ಅಕ್ಷರ ಬ್ರಹ್ಮ ಓ ಗುರುವೇ…
ಅಕ್ಷರ ಬ್ರಹ್ಮ ಓ ಗುರುವೇ…
ಅಕ್ಷರ ಕಲಿಸಿದ ವಿದ್ಯಾರ್ಥಿಯ ಬದುಕು ತಿದ್ದಿರುವ
ಸನ್ಮಾರ್ಗ ತೋರಿಸಿದ ಸ್ವರ್ಗ ಕರುಣಿಸಿರುವ
ಜ್ಞಾನದ ತುತ್ತು ಉಣಿಸಿದ ಅಜ್ಞಾನ ತೊಲಗಿಸಿರುವ
ಕೈ ಹಿಡಿದು ನಡೆಸಿದ ಮನದ ಭಯ ಓಡಿಸಿರುವ
ಭೂಮಿಯ ಮೇಲಿನ ಭಗವಂತ ಓ ಗುರುವೇ….
ಸುಳ್ಳನು ಹೇಳದ ಸತ್ಯದ ಬೆಲೆ ತಿಳಿಸಿಕೊಟ್ಟ
ಪರೀಕ್ಷಾ ಭಯ ನಿವಾರಿಸಿದ ಉತ್ತಮ ಅಂಕ ಗಳಿಸಿಕೊಟ್ಟ
ಚಿತ್ರವ ಬಿಡಿಸಿದ ಬದುಕಿನ ಚಿತ್ರ ಅರ್ಥವಾಗಿಸಿಕೊಟ್ಟ
ಲೆಕ್ಕವ ತಿಳಿಸಿದ ಲೆಕ್ಕಕ್ಕೆ ಸಿಗದ ಮಟ್ಟಕ್ಕೆ ಬೆಳೆಸಿಬಿಟ್ಟ
ಎರಡನೇ ತಾಯಿಯ ಸ್ವರೂಪ ಓ ಗುರುವೇ…
ದೇಶ ಸುತ್ತಿದ ಕೋಶ ಓದಿ ಬುದ್ದಿಯ ಹೇಳಿದ
ವ್ಯಾಯಾಮ ಮಾಡಿಸಿದ ದೇಹವನ್ನ ಸದೃಢಗೊಳಿಸಿದ
ಪ್ರಾರ್ಥನೆ ಮಾಡಿಸಿದ ಮನಸಿನ ಮಲೀನತೆ ಶುಭ್ರಗೊಳಿಸಿದ
ತಪ್ಪಾದಾಗ ದಂಡಿಸಿದ ಯಾರ ಬಳಿ ಕೈ ಚಾಚಾದಂತೆ ಬೆಳೆಸಿದ
ಪ್ರತಿ ವಿದ್ಯಾರ್ಥಿಯ ಭವಿಷ್ಯದ ರೂವಾರಿ ಓ ಗುರುವೇ…..
ಒಮ್ಮೊಮ್ಮೆ ತಂದೆಯಾದ ಪ್ರತಿ ಜವಾಬ್ದಾರಿಯ ತಿಳಿಸಿದ
ಒಮ್ಮೊಮ್ಮೆ ತಾಯಿಯಾದ ಕರುಣೆಯ ಹೃದಯ ಆವರಿಸಿದ
ಒಮ್ಮೊಮ್ಮೆ ಸಂಬಂಧಿಯಾದ ನನ್ನೆಲ್ಲಾ ಕಷ್ಟಕ್ಕೆ ಹೆಗಲಾದ
ಒಮ್ಮೊಮ್ಮೆ ಗೆಳೆಯನಾದ ಸದಾ ಜೊತೆಗಿದ್ದು ಬೆಂಬಲಿಸಿದ
ಜ್ಞಾನ ದೇಗುಲದ ಜ್ಞಾನ ಭಂಡಾರ ಓ ಗುರುವೇ..
ರಚನೆ:ಶ್ರೀ ಮುತ್ತು.ಯ.ವಡ್ಡರ