ಜ್ಯೋತಿಬಾ ಜಾಂಬ್ರೆ ಕುಸ್ತಿ ಸ್ಫರ್ಧೆಯಲ್ಲಿ ಮೈಸೂರು ದಸರಾ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿದ್ದಾರೆ.
ಬೇವೂರ ಅ.04

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾ ವಿದ್ಯಾಲಯದ ವಿದ್ಯಾರ್ಥಿ ಜ್ಯೋತಿಬಾ ಜಾಂಬ್ರೆ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗಿಯಾಗಿ ಕುಸ್ತಿ ಸ್ಫರ್ಧೆಯಲ್ಲಿ ಆಯ್ಕೆಯಾಗಿ ಮೈಸೂರು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಆ.ವಿ.ವ ಸಂಸ್ಥೆಯ ಚೇರ್ಮನ್ನರು ಸದಸ್ಯರು, ಕಾಲೇಜಿನ ಪ್ರಾಚಾರ್ಯರು ಸಿಬ್ಬಂದಿ ವರ್ಗದವರು ಹಾಗೂ ಗ್ರಾಮದ ಗುರು ಹಿರಿಯರು ಮತ್ತು ಯುವಕರು ಕ್ರೀಡಾಪಟುವಿಗೆ ಅಭಿನಂದಿಸಿ ಶುಭ ಕೋರಿದ್ದಾರೆ.