ವೈದ್ಯಕೀಯ ಕಾಲೇಜಿನಲ್ಲಿ ಡಿಜಿಟಲ್ ಕ್ರಾಂತಿ, ವಾಲ್ಗೋ ಇನ್ಫ್ರಾ 5ಜಿ ಮತ್ತು ದತ್ತಾಂಶ ಸೇವೆಗಳಿಗೆ – ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ.
ಮೈಸೂರು ಸ .29
ದೇಶದ ಅತ್ಯಂತ ಪುರಾತನವಾದ ಮೈಸೂರು ವೈದ್ಯಕೀಯ ಕಾಲೇಜು ಶತಮಾನೋತ್ಸವ ಸಂದರ್ಭದಲ್ಲಿ ಡಿಜಿಟಲ್ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದೆ. ವೈದ್ಯಕೀಯ ಕಾಲೇಜಿನ ವೈದ್ಯರು, ರೋಗಿಗಳು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಶರವೇಗದ ಇಂಟರ್ ನೆಟ್ ಸೌಲಭ್ಯ ಕಲ್ಪಿಸುವ ವಾಲ್ಗೋ ಇನ್ಫ್ರಾ ಸಂಸ್ಥೆಯ 5ಜಿ ಸಂಪರ್ಕ ಜಾಲ ಮತ್ತು ದತ್ತಾಂಶ ಸೇವೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ವೈದ್ಯಕೀಯ ಕಾಲೆಜಿನಲ್ಲಿ ಆರೋಗ್ಯ ಸೇವೆಗಳನ್ನು ಸುಗಮ ಮತ್ತು ಸುಲಲಿತ ಗೊಳಿಸುವ ನಿಟ್ಟಿನಲ್ಲಿ ವಾಲ್ಗೊ ಇನ್ಫ್ರಾ ಸಿಇಒ ಮತ್ತು ಎಂಡಿ ನಂ.1 ಶ್ರೀಧರ್ ರಾವ್, ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ನಿರ್ದೇಶಕರಾದ ಸುಜಾತಾ ರಾಥೋಡ್, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ.ಕೆ.ಆರ್. ದಾಕ್ಷಾಯಣಿ ಮತ್ತಿತರರ ಗಣ್ಯರು ಪಾಲ್ಗೊಂಡಿದ್ದರು. ಹೈದರಾಬಾದ್ ಮೂಲದ ತಂತ್ರಜ್ಞಾನ ಕಂಪನಿಯಾದ ವಾಲ್ಗೊ ಇನ್ಫ್ರಾ, ಮೈಸೂರು ವೈದ್ಯಕೀಯ ಕಾಲೇಜು ಕ್ಯಾಂಪಸ್ಗೆ ತನ್ನ ಅತ್ಯಾಧುನಿಕ 5ಜಿ ಮತ್ತು ದತ್ತಾಂಶ ಸೇವೆಗಳನ್ನು ತಂದಿದೆ, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ರೋಗಿಗಳಿಗೆ ಶರವೇಗದಲ್ಲಿ ಇಂಟರ್ನೆಟ್ ಹೆಚ್ಚಿಸುವ ಜೊತೆಗೆ ಕಾಲೇಜಿನ ಡಿಜಿಟಲ್ ಮೂಲ ಸೌಕರ್ಯವನ್ನು ಕ್ರಾಂತಿಕಾರಕ ಗೊಳಿಸಲು ಮತ್ತು ಒಟ್ಟಾರೆ ಶೈಕ್ಷಣಿಕ ಮತ್ತು ಆರೋಗ್ಯ ಅನುಭವವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ವಾಲ್ಗೋ ಇನ್ಫ್ರಾ ಸಿಇಒ ಮತ್ತು ಎಂಡಿ ನಂ.1 ಶ್ರೀಧರ್ ರಾವ್ ಮಾತನಾಡಿ, “ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವವನ್ನು ಆಚರಿಸುತ್ತಿರುವ ಈ ಮಹತ್ವದ ಕಾರ್ಯಕ್ರಮದ ಭಾಗವಾಗಲು ನಾವು ರೋಮಾಂಚನ ಗೊಂಡಿದ್ದೇವೆ. ಶೈಕ್ಷಣಿಕ ಮತ್ತು ಸಂಶೋಧನಾ ಪ್ರಯತ್ನಗಳನ್ನು ಬೆಂಬಲಿಸುವ ಮೂಲಕ ಇತ್ತೀಚಿನ ತಾಂತ್ರಿಕ ಪ್ರಗತಿಗಳೊಂದಿಗೆ ಕಾಲೇಜು ಮತ್ತು ಅದರ ಪಾಲುದಾರರನ್ನು ಸಬಲೀಕರಣ ಗೊಳಿಸುವ ಗುರಿ ಹೊಂದಿದ್ದೇವೆ.” ಎಂದರು. ಭಾರತದ ಅತ್ಯಂತ ಹಳೆಯ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಮೈಸೂರು ವೈದ್ಯಕೀಯ ಕಾಲೇಜು, ಈ ಪ್ರದೇಶದ ಆರೋಗ್ಯ ರಕ್ಷಣೆಯಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಾಲ್ಗೊ ಇನ್ಫ್ರಾ ಅವರ ಅತ್ಯಾಧುನಿಕ ತಂತ್ರಜ್ಞಾನದ ಏಕೀಕರಣ ದೊಂದಿಗೆ, ಕಾಲೇಜು ತನ್ನ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ವಿಶ್ವ ದರ್ಜೆಯ ಡಿಜಿಟಲ್ ಮೂಲ ಸೌಕರ್ಯಕ್ಕೆ ತನ್ನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಪ್ರವೇಶವನ್ನು ನೀಡಲು ಸನ್ನದ್ಧವಾಗಿದೆ ಎಂದು ಹೇಳಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ