ಎನ್.ವೈ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದಕ್ಕೆ ಸಿಡಿದೆದ್ದ – ಮತದಾರರು, ಯುವ ಮುಖಂಡರು, ಪಕ್ಷದ ಕಾರ್ಯಕರ್ತರು ತೀವ್ರ ಸ್ವರೂಪದ ಹೋರಾಟದಲ್ಲಿ ಭಾಗಿ.
ಮೊಳಕಾಲ್ಮುರು ಆ.04


ಕಾಂಗ್ರೆಸ್ ಸರ್ಕಾರದ ಎರಡನೇ ಪಟ್ಟಿ ಬಿಡುಗಡೆ ಗೊಂಡ ಸಚಿವರ ಪಟ್ಟಿಯಲ್ಲಿ ಎನ್.ವೈ ಗೋಪಾಲಕೃಷ್ಣ ಶಾಸಕರ ಹೆಸರು ಇಲ್ಲದಿದ್ದಕ್ಕೆ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಮತದಾರರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಲೆ ಇಲ್ಲದ ಸರದಾರ ಎಂಬ ವ್ಯಕ್ತಿಯನ್ನು ಸಚಿವರ ಪಟ್ಟಿಯಲ್ಲಿ ಕಡೆಗಣಿಸುವುದು ಪಕ್ಷದ ಶಿಸ್ತು ಅಲ್ಲ ಎಂದು ಕಾಣುತ್ತದೆ ಬಹಳ ಹಿರಿಯ ಅನುಭವ ವ್ಯಕ್ತಿ ಏಳು ಬಾರಿ ಶಾಸಕರಾಗಿ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹರಿಕಾರರಾಗಿದ್ದಾರೆ ಧರ್ಮವಾದ ವ್ಯಕ್ತಿ ಭ್ರಷ್ಟಾಚಾರ ಇಲ್ಲದ ಹಾಗೆ ಆಡಳಿತ ನಡೆಸಿಕೊಂಡು ಬಂದಿರತಕ್ಕಂತ ಶಾಸಕರು ಇದು ಬಹಳ ಅನ್ಯಾಯವಾಗಿದೆ.
ಎಂದು ಪ್ರತಿಭಟನಾ ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಎನ್. ವೈ. ಚೇತನ್, ಬಿ.ಪಿ. ವಿಜಯ್ ಕುಮಾರ್, ಸಿದ್ದಬಸಪ್ಪ, ಎಂ.ಕೆ. ಮೂರ್ತಿ, ಇ.ಎಸ್. ವಿಜಯ್ ಕುಮಾರ್, ದಡಗೂರ್ ಮಂಜುನಾಥ್, ಗೋವಿಂದಪ್ಪ, ಪರಮೇಶ್ವರಪ್ಪ, ಆರ್.ಜಿ. ಜಯಕುಮಾರ್, ನಾಗರಾಜ್, ಶಿವಣ್ಣ, ಶ್ರೀಕಾಂತ್ ಹಾಗೂ ಭರತ್ ಕುಮಾರ್ ಸೇರಿದಂತೆ ನಾನಾ ಗ್ರಾಮಗಳ ಮುಖಂಡರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ ಎಚ್ ಮೀನಕೆರಿ ಹೊಂಬಾಳೆ ಮೊಳಕಾಲ್ಮುರು
