ಬಹು ವಿಜೃಂಭಣೆಯಿಂದ ಜರುಗಿದ ಇಜೇರಿ ಗ್ರಾಮದ ಆರಾಧ್ಯ ದೈವ – ಶ್ರೀ ಜಟ್ಟಿಂಗರಾಯ ಮುತ್ಯಾನವರ ಪಲ್ಲಕ್ಕಿ ಉತ್ಸವ.
ಇಜೇರಿ ಮಾ.30

ಯುಗಾದಿ ಹಬ್ಬದ ಪ್ರಯುಕ್ತ ವಿಶೇಷವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಇಜೇರಿ ಗ್ರಾಮದ ಶ್ರೀ ಜಟ್ಟಿಂಗೇಶ್ವರ ಪಲ್ಲಕ್ಕಿ ಉತ್ಸವದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಜರುಗಿಸಲಾಯಿತು. ಜಟ್ಟಿಂಗರಾಯೇಶ್ವರ ಪಟ್ಟದ ಪೂಜ್ಯರಾದ ಶ್ರೀ ಬಸವರಾಜ್ ಮುತ್ಯ ಹಾಗೂ ಶ್ರೀ ಯಲ್ಲಾಲಿಂಗ ಮುತ್ಯನವರ ಸಮ್ಮುಖದಲ್ಲಿ ನಡೆದ ಪಲ್ಲಕ್ಕಿ ಮಹೋತ್ಸವದಲ್ಲಿ ಇಜೇರಿ ಗ್ರಾಮದ ಹಿರಿಯರು ಹಾಗೂ ಯುವಕರಾದ ರಮೇಶ ಮೇಲಗೀರಿ, ಬೀರಪ್ಪ ಪೂಜಾರಿ, ಈರಣ್ಣ ತಳವಾರ್, ಸುಭಾಷ್ ಪೂಜಾರಿ, ನಿಂಗಣ್ಣ ಪೂಜಾರಿ, ಗುಂಡೇಶ್ ಕಿಲೇದಮನಿ ಇನ್ನಿತರ ಯುವಕರು ಭಾಗವಹಿಸಿದ್ದರು.