಕರರ ಸಂಘದ ತಾ.ಅಧ್ಯಕ್ಷರಾದ ಸುರೇಶ ಕುರ್ಡಿ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ, ಪಿ.ಐ, ಸೋಮಶೇಖರ ಎಸ್.ಕೆಂಚರೆಡ್ಡಿ, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಅಧಿಕಾರಿ ಸುರೇಶ, ಬಿ.ಸಿ.ಎಂ ಇಲಾಖೆಯ ತಾಲೂಕಾ ನಿದೇಶಕರಾದ ಬಾಗಯ್ಯ ನಾಯಕ, ಅಗ್ನಿಶಾಮಕ ಠಾಣಾಧಿಕಾರಿ ರಂಗಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಬಾಕ್ಸ್ ಸುದ್ದಿ:-

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ದಿ/ ಡಿ.ದೇವರಾಜು ಅರಸು ರವರ 110 ನೇ. ಜನ್ಮದಿನಾಚರಣೆ ಕಾರ್ಯಕ್ರಮವನ್ನು ತಹಶೀಲ್ದಾರ್ ಬೀಮರಾಯ.ಬಿ ರಾಮದುರ್ಗ ಉದ್ಘಾಟಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button