ಶರಣಾಗತ ಭಕ್ತರ ಸಂಕಲ್ಪವನ್ನು ಭಗವಂತ ಈಡೇರಿಸುತ್ತಾನೆ – ಪುಷ್ಪಲತಾ ವಿಜಯ್.

ಚಳ್ಳಕೆರೆ ಆ.04

ಶರಣಾಗತ ಭಕ್ತರ ಸಂಕಲ್ಪವನ್ನು ಭಗವಂತ ನೆರವೇರಿಸಿ ತನ್ನ ಭಕ್ತರನ್ನು ಸಂಪ್ರೀತಗೊಳಿಸುತ್ತಾನೆ ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಪುಷ್ಪಲತಾ ವಿಜಯ್ ಅಭಿಪ್ರಾಯಪಟ್ಟರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ತಿಪ್ಪಮ್ಮ ಉಮಾಶಂಕರ್ ಅವರ‌ ಸೂಜಿ ಮಲ್ಲೇಶ್ವರ ನಿವಾಸದಲ್ಲಿ “ಗುರು ಪೂರ್ಣಿಮೆ” ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಮದ್ ಭಗವದ್ಗೀತೆಯ ಪುರುಷೋತ್ತಮ ಯೋಗದ ಐದನೇ ಶ್ಲೋಕದ ಪಠಣ-ಅರ್ಥ- ವಿವರಣೆ” ನೀಡುತ್ತಾ ಮಾತನಾಡಿದರು.

ಮನುಷ್ಯ ಗರ್ವದಿಂದ ಭ್ರಾಂತನಾಗಬಾರದು. ನಾನೇ ಜಗತ್ತಿನ ಪ್ರಭು ಎಂದು ಅಹಂಕಾರ ಪಡದೆ ಶಾಶ್ವತವಾದ ಪವಿತ್ರವಾದ ಭಗವಂತನ ದಿವ್ಯ ಸಾನಿಧ್ಯದಲ್ಲಿ ಶರಣಾಗಬೇಕು ಎಂದು ತಿಳಿಸಿದರು.

ಸತ್ಸಂಗ ಸಭೆಯಲ್ಲಿ ಎಚ್ ಲಕ್ಷ್ಮೀದೇವಮ್ಮ, ಪ್ರೇಮಾ, ಸುಧಾಮಣಿ, ಯಶೋಧಾ ದೇವರಾಜ್, ತಿಪ್ಪಮ್ಮ, ಸರಸ್ವತಿ, ಜಯಮ್ಮ, ಮೋಹಿನಿ, ಗೀತಾ ಪ್ರಕಾಶ್, ಗೀತಾ ನಾಗರಾಜ್, ದ್ರಾಕ್ಷಾಯಣಿ, ಗೀತಾ ಸುಂದರೇಶ್ ದೀಕ್ಷಿತ್, ಸುವರ್ಣ ನಾಗರಾಜ್, ವಿಜಯಲಕ್ಷ್ಮೀ, ಪ್ರಮೀಳಾ ಜಗದೀಶ್, ಯತೀಶ್ ಎಂ ಸಿದ್ದಾಪುರ ಹಾಜರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button