ಎ.ಕೆ ನಂದಿ ಹೈಸ್ಕೂಲ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು.

ಆಲಮೇಲ ಜೂ.01

ಪಟ್ಟಣದ ಎ.ಕೆ ನಂದಿ ಹೈಸ್ಕೂಲಿನ 2005-2006 ನೇ. ಸಾಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ದಿನಾಂಕ:-31/ 5/2026 ರಂದು ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅತಿ ಸಂಭ್ರಮ ಸಡಗರದಿಂದ ಜರುಗಿತು. ಬೆಳಿಗ್ಗೆ:- 09=00 ಗಂಟೆಗೆ ಸಕಲ ವಾದ್ಯ ವೈಭವ ಗಳೊಂದಿಗೆ ಹಾಗೂ ವಿವಿಧ ಕಲಾ ತಂಡಗಳಿಂದ. ವಿದ್ಯೆ ಕಲಿಸಿದ ಗುರುಗಳಿಗೆ ಮೆರವಣಿಗೆಯ ಮೂಲಕ ದೇವಿ ಗುಂಡಿಯಿಂದ ಮೇನ ಬಂಜಾರ ರೋಡ ಮೂಲಕ ಆಯ್.ಕೆ ರಾಯಲ್ ಪಂಕ್ಷನ್ ಹಾಲ್ ಗೆ ತಲುಪಿದ ನಂತರ ವಿದ್ಯೆ ಕಲಿಸಿದ ಗುರುಗಳಿಗೆ ಹೂ ಸುರುಮಳೆಯೊಂದಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಆತ್ಮೀಯವಾಗಿ ಬರಮಾಡಿ ಕೊಂಡರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ. ಶ್ರೀ ಷ.ಬ್ರ ಸಂಗನಬಸವ ಶಿವಾಚಾರ್ಯರು ಅರ್ಜುಣಗಿ ಹಿರೇಮಠ ಅಲಮೇಲ. ಪರಮ ಪೂಜ್ಯ ಶ್ರೀ ಶ್ರೀಶೈಲಯ್ಯ ಮಹಾಸ್ವಾಮಿಗಳು ಅಳ್ಳೂಳ್ಳಿ ಹಿರೇಮಠ ಆಲಮೇಲ. ಅಭಿನವ ವೈಜನಾಥ ಮಹಾರಾಜರು ಆಸಂಗಿಹಾಳ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

2005- 06 ನೇ. ಸಾಲಿನ ಎ.ಕೆ ನಂದಿ ಹೈಸ್ಕೂಲ್ ಶಿಕ್ಷಕರಾದ.ಶ್ರೀ ಜಿ.ಜಿ ಕಿಣಗಿ ನಿವೃತ್ತಿ ಶಿಕ್ಷಕರು. ಸಿ.ಕೆ ಸಿಂಪಿ ನಿವೃತ್ತಿ ಶಿಕ್ಷಕರು. ಶ್ರೀ ಎಸ್.ಎಸ್ ಬಿರಾದಾರ ನಿವೃತ್ತಿ ಶಿಕ್ಷಕರು. ಶ್ರೀ ಆರ್.ಎನ್ ಮಸಳಿ ಮುಖ್ಯೋಪಾಧ್ಯಾಯರು ಶ್ರೀ ಎನ್.ಎಸ್ ದೇವರಮನಿ ಪ್ರಾಂಶುಪಾಲರು. ಶ್ರೀಮತಿ ಎಂ ಎಸ್ ಬಬಲೇಶ್ವರ ಗುರು ಮಾತೆಯರು. ಎಸ್ ಜಿ ವಾಲಿ ಶಿಕ್ಷಕರು. ಎಸ್ ಎಸ್ ಮಹೇಂದ್ರಕರ ಶಿಕ್ಷಕರು. ಎಸ್ ಬಿ ಪಾಟೀಲ ಶಿಕ್ಷಕರು. ಸಿ ಎಂ ಬಂಡಗಾರ ಮುಖ್ಯೋಪಾಧ್ಯಾಯರು. ವಿ ಎಸ್ ತೇರದಾಳ ಶಿಕ್ಷಕರು.

ಶ್ರೀಮತಿ ಕೆ. ವಿ. ಹಾಬಾಳ ಗುರು ಮಾತೆಯರು. ಶ್ರೀ ಎಂ ಆರ್ ಮಾಹಾಜನ ಶಿಕ್ಷಕರು. ಶ್ರೀ ಎನ್‌ ಜಿ ಮೊಕಾಶಿ ಎಸ್.ಡಿ.ಎಮ್.ಸಿ ಟ್ಯೂಶನ್ ಶಿಕ್ಷಕರಾದ ಶ್ರೀ ಎಂ ಜಿ ಹಿರೇಮಠ ಉಪನ್ಯಾಸಕರು. ಎಸ್.ಎಸ್ ಹಳೆಮನಿ ಪ್ರಾಂಶುಪಾಲರು. ಡಿ ಎಂ ಕೊಟ್ಟಲಗಿ (ಹಳೂರ) ಶಿಕ್ಷಕರು. ಶ್ರೀ ಎಸ್ ಎಸ್ ಮಠಪತಿ ಶಿಕ್ಷಕರು. ಭಾಗವಹಿಸಿದ ಶಿಕ್ಷಕರಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಗುರು ವಂದನಾ ಹಾಗೂ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಅಗಲಿದ ಶಿಕ್ಷಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಭಕ್ತಿಯ ನಮನ ಸಲ್ಲಿಸಿದರು ಕಾರ್ಯಕ್ರಮದಲ್ಲಿ ಶ್ರೀಶೈಲ್ ಮಠಪತಿ ಶಿಕ್ಷಕರು ಮಾತನಾಡಿದರು. ಸೃಷ್ಟಿಕರ್ತ ಪರಮಾತ್ಮನ ಜನ್ಮ ನೀಡಿದ ಪರಮಾತ್ಮನ ರುಣಬಾರದ ಮೇಲೆ ಈ ಪರಮಾತ್ಮನ ರುಣವಾನ್ನು ಮುಟ್ಟಿಸಬೇಕು ಜನ್ಮ ಕೊಟ್ಟ ತಂದೆ ತಾಯಿಯ ರೂಣವನ್ನು ತೀರಿಸಬೇಕು ಪ್ರಕೃತಿ ಇದೆ ನಮಗೆ ಹೆಲ್ಪ್ ಮಾಡುತ್ತದೆ ರೂಣವನ್ನು ತೀರಿಸಬೇಕು ಮತ್ತು ನಮಗೆ ತೊಂದರೆ ಇದ್ದಾಗ ಬಡತನ ಕಲಿಸಿದ ಪಾಠ ಯಾವ ಯುನಿವರ್ಸಿಟಿ ಯಲ್ಲಿ ಕೂಡ ಸಿಗುವುದಿಲ್ಲ. ಬಡತನ ಎಂಬುದು ಅತಿ ಉತ್ತಮವಾಗಿ ಬೆಳೆಸಲಿಕ್ಕೆ ಬಡತನದಲ್ಲಿ ಸಮಾಜದಲ್ಲಿ ಯಾರಾದರೂ ಹೆಲ್ಪ್ ಮಾಡಿದರೆ ಸಮಾಜದ ರೂಣವನ್ನು ತೀರಿಸಬೇಕು ನಿಮ್ಮನ್ನು ತಿದ್ದಿ ತಿಡಿ ಬದುಕಿಗೆ ಮೊಲೆದ್ದಾರಕ ಸೂತ್ರದ ದಾರ ಕಟ್ಟಿ ಬದುಕು ಆ ಕಡೆ ಈ ಕಡೆ ಹೋಗದಂತೆ ಸೂತ್ರವಾದ ಬದುಕು ಕಟ್ಟಿಕೊಳ್ಳಲು ದಾರಿ ದೀಪವಾಗಿ ನಿಮ್ಮ ಬೆನ್ನೆಲುಬುವಾಗಿ ಶ್ರೇಷ್ಠ ಸಂತನ ಸಾಲದಾರ ಯಾರಾದರ ಇದ್ದರೆ ಈ ವೇದಿಕೆ ಮೇಲಿದ್ದ ಗುರು ಬಳಗದ ರೂಣವನ್ನು ಇವತ್ತು ನೀವೆಲ್ಲರೂ ತೀರಿಸಿರಿ ಇವತ್ತು ನಮ್ಮ ಗುರು ಬಳಗಕ್ಕೆ ಬಹಳ ಸಂತೋಷವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಹಲವು ಮಠಾಧೀಶರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಮಾತನಾಡಿದರು ನಂತರ ಹಳೆ ವಿದ್ಯಾರ್ಥಿಗಳು ಗ್ರೂಪ ಫೋಟೋ ದೊಂದಿಗೆ ಸಂತೋಷ ಸಂಭ್ರಮ ಹಂಚಿಕೊಂಡರು ಸಂಗೀತ ಸೇವೆ ಶ್ರೀ ರೇಣುಕಾಚಾರ್ಯರು ಹಿರೇಮಠ ಸಂಗೀತ ಶಿಕ್ಷಕರು ಹಾಗೂ ಸಂಗಡಿಗರು ಅಲಮೇಲ ಇವರು ನಡೆಸಿ ಕೊಟ್ಟರು.

ಸ್ವಾಗತ ಶ್ರೀ ವಿನಾಯಕ ಕಲಶೆಟ್ಟಿ ಹಾಗೂ ಶಿವು ಗೂರಕಾರನಿರೂಪಣೆ ವಿದ್ಯಾರ್ಥಿ ಬಳಗದಿಂದ ಅಚ್ಚುಕಟ್ಟಾಗಿ ನಡೆಸಿ ಕೊಟ್ಟರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಹಿರೇಮಠ.ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button