ಮೊಳಕಾಲ್ಮೂರು ಕ್ಷೇತ್ರದ ಬಡ ಜನಗಳ ಸಮಸ್ಯೆಗಳನ್ನು ಆಲಿಸಿದ ಶಾಸಕರು.
ರಾಂಪುರ ಸ.29

ಇಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ರಾಂಪುರದ ನಿವಾಸದಲ್ಲಿ ಮೊಳಕಾಲ್ಮೂರು ತಾಲೂಕಿನ ಸಾರ್ವಜನಿಕರು ಸಮಸ್ಯೆಗಳನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಲಾಯಿತು. ನಿಮ್ಮ ಗ್ರಾಮಗಳಿಗೆ ಕುಡಿಯುವ ನೀರು, ವಿದ್ಯುತ್, ಚರಂಡಿ ಸ್ವಚ್ಛತೆ ಗ್ರಾಮ ಪಂಚಾಯಿತಿಗಳಲ್ಲಿ ಸರಿಯಾದ ರೀತಿಯಿಂದ ನೋಡಿ ಕೊಳ್ಳುವ ಹಾಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಲಹೆ ಕೊಡುತ್ತೇನೆ ಎಂದು ತಿಳಿಸಿದರು. ಮತ್ತು ನನ್ನ ಅನುದಾನದಲ್ಲಿ ರಸ್ತೆ ಆಗಲಿ ಶಾಲೆ ಬಿಲ್ಡಿಂಗ್ ಆಗಲಿ ಎಲ್ಲಾ ಸಮುದಾಯದ ನಾಗರಿಕರಿಗೆ ಬೇಕಾಗುವಂತ ಅಭಿವೃದ್ಧಿ ನಾನು ಮಾಡಿಸಿ ಕೊಡುತ್ತೇನೆ. ಎಂದು ಭರವಸೆ ಕೊಟ್ಟಂತ ಶಾಸಕರು ಯಾರೇ ಬಡವರು ಹೋಗಲಿ ನ್ಯಾಯವಾದ ಮಾತುಗಳು ಮಾತ್ರ ಮಾತನಾಡುತ್ತಾರೆ. ಸುಳ್ಳು ಹೇಳಿ ಯಾಮಾರ್ಸಿ ಕಳಿಸೋದು ಅವರತ್ರ ಇಲ್ಲೇ ಇಲ್ಲ ಏನೇ ಇದ್ದರೂ ನಿಜ ಸ್ಥಿತಿ ಮಾತ್ರ ಹೇಳುತ್ತಾರೆ ಆಗ ಕೆಲ್ಸ ಆಗುತ್ತೆ ಅಂತ ಹೇಳುತ್ತಾರೆ ಆಗಲಿಲ್ಲದ ಕೆಲಸ ಕೇಳಿದರೆ ಅದು ಆಗೋದಿಲ್ಲ ಅಂತ ಘಂಟಾ ಗೋಷವಾಗಿ ಹೇಳುವಂತ ಶಾಸಕರು ನ್ಯಾಯವಾದ ಜನಗಳು ಅರ್ಥ ಮಾಡಿ. ಕೊಳ್ಳುತ್ತಾರೆ ಅರ್ಥ ಇಲ್ಲದ ಜನಗಳು ಅರ್ಥ ಮಾಡಿ ಕೊಳ್ಳುವುದಿಲ್ಲ ಇವರ ಮಾತಿಗೆ ಇವರು ರಾಜಕೀಯಕ್ಕೆ ಕಾಲಿಟ್ಟಾಗಿನಿಂದಲೂ ನ್ಯಾಯದ ಮಾತುಗಳು ಮಾತ್ರ ಇವರ ಬಾಯಲ್ಲಿ ಬರುತ್ತವೆ ಅನ್ಯಾಯ ಎಂಬುದೇ ಇವರ ಬಾಯಲ್ಲಿ ಮಾತನಾಡಲು ಬರುವುದಿಲ್ಲ ಇಂತಹ ಶಾಸಕರನ್ನು ಪಡೆದಿರುವುದು ಮೊಳಕಾಲ್ಮೂರು ಕ್ಷೇತ್ರದ ಮತದಾರರು ಪುಣ್ಯ ಎಂದು ತಿಳಿಯಬೇಕು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು