ನಮಸ್ಕಾರ ಭಾರತೀಯ ಸನಾತನ ಸಂಸ್ಕೃತಿಯ ವಿಶಿಷ್ಟ ಆಚಾರ – ಎಚ್.ಲಕ್ಷ್ಮೀದೇವಮ್ಮ.
ಚಳ್ಳಕೆರೆ ಜೂ.03

ದಿವ್ಯತ್ರಯರ ಅಮೋಘ ಅಲಂಕಾರ ಸೇವೆ-ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅವರಿಂದ
ಶ್ರೀರಾಮಕೃಷ್ಣರ ನಾಮಸ್ಮರಣೆ
ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಮಾಡುವ ನಮಸ್ಕಾರ ಅವನ ವ್ಯಕ್ತಿತ್ವದ ಸಂಸ್ಕಾರದ ಸಂಕೇತವಾಗಿದ್ದು ಇದು ಭಾರತೀಯ ಸನಾತನ ಸಂಸ್ಕೃತಿಯ ವಿಶಿಷ್ಟ ಆಚರಣೆಗಳಲ್ಲಿ ಒಂದಾಗಿದೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ನಮಸ್ಕಾರ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.

ಭಕ್ತ ಮಾರ್ಕಂಡೇಯ, ಶ್ರೀರಾಮಚಂದ್ರ, ಹನುಮಂತ, ಶ್ರೀರಾಮಕೃಷ್ಣ ಪರಮಹಂಸರ ಜೀವನದಲ್ಲಿ ಅವರು ಮಾಡುತ್ತಿದ್ದ ನಮಸ್ಕಾರದ ಭಕ್ತಿ ಸಮರ್ಪಣೆ ನಮ್ಮೆಲ್ಲರಿಗೂ ಮಾದರಿ ಯಾಗಬೇಕು.
ಶ್ರೀಮತಿ ಶೋಭಾ ರಮೇಶ್ ಅವರಿಂದ ರಾಧೇಶ್ಯಾಮ್ ಭಜನೆ
ಶ್ರೀರಾಮಕೃಷ್ಣರು ನಮಸ್ಕಾರಾಸ್ತ್ರದಿಂದಲೇ ಇಡೀ ಜಗತ್ತನ್ನು ಗೆದ್ದರು, ನಮಸ್ಕಾರ ಮಾಡುವುದರಿಂದ ನಮ್ಮ ಅಹಂಕಾರ ಮಮಕಾದ ನಾಶವಾಗುತ್ತದೆ, ಅದು ವ್ಯಕ್ತಿತ್ವಕ್ಕೆ ಸೌಜನ್ಯದ ಮೆರುಗು ನೀಡುತ್ತದೆ ಎಂದು ನಮಸ್ಕಾರದ ಅರ್ಥ ವಿವರಣೆ ನೀಡಿದರು.
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ
ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಶ್ರೀಮತಿ ಗೀತಾ ಪ್ರಕಾಶ್, ಶೋಭಾ ರಮೇಶ್ ಅವರಿಂದ ವಿಶೇಷ ಭಜನೆ, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ದಿವ್ಯತ್ರಯರಿಗೆ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ
ಸತ್ಸಂಗ ಸಭೆಯಲ್ಲಿ ಪ್ರೇಮಾ, ದ್ರಾಕ್ಷಾಯಣಿ, ಅನುಸೂಯ, ರಾಘವೇಂದ್ರ, ಜಯಮ್ಮ, ದೇವಿರಮ್ಮ, ಸರಸ್ವತಿ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

