ದೇವರ ಎತ್ತುಗಳ ನೆಲೆ ಗೋಯಜ್ಞ- ಸಂರಕ್ಷಣಾ ತಾಣ – ಡಾ, ವೈ.ರಾಜಾರಾಮ್ ಗುರುಗಳು.
ಚಳ್ಳಕೆರೆ ಮಾ.09

ದೇವರ ಎತ್ತುಗಳ ನೆಲೆ ಗೋಯಜ್ಞ ಮತ್ತು ಗೋವುಗಳ ಸಂರಕ್ಷಣಾ ತಾಣವಾಗಿದೆ ಎಂದು ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ, ವೈ.ರಾಜಾರಾಮ್ ಗುರುಗಳು ಅಭಿಪ್ರಾಯ ಪಟ್ಟರು.
ನಗರದ ಹೊರ ವಲಯದ ಶ್ರೀಜಗಲೂರಜ್ಜನ ದೇವಸ್ಥಾನದ ಸಮೀಪದಲ್ಲಿರುವ ನನ್ನಿವಾಳದ ಕಟ್ಟೆಮನೆಗೆ ಸೇರಿದ ಮುತ್ತಯ್ಯಗಳ ದೇವರ ಎತ್ತುಗಳಿಗಾಗಿ ದೇವರ ಎತ್ತುಗಳ ಸಂರಕ್ಷಣಾ ಸಮಿತಿಯಿಂದ ನಿರ್ಮಿಸಿರುವ ಎರಡು ಶೆಡ್ ಗಳನ್ನು ಗೋ ಪೂಜೆ ನೆರವೇರಿಸಿ ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ. ಇವುಗಳೇ ಸಾಕ್ಷಾತ್ ದೇವರು ಎಂದು ಆರಾಧಿಸುವ ನನ್ನಿವಾಳದ ಕಟ್ಟೆಮನೆಗೆ ಸೇರಿದ ಮುತ್ತಯ್ಯಗಳು ಮತ್ತು ಕಿಲಾರಿಗಳ ಸೇವೆ ನಿಜಕ್ಕೂ ಶ್ಲಾಘನೀಯ, ಗೋವಿನ ಉತ್ಪನ್ನಗಳಿಗೆ ಅಪಾರ ಬೇಡಿಕೆಯಿದ್ದು ಇವುಗಳನ್ನು ತಯಾರಿಸಿ ಮಾರಾಟ ಮಾಡಿ ಸ್ವಾವಲಂಬಿ ಬದುಕು ಕಟ್ಟಿ ಕೊಳ್ಳಬಹುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಕಾರ್ಯಗಳು ಸಮಿತಿಯ ವತಿಯಿಂದ ನಡೆಯಲಿ ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ತಾಲೂಕ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಕೆ.ಎಂ ಯತೀಶ್ ಅವರು ದೇವರ ಎತ್ತುಗಳ ಸಂರಕ್ಷಣಾ ಸಮಿತಿಯು ನಿರ್ಮಿಸಿರುವ ಶೆಡ್ ಗಳ ನಿರ್ಮಾಣ ಕಾರ್ಯ ಸಾರ್ಥಕ ಸೇವೆಯಾಗಿದ್ದು ಇದನ್ನು ಎಲ್ಲರೂ ಸೇರಿ ಹೆಚ್ಚು ಪ್ರಚಾರ ಮಾಡಬೇಕು.
ಇಂದು ಅವ್ಯಾಹತವಾಗಿ ನಡೆಯುತ್ತಿರುವ ಗೋಹತ್ಯೆಯ ಪ್ರಕರಣಗಳನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಭೇದಿಸಿ ತಡೆ ಗಟ್ಟುವಲ್ಲಿ ಪ್ರಯತ್ನ ಮಾಡಲಾಗುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೇವರ ಎತ್ತುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶುಭಾ ಸೋಮಶೇಖರ್, ಎಂ.ರಾಮಚಂದ್ರಪ್ಪ,ಮಧುಮತಿ, ಸರಸ್ವತಿ ಪಾಂಡು, ಮಹೇಶ್ ನಗರಂಗೆರೆ, ಸಿದ್ದೇಶ್ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ವಿಶೇಷ ಭಜನೆಯನ್ನು ಶ್ರೀರಾಧಾ ಮಾಧವ ಮಹಿಳಾ ಭಕ್ತ ಮಂಡಳಿಯವರು ನಡೆಸಿ ಕೊಟ್ಟರು.

ಯತೀಶ್ ಎಂ ಸಿದ್ದಾಪುರ ಅವರು ಕಾರ್ಯಕ್ರಮವನ್ನು ಸಂಘಟಿಸಿ ನಿರೂಪಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ಗೊಂಚಿಗಾರ್ ಪಾಪಯ್ಯ, ಪಾಪಯ್ಯ, ಪದ್ಮ ಗೋವಿಂದರಾಜು, ಶ್ರೀದೇವಿ ಶ್ರೀನಿವಾಸ್, ಎಚ್ ಲಕ್ಷ್ಮೀದೇವಮ್ಮ, ರುದ್ರಪ್ಪ, ನಾಗರಾಜ್, ರಾಘವೇಂದ್ರ, ಪ್ರೇಮಲೀಲಾ, ಸುಧಾಮಣಿ, ಯತೀಶ್ ಎಂ ಸಿದ್ದಾಪುರ, ವಿಶಾಲಾಕ್ಷಿ ಪುಟ್ಟಣ್ಣ, ಗೀತಾ, ಯಶೋಧಾ, ರಾಜೇಶ್ವರಿ, ಶಾರದಾ, ಬಾಬುರೆಡ್ಡಿ, ಗಂಗಾಧರಶೆಟ್ಟಿ, ದೀಪಾ, ಭಾಗ್ಯ, ಪರಿಮಳ, ಮಲ್ಲಿಕಾರ್ಜುನ ಸೇರಿದಂತೆ ದೇವರ ಎತ್ತುಗಳ ಆರಾಧಕರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

