ಮೊಳಕಾಲ್ಮುರು ಕ್ಷೇತ್ರಕ್ಕೆ ಯೋಜನೆಗಳು ರೂಪಿಸುವಲ್ಲಿ ಸರ್ಕಾರ ದಿಂದ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದ ಶಾಸಕರು.
ಮೊಳಕಾಲ್ಮುರು ಮಾರ್ಚ್.15

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹರಿಕಾರರು,ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಕ್ಷೇತ್ರ ವ್ಯಾಪ್ತಿಯ ವಿವಿಧ ಈ ಕೆಳಕಂಡ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಚಳ್ಳಕೆರೆ ತಾಲ್ಲೂಕು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಹಿರೇಹಳ್ಳಿ ಗೌರಸಮುದ್ರ ರಸ್ತೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ ₹ 500ಲಕ್ಷಚಳ್ಳಕೆರೆ ತಾಲ್ಲೂಕು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ತಳಕು ದೊಡ್ಡಉಳ್ಳಾರ್ತಿ ರಸ್ತೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ ₹450ಲಕ್ಷಚಳ್ಳಕೆರೆ ತಾಲೂಕು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಚೌಳಕೆರೆ ಗೇಟ್ ನಿಂದ ಮುತ್ತಿಗಾರಹಳ್ಳಿ ಹೋಗುವ ರಸ್ತೆ ಅಭಿವೃದ್ಧಿ ಅಂದಾಜು ಮೊತ್ತ ₹ 200ಲಕ್ಷಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಿರಿಯ ಕಾಂಗ್ರೆಸ್ ಮುಖಂಡರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಅಧಿಕಾರಿ ವರ್ಗದವರು ಮೊದಲಾದವರು ಉಪಸ್ಥಿತರಿದ್ದರು. ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ ಮೊಳಕಾಲ್ಮೂರು