ಹತ್ತಿಯಲ್ಲಿ ಸಸ್ಯಗೆ ಹೇನು ಬಾಧೆ, ಆರಂಭಿಕ ಅಂತದದಲ್ಲೇ ನಿಯಂತ್ರಿಸಿ – ಅನಿಲ್ ದೇವ ದಶವಂತ.
ಆಲಮೇಲ ಆ.07


ಈ ವರ್ಷದ ಮುಂಗಾರು ಹಂಗಾಮು ರೈತರಿಗೆ ಆಶಾದಾಯಕ ವಾಗಿಲ್ಲದಿದ್ದರೂ ಸಹ ರೈತರು ಬಿತ್ತನೆ ಕೈಗೊಂಡಿದ್ದಾರೆ. ಜೂನ ತಿಂಗಳ ಮಳೆಯ ಕೊರತೆ ಹೊರತಾಗಿಯೂ ಸಹ ಜುಲೈ ತಿಂಗಳಿನ ಮಳೆಯು ರೈತನಿಗೆ ಅನುಕೂಲವಾಗಿತ್ತು. ಆದರೆ ಈ ಹವಾಮಾನ ಅನುಕೂಲದ ಜೊತೆಗೆ ಹತ್ತಿಯಲ್ಲಿ ಸಸ್ಯ ಹೇನು ಭಾಧೆ ಹೆಚ್ಚಾಗುತ್ತದೆ. ಹತ್ತಿ ಬೆಳೆಯಲ್ಲಿ ರಸ ಹೀರುವ ಕೀಟಗಳ ಪೈಕಿ ಸಸ್ಯ ಹೇನು ಪ್ರಮುಖ ಕೀಟವಾಗಿದೆ. ಹತ್ತಿ ಬೆಳೆಯ ಆರಂಭಿಕ ಹಂತದಲೂ ಕಂಡುಬರುವ ಈ ಕೀಟವು ಅನುಕೂಲಕರ ಹವಾಮಾನ ಪರಿಸ್ಥಿತಿಯಲ್ಲಿ ತ್ವರಿತವಾಗಿ ವೃದ್ದಿಯಾಗುತ್ತದೆ. ಸಸ್ಯ ಹೇನು ಗಿಡದ ರಸವನ್ನು ಹಿ ಹೀರುವುದರಿಂದ ಎಲೆಗಳ ಬೆಳವಣಿಗೆ ಕುಂಠಿತ ವಾಗುವುದರಲ್ಲದೆ. ತೀವ್ರ ಭಾಧೆಯ ಸಂದರ್ಭದಲ್ಲಿ ಹತ್ತಿ ಬೆಳೆಯ ಇಳುವರಿಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ರೈತರು ಆರಂಭಿಕ ಹಂತದಲ್ಲಿ ಯೇ ಸಸ್ಯ ಹೇನಿನ ಭಾಧೆಯನ್ನು ಗುರುತಿಸಿ ಸೂಕ್ತ ನಿರ್ವಹಣಾ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಸಸ್ಯ ಹೇನು ಗಾತ್ರದಲ್ಲಿ ಬಹಳ ಸಣ್ಣದಾಗಿದ್ದು. ಹಸಿರು ಹಳದಿ ಅಥವಾ ಕಪ್ಪು ಬಣ್ಣದಲ್ಲಿ ಕಂಡು ಬರುತ್ತದೆ. ಇವು ಸಾಮಾನ್ಯವಾಗಿ ಹತ್ತಿ ಗಿಡದ ಎಳಯ ಚಿಗುರುಗಳು. ಎಲೆಗಳ ಕೆಳಭಾಗ ಮತ್ತು ಮೃದುವಾದ ಭಾಗಗಳಲ್ಲಿ ಗುಂಪು ಗುಂಪಾಗಿ ಕಂಡು ಬರುತ್ತವೆ. ಸಸ್ಯ ಹೇನು ಎಲೆಗಳಿಂದ ರಸ ಹೀರುವುದರಿಂದ ಭಾಧಿತೆ ಎಲೆಗಳು ಮುದುಡುವುದು. ಸುಕ್ಕುಗಟ್ಟುವುದು ಮತ್ತು ಹಳದಿಯಾಗುವುದು ಕಂಡು ಬರುತ್ತದೆ.
ಗಿಡದ ಬೆಳವಣಿಗೆ ಕುಂಠಿತ ವಾಗಬಹುದು. ಕೀಟವು ಹೊರ ಹಾಕುವ ಜಿಗುಟಾದ ಜೇನುಸ್ರಾವದ ಮೇಲೆ ಕಪ್ಪು ಬಣ್ಣದ ಸೂಟಿ ಮೋಲ್ಲ್ ಶಿಲೀಂದ್ರ ಬೆಳೆಯುವುದರಿಂದ ಎಲೆಗಳ ಮೇಲೆ ಕಪ್ಪು ಪದರ ಕಾಣಿಸಿ ಕೊಳ್ಳಬಹುದು. ಸಸ್ಯ ಹೇನಿನ ಭಾಧೆಯನ್ನು ನಿಯಂತ್ರಿಸಲು ರೈತರು ಮೊದಲು ಹೊಲವನ್ನು ನಿಯಮಿತವಾಗಿ ಪರಿಶೀಲಿಸಬೇಕು.
ವಿಶೇಷವಾಗಿ ಎಲೆಗಳ ಕಳಭಾಗ ಮತ್ತು ಎಳಯ ಚಿಗುರುಗಳನ್ನು ಗಮನಿಸಬೇಕು. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಹಾಗೂ ಇತರೆ ಸಾರಜನಕ ಗೊಬ್ಬರಗಳನ್ನು ಬಳಸುವುದನ್ನು ತಪ್ಪಿಸಬೇಕು ಹಾಗೂ ಸಮತೋಲಿತ ಪೋಷಕಾಂಶ ನಿರ್ವಹಣೆ ಮಾಡಕಬೇಕು. ಹೊಲ ಮತ್ತು ಹೊಲದ ಸುತ್ತಮುತ್ತಲಿನ ಕಳೆಗಗಳನ್ನು ನಿಯಂತ್ರಿಸಬೇಕು.

ಸಸ್ಯ ಹೇನನ್ನು ನಿಯಂತ್ರಿಸುವ ಲೇಡಿಬರ್ಡ್ ಬೀಟಲ್ ಸಿರ್ಪಿಡ್ ಲಾರ್ವಾ ಹಾಗೂ ಕೃಸೋಪಾ ಮುಂತಾದ ಉಪಾಕಾರಿ ಕೀಟಗಳನ್ನು ಸುರಕ್ಷಿಸಬೇಕು. ಕೀಟದ ಬಾಧೆ ಕಡಿಮೆ ಇದ್ದಾಗ ಅನಗತ್ಯವಾಗಿ ಕೀಟನಾಶಕ ಸಿಂಪಡಿಸುವುದನ್ನು ತಪ್ಪಿಸಬೇಕು.
ಸಸ್ಯ ಹೇನಿನ ನಿಯಂತ್ರಿಣಕ್ಯಾಗಿ ಪ್ರತಿ ಲೀಟರ್ ನೀರಿಗೆ 0.20 ಗ್ರಾಮ್ ಡೖಗೆಟೋಪೂರಾನ್ 20% ಎಸ್ಟಿ ಆಥವಾ 1.0 ಗ್ರಾಮ್ ಡೖಪಂಥಿಯುರಾನಾ 50 % ಡಬ್ಬೂಪಿ ಅಥವಾ ಪೋನಿಕ್ ಅಮೖಡ್ 50 % ಡಬ್ಲೂಪಿ ಆಥವಾ ಕೀಟ ನಾಶಕವನ್ನು ಬಳಸ ಬಹುದಾಗಿದೆ. ಕೀಟ ನಾಶಕ ಸಿಂಪಡಿಸುವಾಗ ಕೈಗೆವಸು. ಮುಖಗವಸು ಸೇರಿದಂತೆ ಅಗತ್ಯ ಸುರಕ್ಷತಾ ಸಾಧನಗಳನ್ನು ಬಳಸಬೇಕು.
ರೈತರಿಗೆ ಮುಖ್ಯ ಸಂದೇಶ:-
ಕೀಟ ಕಂಡ ತಕ್ಷಣ ಔಷಧಿ ಸಿಂಪಡಿಸ ಬೇಡಿ ಮೊದಲು ಬಾಧೆಯ ಪ್ರಮಾಣವನ್ನು ಪರಿಶೀಲಿಸಿ. ಆರ್ಥಿಕ ನಷ್ಟದ ಮಟ್ಟ ತಲುಪಿದಾಗ ಮಾತ್ರ ಸೂಕ್ತ ಈಟನಾಶಕ ಬೆಳೆಸಿ. ಸಸ್ಯ ಹೇನಿನ ಸಮರ್ಥ ನಿರ್ವಹಣೆಗೆ ನಿಯಮಿತ ಹೊಲ ವೀಕ್ಷಣೆ. ಸಮತೋಲಿತ ಗೊಬ್ಬರ ಬಳಕೆ. ಕಳೆ ನಿಯಂತ್ರಣ.
ನೈಸರ್ಗಿಕ ಶತ್ರುಗಳ ಸುರಕ್ಷಣೆ ಮತ್ತು ಅಗತ್ಯವಿದ್ದಾಗ ಮಾತ್ರ ಅನುಮೋದಿತ ಕೀಟನಾಶಕ ಬಳಕೆ ಒಳಗೊಂಡ ಸಮಗ್ರ ಕೀಟ ನಿರ್ವಹಣಾ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ಇದರಿಂದ ಹತ್ತಿ ಬೆಳೆಯ ಆರೋಗ್ಯವನ್ನು ರೈತರು ಅಳವಡಿಸಿ ಕೊಳ್ಳಬೇಕು.
ಇದರಿಂದ ಹತ್ತಿ ಬೆಳೆಯ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಉತ್ವಾದನಾ ವೆಚ್ಚವನ್ನು ನಿಯಂತ್ರಿಸಿ ಉತ್ತಮ ಇಳು ವರಿ ಪಡೆಯಲು ಸಹಾಯ ವಾಗುತ್ತದೆ ಎಂದು ಅಲಮೇಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾದ ಅನಿಲ ದೇವ ದಶವಂತ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ
