“ಉತ್ತಮ ಕಲಿಕೆ-ಉಜ್ವಲ ಭವಷ್ಯ”…..

ಒಳ್ಳೆತನವ ಕಲಿಕೆ ಶ್ರೇಷ್ಠತೆಯ ಸಿರಿಯು
ಬಾಳಿನಲಿ ಹಣ ಆಕರ್ಷಣೆಯ ಗಣಿಯು
ಅಕ್ಕರೆ ಹಸ್ತಾಕ್ಷರ ಭಾಷೆಯ ಬೆಳಕು
ಜ್ಞಾನಜ್ಯೋತಿ ಜಗದ ಬೆಳಕು
ಗುರು ಭೋದನೆ ಉತ್ತಮ ಮಾರ್ಗವು
ಅರಿವಿನ ವಿದ್ಯಯಿಂದ ಸುಗಮ ಮಾರ್ಗವು
ಕಷ್ಟದಲಿ ಕಲಿತು ಸಾಧನೆಯ ಗರಿ ಸಿರಿಯಲಿ
ಕಲಿತು ಗಳಿಸುವದು ಬಾಳ ಮೌಲ್ಯಗಳ ಅರಿವು
ಸಮಾನತೆಯ ಮನುಜ ಮತ ಸಾರಲು
ಕಲಿತ ಜ್ಞಾನ ನಾಡ ದೇಶ ಜನವಾಣಿಯು
ಸರ್ವರ ತಮ ಕಳೆದು ಮನವ ಬೆಳಗಲು
ಕಲಿಯುತ ಸೆಳೆಯೋಣ ಬೆಳೆಯೋಣ
ನವನವ ಜ್ಞಾನ ಅರಿತು ವಿಶ್ವದೆಲ್ಲೆಡೆ
ಬೆಳಗೋಣ
ಜಗದ ಜನಮನ ಗೆಲ್ಲೋಣ
ಸುಜ್ಞಾನಿಯಾಗೋಣ
ಉತ್ತಮ ಕಲಿಕೆ-ಉಜ್ವಲ ಭವಿಷ್ಯ
✍️ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸು ದೇವರ ಹಿಪ್ಪರಗಿ

