ಆರ್.ಎಸ್.ಎಸ್ ಮತ್ತು ಬಿಜೆಪಿ ಮುಖಂಡರುಗಳು ಪಾದಯಾತ್ರೆ ಕೈಗೊಂಡಿರುವ ಶಿಪ್ರಾರ ಅವರಿಗೆ ಅಭಿನಂದನೆ.
ಕೂಡ್ಲಿಗಿ ಫೆಬ್ರುವರಿ.25

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಶನಿವಾರ ದಂದು ಶಿಪ್ರಾರ ಪಾಠಾಕ್ ವಾಟರ್ ಹ್ಯೂಮನ್ ಎಂದೆ ಕ್ಯಾತೆಗೆ ಪ್ರಶಸ್ತಿ ತೆಗೆದು ಕೊಂಡಂತಹ ಶಿಪ್ರಾರ ಪಾಠಕ್ ರವರು ನವಂಬರ್ 27 ರಿಂದ ಸರಿ ಸುಮಾರು ಐದು ರಾಜ್ಯಗಳ ಪಾದಯಾತ್ರೆ ಪ್ರಾರಂಭಿಸಿದ್ದು ಇವರು ರಾಮ ಮಂದಿರ ನಿರ್ಮಾಣವಾದ ನಂತರ ಭಾರತ ದೇಶವು ಸರ್ವ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಣುವಂತೆ ಕರ್ನಾಟಕ ಉತ್ತರ ಪ್ರದೇಶ್, ಮಹಾರಾಷ್ಟ್ರ ತಮಿಳುನಾಡು ಛತ್ತೀಸಘಡ್ ಈ ಎಲ್ಲಾ ರಾಜ್ಯಗಳ ಪಾದಯಾತ್ರೆಯ ಪ್ರವಾಸದಲ್ಲಿ ಪ್ರತಿ ದಿನ 30 ಕಿಲೋಮೀಟರ್ ಪಾದಯಾತ್ರೆ ಮೂಲಕ ಪ್ರವಾಸ ಕೈಗೊಂಡು ಈ ಪ್ರವಾಸದ ಉದ್ದೇಶವು ದೇಶದಲ್ಲಿ ಹರಿಯುವ ನದಿಗಳ ಶುದ್ಧೀಕರಣ ಹಾಗೂ ಪಂಚ ಭೂತಗಳ ಶುದ್ಧೀಕರಣಕ್ಕಾಗಿ ಭಾರತ ದೇಶದದಲ್ಲಿ ಜೀವಿಸುವಂತಹ ಪ್ರಾಣಿ ಪಕ್ಷಿಗಳ ಹಿತ ದೃಷ್ಟಿಯಿಂದ ಶ್ರೀ ರಾಮನ ನಾಮದೊಂದಿಗೆ ಪಾದಯಾತ್ರೆ ಮೂಲಕ ಕೂಡ್ಲಿಗಿಗೆ ಸರಿ ಸುಮಾರು 3380 ಕಿಲೋಮೀಟರ್ ಮುಕ್ತಾಯ ಗೊಂಡಿದ್ದು ನಂತರ ಕೂಡ್ಲಿಗಿಯಿಂದ ಪಾದಯಾತ್ರೆಯ ಮೂಲಕ ರಾಮೇಶ್ವರ ಪುಣ್ಯಕ್ಷೇತ್ರದ ಮಾರ್ಗವಾಗಿ ಪಾದಯಾತ್ರೆ ಕೈಗೊಂಡಿರುವೆ ಎಂದು ಶಿಪ್ರಾರ ಪಾಠಕ್ ತಿಳಿಸಿದರು.

ಕೂಡ್ಲಿಗಿ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಡಾಕ್ಟರ್ ಶ್ರೀನಿವಾಸಲು ಹಾಗೂ ಅನೇಕರು ಸ್ವಾಗತಿಸಿ ಕೊಂಡರು ಈ ಸಂದರ್ಭದಲ್ಲಿ ಶಿಪ್ರಾರ ಪಾಠಕ್ ಇವರು ವೆಂಕಟೇಶ್ವರ ದೇವರಿಗೆ ಪೂಜೆ ನಮನ ಸಲ್ಲಿಸಿ ಕೂಡ್ಲಿಗಿಯ ಹಿರಿಯ ಮುಖಂಡರಾದ ಲೋಕನ ಗೌಡರು ಮನೆಗೆ ಆಗಮಿಸಿ ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಎಸ್ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಾಣೆ ಹಳ್ಳಿ ಹನುಮಂತಪ್ಪ ವಕೀಲರು, ಶಿಪ್ರಾರ ರವರ ಪಾದಯಾತ್ರೆ ಕೈಗೊಂಡಿರುವ ಕುರಿತು ಕೇಸರಿ ಶಾಲ್ ಹೊದಿಸುವುದರ ಮೂಲಕ ಹಣ್ಣನ್ನು ಕೊಟ್ಟು ಇವರ ಕುರಿತು ಮಾತನಾಡಿದರು, ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ಸುನಿಲ್ ಗೌಡ್ರು ಇವರು ಸಹ ಪ್ರಕೃತಿಯ ಹಿತವನ್ನು ಬಯಸುವ ಶಿಪ್ರಾರ ಪಾಠಕ್ ರವರಿಗೆ ಅಭಿನಂದಿಸಿ ಕೇಸರಿ ಶಾಲ್ ಸನ್ಮಾನಿಸುವುದುರ ಮೂಲಕ ಪಾದಯಾತ್ರೆಗೆ ಹೊರಟಿರುವ ಇವರಿಗೆ ಅಭಿನಂದನೆ ತಿಳಿಸಿದರು, ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಮುಖಂಡರುಗಳಾದ ಪದ್ಮನಾಭ ಶೆಟ್ಟಿ ಸಪ್ತಗಿರೀಶ್, ರವಿಕುಮಾರ್ ವಕೀಲರು, ಆರ್ ಎಸ್ ಎಸ್ ರಾಮಣ್ಣ ಕಟ್ವ ಬಿಜೆಪಿ ಮುಖಂಡ ಪಂಪಾಪತಿ ಎಲ್ಲಾರೂ ಕುರಿತು ಅಭಿನಂದನೆ ತಿಳಿಸಿದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ