ನರೇಗಲ್ಲ ಅಭಿವೃದ್ಧಿಗೆ ನಾನು ಸದಾ ಸಿದ್ಧ – ಶಾಸಕ ಜಿ.ಎಸ್. ಪಾಟೀಲ ಹೇಳಿಕೆ ನೀಡಿದರು.
ನರೇಗಲ್ಲ ನ.20
ಪಟ್ಟಣ ಶೈಕ್ಷಣಿಕವಾಗಿ ಆರ್ಥಿಕವಾಗಿ ಅಭಿವೃದ್ಧಿಯಾಗಿದ್ದು, ಭೌತಿಕವಾಗಿ ಇನ್ನಷ್ಟು ಅಭಿವೃದ್ಧಿ ಕಾಣಬೇಕಿದೆ. ಅದಕ್ಕಾಗಿ ನರೇಗಲ್ಲ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಮಹಾ ಜನತೆಯ ಸೇವೆಗೆ ನಾನು ಸದಾ ಸಿದ್ದನಾಗಿರುತ್ತೇನೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು. ನರೇಗಲ್ ಪಟ್ಟಣದಲ್ಲಿ ಎರಡು ಕೋಟಿ ರೂಪಾಯಿಗಳ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನರೇಗಲ್ಲ ಬಸ್ ನಿಲ್ದಾಣ ದಿಂದ ಅನ್ನದಾನೇಶ್ವರ ಕಾಲೇಜಿನವರೆಗೆ ಜೋಡು ರಸ್ತೆ ಅಭಿವೃದ್ಧಿ, ಮಾಡಬೇಕಾಗಿದೆ ಹಾಗೂ 198 ನಿವೇಶನಗಳನ್ನು ಬಡವರಿಗೆ ಹಂಚುವ ಕಾರ್ಯಕ್ಕೆ ಚಾಲನೆ, ಈಗಾಗಲೆ ನೋಂದಾಗಿರುವ ನಿವೇಶನಗಳ ಪಟ್ಟಾ ಪುಸ್ತಕ ವಿತರಣೆ, ಅಮೃತ ಯೋಜನೆ ಕುಡಿಯುವ ನೀರಿನ ಯೋಜನೆ ಮುಂತಾದವುಗಳನ್ನು ಜಾರಿ ಗೊಳಿಸಲು ಪ್ರಾಮಾಣಿಕ, ಪಾರದರ್ಶಕ ನಿರ್ವಹಣೆಗೆ ಶ್ರಮಿಸುತ್ತೇನೆ.
ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿ ಬೇಕು. ಪಟ್ಟಣದ ಮತ್ತು ತಾಲೂಕಿನ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೂ ಅನುದಾನ ನೀಡಲಾಗುತ್ತಿದೆ. ಅವಶ್ಯಕ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ನಿಮ್ಮ ನೋವುಗಳಿಗೆ ಸ್ಪಂದಿಸಲು ಸದಾ ಸಿದ್ದ. ಇದೇ ವರ್ಷ ದಿಂದ ಬಾಲಿಕೆಯರಿಗಾಗಿ ಸರ್ಕಾರಿ ವಸತಿ ನಿಲಯ ಪ್ರಾರಂಭಿಸುವುದಾಗಿ ಹೇಳಿದರು. ಶಹರ ಘಟಕದ ಕಾಂಗ್ರೆಸ್ ಅಧ್ಯಕ್ಷ ಶಿವನಗೌಡ ಪಾಟೀಲ ಮಾತನಾಡಿದರು. ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಡಾ, ಕೆ.ಬಿ ಧನ್ನೂರ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಎಂ.ಎಸ್. ದಡೇಸೂರಮಠ, ಪ.ಪಂ ಸದಸ್ಯರು, ಆಶ್ರಯ ಸಮಿತಿ ಸದಸ್ಯರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ