ಪ್ರತಿ ಕುಟುಂಬಕ್ಕೆ ಉದ್ಯೋಗ, ಗುಳೆ ಹೋಗುವ ಅಗತ್ಯವಿಲ್ಲ – ಇ.ಓ ಅನಿಲ ಹಳ್ಳಿ ಗ್ರಾಮಸ್ಥರಿಗೆ ಹೇಳಿದರು.
ಆಲಮೇಲ ಆ.13

ನೂತನವಾಗಿ ಜಾರಿಯಾಗಿರುವ ವಿಬಿ ಜಿರಾಮ್ ಜಿ ಯೋಜನೆಯು ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ಉದ್ಯೋಗ ಒದಗಿಸಿ ಗುಳೆಯನ್ನು ತಪ್ಪಿಸುವ ಒಂದು ಉತ್ತಮ ಯೋಜನೆಯಾಗಿದೆ ಇದರ ಸದುಪ ಯೋಗವನ್ನು ಸಾರ್ವಜನಿಕರು ಪಡೆದು ಕೊಳ್ಳ ಬೇಕೆಂದು ಆಲಮೇಲ ತಾಲೂಕು ಪಂಚಾಯತ ಇ.ಓ ಅನಿಲ ಹಳ್ಳಿ ಹೇಳಿದರು.
ಅವರು ಇಲ್ಲಿನ ತಾಲೂಕು ಪಂಚಾಯತ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಬಿಜಿ ರಾಮ್ ಜಿ ಕಾರ್ಯಕ್ರಮದ ಮಾಹಿತಿ ವಿನಿಮಯ ಕರ ಪತ್ರ ಬಿಡುಗಡೆ ಗೊಳಿಸಿ ಮಾತನಾಡಿದರು.
26-27 ನೇ. ಸಾಲಿನಿಂದ ನೋಂದಾಯಿತ ಪ್ರತಿ ಕುಟುಂಬಕ್ಕೆ 125 ದಿನ ಕೆಲಸ ಹೆಚ್ಚಳ ಮಾಡಲಾಗಿದ್ದು, ದಿನಕ್ಕೆ 382 ರೂಪಾಯಿ ಕೂಲಿ ಸಿಗಲಿದ್ದು, ಕೂಲಿಕಾರರು ಇದರ ಸದುಪಯೋಗ ಪಡೆಯ ಬೇಕೆಂದರು.
ವೈಯಕ್ತಿಕ ಹಾಗೂ ಸುಮುದಾಯದ ಕಾಮಗಾರಿಗಳು ಸೇರಿದಂತೆ ಒಟ್ಟು 318 ಅನುಮೋದಿತ ಕಾಮಗಾರಿಗಳನ್ನು ತೆಗೆದು ಕೊಳ್ಳಲು ಅವಕಾಶವಿರುತ್ತದೆ.
ಅಂದರೆ ಜಲ ಸಂರಕ್ಷಣೆ, ನೀರಾವರಿ, ಅಂತರ್ಜಲ ಮರು ಪುರಣ, ಜಲಾನಯನ ಪ್ರದೇಶದ ಅಭಿವೃದ್ಧಿ, ಜಲ ಮೂಲಗಳ ಪುನಶ್ಚತನ, ಅರಣ್ಯಿಕರಣ ಸೇರಿದಂತೆ, ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಶ್ರೀಮತಿ ಸಾವಿತ್ರಿ ಗೌರೋಜಿ, ಅಭಿವೃದ್ಧಿ ಅಧಿಕಾರಿಗಳಾದ ಸಿದ್ದು ಅಂಕಲಗಿ, ಪ್ರಭಾವತಿ ಕಂಬಾರ, ಪ್ರಕಾಶ ನಾಯಕ, ಮಲ್ಲಿಕಾರ್ಜುನ ಹಾವರಗಿ, ಶರಣಮ್ಮ ನಿಲಂಗಿ, ಮಂಜುನಾಥ್ ಕಂಠೀಕರ, ವಿಬಿ ಜಿರಾಮ್ ಜಿ ತಾಂತ್ರಿಕ ಸಂಯೋಜಕರ ಪುಂಡಲೀಕ ಬಿಸ್ಸೆ , ಐ.ಇ.ಸಿ ಸಂಯೋಜಕ ಬಸವರಾಜ ಹುಣಸಗಿ, ಎಂ.ಐ.ಎಸ್ ಸಂಯೋಜಕಿ ಪೂಜಾ ಆಸಂಗಿಹಾಳ, ಬಿ.ಎಫ್.ಟಿ ಶಿವಮೂರ್ತಿ, ಯಶವಂತ , ಪ್ರಿತೇಶ್, ಗಣಕಯಂತ್ರ ಸಹಾಯಕರು ಸೇರಿದಂತೆ ಕಾರ್ಯಾಲಯ ಸಿಬ್ಬಂದಿಗಳು ಹಾಜರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ
