ನಿನ್ನ ನೆನಪು…..

ಆಗುತಿದೆ ಸದಾ ನಿನ್ನ ನೆನಪು
ಪ್ರೀತಿಗೆ ಕೊಟ್ಟೆ ನೀನು ಹೊಳಪು
ಕತ್ತಲಲೂ ಮಿಂಚುತಿದೆ ಪ್ರೀತಿಯ ಬಿಳುಪು
ಮಗುವಂತೆ ನನ್ನ ಪ್ರೀತಿಸುವ ಪಾಪು
ಗೆಳತಿ ನಿನ್ನ ಪ್ರೀತಿಗೆ ಶರಣಾದೇನು
ನಿನ್ನ ಮಮತೆಗೆ ನಾನು ಋಣಿಯಾದೇನು
ಬಿಟ್ಟಿರಲಾರದಷ್ಟು ಪ್ರೀತಿಸಿ ನಿನಗೆ
ಕಾಯುತಿರುವೆನು
ಒಮ್ಮೆ ಬಂದು ಭೇಟಿಯಾಗು ಪರಿ
ತಪಿಸುತ್ತಿರುವೆನು
ನನ್ನ ಹೃದಯದ ಅರಮನೆಯ
ಯಜಮಾನಿಯೇ
ನನ್ನ ಉಸಿರಿನ ಬಡಿತದ ರೂವಾರಿಯೇ
ಯಾಕಿಷ್ಟು ಕಾಡಿಸುತ್ತಿರುವೆ ಒಲವಿನ ಗೆಳತಿಯೇ
ನನ್ನ ಬದುಕಿನ ಪ್ರೀತಿಯ ಒಡತಿಯೇ
ನಿನ್ನ ನೆನಪು ಮತ್ತೆ ನೆನಪಾಗಿದೆ
ನಿನ್ನ ಪ್ರೀತಿ ಮತ್ತೆ ಚಿಗುರಿದೆ
ನಿನ್ನ ನಗು ನನ್ನಲ್ಲಿ ಕಾಣಿಸಿದೆ
ನಿನ್ನ ಬರುವಿಕೆಗೆ ಮನಸು ಚಡಪಡಿಸಿದೆ
ಶ್ರೀ ಮುತ್ತು. ಯ. ವಡ್ಡರ
ಬಾಗಲಕೋಟ