ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊಸದಾಗಿ ತೆರೆಯಲಾದ ಡಯಾಲಿಸಿಸ್ ಕೇರ್ ಕೇಂದ್ರವನ್ನು – ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿದರು.

ಮೂಡಲಗಿ ಮೇ.22

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಅನುಕೂಲವಾಗಲು ಡಯಾಲಿಸಿಸ್ ಕೇಂದ್ರದ ಸದ್ಭಳಕೆ ಮಾಡಿ ಕೊಳ್ಳುವಂತೆ ಶಾಸಕ ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಮಂಗಳವಾರ ದಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭಿಸಲಾದ ಎರಡು ಹಾಸಿಗೆಯ ಸಾಮರ್ಥ್ಯದ ಹೊಸ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇದರಿಂದ ಬಡ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಪ್ರತಿ ತಾಲ್ಲೂಕಿಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಡಯಾಲಿಸಿಸ್ ಕೇಂದ್ರವನ್ನು ತೆರೆಯುತ್ತಿದೆ. ಕಿಡ್ನಿ ವೈಫಲ್ಯದಿಂದ ಬಳಲುವ ರೋಗಿಗಳಿಗೆ ಈ ಕೇಂದ್ರವು ಉಪಯುಕ್ತ ವಾಗಲಿದೆ. ಇದೇ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ನೀಡ ಬೇಕಾಗುತ್ತದೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಉಚಿತವಾಗಿದೆ.

ಯಾವುದಕ್ಕೂ ಹಣ ನೀಡಬೇಕಾಗಿಲ್ಲ. ಎಲ್ಲವೂ ಫ್ರೀ ಆಗಿದೆ ಎಂದು ಅವರು ಹೇಳಿದರು.ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಎರಡು ಹಾಸಿಗೆಗಳ ನೂತನ ಡಯಾಲಿಸಿಸ್ ಕೇರ್ ನ್ನು ಲೋಕಾರ್ಪಣೆ ಮಾಡಿದರು.

ಈ ವೇಳೆ ಮೂಡಲಗಿ ಪುರಸಭೆಯ ಅಧ್ಯಕ್ಷೆ ಖುರ್ಷದಾ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಅಪರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್ ಗಡೆದ, ತಹಶೀಲ್ದಾರ ಶಿವಾನಂದ ಬಬಲಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ, ಮುತ್ತಣ್ಣ ಕೊಪ್ಪದ, ತಾ.ಪಂ.ಇ.ಓ ಫಕ್ಕೀರಪ್ಪ ಚೀನ್ನನ್ನವರ, ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ, ಭಾರತಿ ಕೋಣಿ, ಸಿಡಿಪಿಓ ಯಲ್ಲಪ್ಪ ಗಡಾದ, ಸಿಪಿಐ ಶ್ರೀಶೈಲ ಬ್ಯಾಕುಡ, ಪುರಸಭೆ ಸದಸ್ಯರು, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ಬಾಕ್ಸ್ ಸುದ್ದಿ:-1

ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊಸದಾಗಿ ತೆರೆಯಲಾದ ಡಯಾಲಿಸಿಸ್ ಕೇರ್ ಕೇಂದ್ರವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಿದರು. ಮೂಡಲಗಿ ಪುರಸಭೆ ಅಧ್ಯಕ್ಷೆ ಖುರ್ಷದಾ ನದಾಫ,ಚಿಕ್ಕೋಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್. ಗಡೆದ, ತಹಶೀಲ್ದಾರ ಶಿವಾನಂದ ಬಬಲಿ, ಮುತ್ತಣ್ಣ ಕೊಪ್ಪದ, ಭಾರತಿ ಕೋಣಿ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಾಕ್ಸ್ ಸುದ್ದಿ:- 2

ಮೂಡಲಗಿಯಲ್ಲಿ ಹೊಸದಾಗಿ ಆರಂಭಿಸಲಾದ ಎರಡು ಹಾಸಿಗೆಯುಳ್ಳ ಡಯಾಲಿಸಿಸ್ ಕೇರ್ ನ್ನು ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಸಂತೋಷ್.ಕೆಳಗೋಡೆ.ಮೂಡಲಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button