ನಮ್ಮ ಮೂಲ ಮತ್ತು ಹಿರಿಯರಿಂದ ಬಂದ ಮಾದಿಗ ಪದ – ಬಳಕೆ ಶಬ್ದ ಮಾದಿಗ ಎಂಬುವುದು ಸೂಕ್ತ.
ಕುಷ್ಟಗಿ ಮಾ.29

ಆದಿ ಕರ್ನಾಟಕ ಆದಿ ಆಂದ್ರ ಆದಿ ದ್ರಾವಿಡ ಎಂದೂ ಬರೆಯಿಸಿ ಕೊಂಡವರ ಕೆಲವರು ಈಗ ಮತ್ತೆ ಕೆಲವರು ಆದಿ ಜಾಂಬವ, ಮಾತಂಗ ಇನ್ನು ಕೆಲವು ಪದಗಳನ್ನು ಬಳಸಿ ಮಾದಿಗ ಜಾತಿಯ ಕಾಲಂನಲ್ಲಿ ಬರೆಯಿಸಿ ಎಂದೂ ಹೇಳುವುದು ಸರಿಯಲ್ಲಾ, ಇದು ಮತ್ತಷ್ಟು ಗೊಂದಲ ಹಾಗೂ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ, ಆದ್ದರಿಂದ ನಮ್ಮ ಮೂಲ ಮತ್ತು ಹಿರಿಯರಿಂದ ಬಂದ ಮಾದಿಗ ಪದ ಬಳಕೆ ಶಬ್ದ ಎಂಬುದು ಮಾದಿಗ ಜಾತಿ ಎಂದು ಮಾತ್ರ ಬರೆಯಿಸಿ ಎಂದೂ ಈ ಮೂಲಕ ಎಲ್ಲಾ ಸಮುದಾಯದವರಲ್ಲಿ ವಿನಂತಿ, ಮತ್ತು ಸಮುದಾಯದ ವಿದ್ಯಾವಂತರು, ಶಿಕ್ಷಕರು, ಪ್ರತಿಭಾವಂತರು ಬುದ್ದಿ ಜೀವಿಗಳು, ಎಲ್ಲರೂ ಸೇರಿ ಜಾತಿ ಜನಗಣತಿಯಲ್ಲಿ ನಮ್ಮ ಮಾದಿಗ ಸಮುದಾಯಕ್ಕೆ ಜಾಗೃತಿ ಮೂಡಿಸಲು ಮತ್ತು ಮಾಹಿತಿ ನೀಡಿ ದಯವಿಟ್ಟು ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಮಾದಿಗರು ಮಾದಿಗ ಎಂದು ಬರೆಯಿಸಿ ಕೊಳ್ಳಿರಿ ಜೈ ಮಾದಿಗ ಜೈ ಭೀಮ್.
ವರದಿ:ಶಿವಕುಮಾರದೊಡ್ಡಮನಿ. ವಕೀಲರು
ಕುಷ್ಟಗಿ, 9380425259/9880899215