ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ಸಂಘದ – ಪದಾಧಿಕಾರಿಗಳ ಆಯ್ಕೆ.
ರೋಣ ಜ.11

ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗದಗ ಜಿಲ್ಲಾ ಉಸ್ತುವಾರಿ ಮಹೇಶಕುಮಾರ ಅವರ ನೇತೃತ್ವದಲ್ಲಿ ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ಸಂಘದ ತಾಲೂಕಾಧ್ಯಕ್ಷರಾಗಿ ಅಂದಪ್ಪ ಮಾದರಉಪಾಧ್ಯಕ್ಷರಾಗಿ ಎಸ್.ವಿ ಸಂಕನಗೌಡ್ರ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಹೂವಿನಹಾಳ, ಸಂಘಟನಾ ಕಾರ್ಯದರ್ಶಿಯಾಗಿ ಕನಕಪ್ಪ ಕೊತಬಾಳ, ಖಜಾಂಜಿಯಾಗಿ ಶಿವರಾಜ್ ಹುಲ್ಲೂರು ಕಾರ್ಯಕಾರಿ ಸದಸ್ಯರಾಗಿ ಲಿಂಗರಾಜ ತಳ್ಳಿಹಾಳ, ರಮೇಶ ನಂದಿ, ಅಭಿಷೇಕ ಕೊಪ್ಪದ, ಶರಣಪ್ಪ ಸಂಗನಾಳ, ಶಿವಯೋಗಪ್ಪ ಬಾವಿ, ಶರಣಪ್ಪಗೌಡ ಸಕ್ಕರಗೌಡ ಅವರನ್ನು ನೇಮಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ತಾಲೂಕು ವರದಿಗಾರರು ಸೇರಿದಂತೆ ಇತರರು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.