ಕಾಲೇಜು ಸಂಸತ್ ಚುನಾವಣೆ – ವಿದ್ಯಾರ್ಥಿಗಳ ಸಂಭ್ರಮ.

ಕೂಡ್ಲಿಗಿ ಆ.04

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿ ಬರುವ ಸ್ಥಳೀಯ ಹಿರೇಮಠ ವಿದ್ಯಾಪೀಠ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕಾಲೇಜು ಸಂಸತ್ ಚುನಾವಣೆ ನಡೆಯಿತು.

ವಿದ್ಯಾರ್ಥಿಗಳು ಸಾಲು ಸಾಲಾಗಿ ಶಿಸ್ತಿನಿಂದ ತಮ್ಮ ಗುರುತಿನ ಚೀಟಿಯನ್ನು ತೋರಿಸಿ ತಮಗೆ ಸೂಕ್ತ ಎನಿಸುವ ವಿದ್ಯಾರ್ಥಿ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು.

ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್ ಚುನಾವಣೆಗೆ ಹೇಗೆ ಮತ ಚಲಾಯಿಸಲಾಗುತ್ತದೆಯೋ ಅದೇ ಮಾದರಿಯಲ್ಲಿಯೇ ಚುನಾವಣೆಯನ್ನು ಸಿದ್ಧ ಗೊಳಿಸಲಾಗಿತ್ತು.

ನಾಮಪತ್ರ ಸಲ್ಲಿಕೆ, ವಾಪಸು ಪಡೆಯುವಿಕೆ, ಚುನಾವಣಾ ಪ್ರಚಾರ ಭಾಷಣ, ಮತದಾನ, ವಿಜೇತ ಅಭ್ಯರ್ಥಿಗಳ ಘೋಷಣೆ, ಪ್ರಮಾಣ ವಚನ ಸ್ವೀಕಾರವನ್ನು ಏರ್ಪಡಿಸಲಾಗಿತ್ತು.

ವಿದ್ಯಾರ್ಥಿ ಅಭ್ಯರ್ಥಿಗಳ ಪಟ್ಟಿ, ಮತದಾನದ ಅಂಕಣ, ಮತ ಪೆಟ್ಟಿಗೆ, ಮತ ಚಲಾವಣೆಯ ನಂತರ ತಮ್ಮ ಫೋಟೊ ಶೂಟ್ ಎಲ್ಲವನ್ನೂ ಅಚ್ಚುಕಟ್ಟಾಗಿ ಸಿದ್ಧ ಗೊಳಿಸಲಾಗಿತ್ತು.

ಚುನಾವಣೆಯನ್ನು ಕಾರ್ಯರೂಪಕ್ಕೆ ತಂದವರು ಪ್ರಾಚಾರ್ಯರಾದ ಸಿದ್ಧರಾಮ ಹಿರೇಮಠ ಹಾಗೂ ಬೋಧಕೇತರ ಸಿಬ್ಬಂದಿಯವರಾದ ಕೆ.ಎಚ್.ಎಂ.ವೀರೇಶ್. ಚುನಾವಣೆಯ ಮೇಲುಸ್ತುವಾರಿಯನ್ನು ದೈಹಿಕ ಶಿಕ್ಷಣ ಉಪನ್ಯಾಸಕ ಸತೀಶ್ ಕಾಟಣ್ಣನವರ್ ವಹಿಸಿದ್ದರು.

ಚುನಾವಣೆಯ ಮತಗಟ್ಟೆ ಅಧಿಕಾರಿಗಳಾಗಿ ಉಪನ್ಯಾಸಕರಾದ ಸಿದ್ದನಗೌಡ, ಸಹಾಯಕ ಅಧಿಕಾರಿಗಳಾಗಿ ಕು.ಸರಳಾ, ಕೆಂಗಪ್ಪ, ಶ್ರಾವಣಿ, ರಂಗಮ್ಮ, ರಾಘವೇಂದ್ರ, ನಾಗೇಶ್, ಸಿಂಧು ನಿರ್ವಹಿಸಿದರು. ಸೋಮವಾರ ವಿಜೇತ ಅಭ್ಯರ್ಥಿಗಳ ಘೋಷಣೆ ಹಾಗೂ ಪ್ರಮಾಣ ವಚನ ಕಾರ್ಯಕ್ರಮವನ್ನು ನಡೆಯಿತು.

ಕಾಲೇಜು ಚುನಾವಣೆಯಲ್ಲಿ ವಿಜೇತರಾದವರಿಗೆ ವಿವಿಧ ಖಾತೆಗಳನ್ನು ಹಂಚಲಾಯಿತು. ಕಾಲೇಜು ಪ್ರಧಾನ ಕಾರ್ಯದರ್ಶಿ : ಗುರುಪ್ರಸಾದ್. ದ್ವಿತೀಯ ಪಿಯುಸಿ, ಸಹ ಕಾರ್ಯದರ್ಶಿಗಳು : ನಾಗರಾಜ್. ದ್ವಿತೀಯ ಪಿಯುಸಿ, ವೆಂಕಟೇಶ. ಪ್ರಥಮ ಪಿಯುಸಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ : ಕೊಟ್ರಮ್ಮ ದ್ವಿತೀಯ ಪಿಯುಸಿ, ಸಹ ಕಾರ್ಯದರ್ಶಿ : ಅರ್ಚನ.ಜಿ ಪ್ರಥಮ ಪಿಯುಸಿ, ಆರೋಗ್ಯ ಕಾರ್ಯದರ್ಶಿ : ಪೂಜಾ ದ್ವಿತೀಯ ಪಿಯುಸಿ, ಸಹ ಕಾರ್ಯದರ್ಶಿ : ಐಶಬಾನು ಪ್ರಥಮ ಪಿಯುಸಿ, ಶಿಸ್ತು ಮತ್ತು ನಡತೆ ಕಾರ್ಯದರ್ಶಿ : ನಿವೇದಿತಾ ದ್ವಿತೀಯ ಪಿಯುಸಿ, ಸಹ ಕಾರ್ಯದರ್ಶಿ : ಪಲ್ಲವಿ ಪ್ರಥಮ ಪಿಯುಸಿ, ಪರೀಕ್ಷಾ ಕಾರ್ಯದರ್ಶಿ : ಛಾಯಾಕುಮಾರಿ ದ್ವಿತೀಯ ಪಿಯುಸಿ, ಸಹ ಕಾರ್ಯದರ್ಶಿ : ವರಲಕ್ಷ್ಮಿ ಪ್ರಥಮ ಪಿಯುಸಿ ಹಣಕಾಸು ಕಾರ್ಯದರ್ಶಿ : ಕೀರ್ತಿ ದ್ವಿತೀಯ ಪಿಯುಸಿ, ಸಹ ಕಾರ್ಯದರ್ಶಿ : ಮನೋಹರ ಆಚಾರಿ ಪ್ರಥಮ ಪಿಯುಸಿ, ಕ್ರೀಡಾ ಕಾರ್ಯದರ್ಶಿ : ಕರಿಬಸಮ್ಮ ದ್ವಿತೀಯ ಪಿಯುಸಿ, ಸಹ ಕಾರ್ಯದರ್ಶಿಗಳು : ಶಿವಪ್ರಸಾದ್ ದ್ವಿತೀಯ ಪಿಯುಸಿ, ನಾಗೇಶ್ ಪ್ರಥಮ ಪಿಯುಸಿ ಈ ರೀತಿಯ ಆಯ್ಕೆ ಪ್ರಕ್ರಿಯೆಗಳನ್ನು ಸಂವಿಧಾನ ಬದ್ಧವಾಗಿ ಅತ್ಯಂತ ಶಿಸ್ತಿನಿಂದ ಜರುಗಿತು ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ ಸಾಲುಮನಿ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button