🔥BREAKING NEWS🔥🚨ವಿಶೇಷ ವರದಿ, ಸಾಸ್ತಾನದಲ್ಲಿ ಸ್ವಾತಂತ್ರ್ಯೋತ್ಸವ ಕ್ರಾಂತಿ, ಆಪತ್ಬಾಂಧವ ಈಶ್ವರ್ ಮಲ್ಪೆಗೆ – ಗೌರವ ಸನ್ಮಾನ..!🚨
ಉಡುಪಿ/ಸಾಸ್ತಾನ ಆ.13

ಸಮುದ್ರದ ಆಳಕ್ಕೆ ಧುಮುಕಿ ಹೆಣಗಳನ್ನು, ಜೀವಗಳನ್ನು ಮೇಲೆತ್ತುವ ಗಂಡಸು… ಸಾವು-ಬದುಕಿನ ನಡುವಿನ ರೇಖೆಯಲ್ಲಿ ನಿಂತು ನೂರಾರು ಜೀವಗಳಿಗೆ ಉಸಿರು ತಂದಿತ್ತ ‘ಕರಾವಳಿಯ ರಿಯಲ್ ಹೀರೋ’ ಈಶ್ವರ್ ಮಲ್ಪೆ ಈಗ ಮತ್ತೊಂದು ದೊಡ್ಡ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ!ಸಾಸ್ಥಾನದ ಅಂಗಳದಲ್ಲಿ ಕರುಣೆ, ಸಾಹಸ ಮತ್ತು ಸೇವೆ ಸಮ್ಮಿಲನ ಗೊಳ್ಳುವ ಐತಿಹಾಸಿಕ ಕ್ಷಣವೊಂದು ಎದುರಾಗಿದೆ.
A 2 Z Scrap ಸಂಸ್ಥೆಯ ಬೆನ್ನೆಲುಬಿನ ಸಹಭಾಗಿತ್ವದಲ್ಲಿ ‘ಸೌಹಾರ್ದ ಟ್ರಸ್ಟ್ ಸಾಸ್ಥಾನ’ ಹಮ್ಮಿಕೊಂಡಿರುವ ಬೃಹತ್ ಉಚಿತ ಆಂಬ್ಯುಲೆನ್ಸ್ ಉದ್ಘಾಟನೆ ಹಾಗೂ ಸ್ವಾತಂತ್ರ್ಯೋತ್ಸವ ಸಂಭ್ರಮದ ವೇದಿಕೆಯಲ್ಲಿ, ಕರಾವಳಿಯ ಜೀವ ರಕ್ಷಕ ಶ್ರೀ ಈಶ್ವರ್ ಮಲ್ಪೆ ಅವರಿಗೆ ಸಾರ್ವಜನಿಕವಾಗಿ ಗೌರವ ಸನ್ಮಾನ ನೆರವೇರಲಿದೆ.
🌊 ಯಾರೀ ಈಶ್ವರ್ ಮಲ್ಪೆ? ಇಲ್ಲಿದೆ ಸಾಹಸಿ ಸೇವಕನ ಕಂಪ್ಲೀಟ್ ರಿಪೋರ್ಟ್!
ಅರಬ್ಬಿ ಸಮುದ್ರದ ಆರ್ಭಟಿಸುವ ಅಲೆಗಳನ್ನು ನೋಡಿ ದಡದಲ್ಲಿ ನಿಂತವರು ಗಡಗಡ ನಡುಗುವಾಗ, ತನ್ನ ಜೀವವನ್ನು ಕೈಯಲ್ಲಿ ಹಿಡಿದು ಧುಮುಕುವ ಸಾಹಸಿ ಈ ಈಶ್ವರ್ ಮಲ್ಪೆ.
ನೀರಿನೊಳಗಿನ ಶೂರ:-
ನದಿ, ಕೆರೆ, ಸಮುದ್ರ ಅಥವಾ ಕತ್ತಲೆಯ ಬಾವಿ ಎಲ್ಲೇ ಬಿದ್ದರೂ ತುರ್ತು ಕರೆ ಬಂತೆಂದರೆ ಕ್ಷಣ ಮಾತ್ರದಲ್ಲಿ ರಂಗಕ್ಕಿಳಿಯುವ ಅಪರೂಪದ ಧೀರ. ಈಜಲು ಹೋಗಿ ಸುಳಿಗೆ ಸಿಲುಕಿದವರನ್ನು, ಸೇತುವೆ ಯಿಂದ ಧುಮುಕಿದವರನ್ನು ಜೀವದ ಹಂಗು ತೊರೆದು ದಡಕ್ಕೆ ಎಳೆದು ತಂದ ಸತ್ಯ ಕಥೆಗಳು ನೂರಾರು.
ಮೃತ ದೇಹಗಳ ಶೋಧ:-
ಹೂಳು, ಅಪಾಯಕಾರಿ ಸುಳಿ ಹಾಗೂ ಬಂಡೆಗಳ ನಡುವೆ ಧುಮುಕಿ, ನೀರಿನಲ್ಲಿ ಮುಳುಗಿ ಹೋದವರ ಶವಗಳನ್ನು ಹುಡುಕಿ ತೆಗೆದು, ಮೃತರ ಕುಟುಂಬದವರಿಗೆ ಕೊನೆಯ ದರ್ಶನ ಪಡೆಯುವಂತೆ ಮಾಡುವ ನಿಸ್ವಾರ್ಥ ಕಾಯಕ ಇವರದ್ದು.
ಜನರ ಪ್ರೀತಿಯೇ ಬಹುಮಾನ:-
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಉಚಿತವಾಗಿ ಸೇವೆ ಸಲ್ಲಿಸುವ ಇವರಿಗೆ ಖಾಕಿ ಪಡೆ, ರಕ್ಷಣಾ ಸಿಬ್ಬಂದಿ ಹಾಗೂ ಇಡೀ ಜಿಲ್ಲಾಡಳಿತವೇ ಕೈಮುಗಿದು ಗೌರವಿಸುತ್ತದೆ.
🚑 ಕಾರ್ಯಕ್ರಮದ ವಿವರ ಹಾಗೂ ಉಚಿತ ಆಂಬ್ಯುಲೆನ್ಸ್ ಧಮಾಕ..!
ಬಡವನಿಗೆ ತುರ್ತು ಸಮಯದಲ್ಲಿ ಆಸರೆ ಯಾಗಲು “24X7 ಸೌಹಾರ್ದ ಉಚಿತ ಆಂಬ್ಯುಲೆನ್ಸ್” ಸೇವೆ ಇದೇ ಶುಭಗಳಿಗೆಯಲ್ಲಿ ಲೋಕಾರ್ಪಣೆ ಗೊಳ್ಳಲಿದೆ.
ದಿನಾಂಕ & ಸಮಯ:-
15-08-2026 (ಶನಿವಾರ) ಬೆಳಿಗ್ಗೆ 9.30ಕ್ಕೆ
ಸ್ಥಳ:-
ಶಿವರಾಮ ಶೆಟ್ಟಿ ಆದರ್ಶ ಐಸ್ ಪ್ಲಾಂಟ್ ಕಂಪೌಂಡ್ ಸಾಸ್ತಾನ, ಪಾಂಡೇಶ್ವರ
ವಿಶೇಷ ಆಕರ್ಷಣೆ:-
ಮಧ್ಯಾಹ್ನ 12 ಗಂಟೆಗೆ ಸ್ಥಳೀಯರಿಗಾಗಿ ಮಣ್ಣಿನ ಕ್ರೀಡೆಗಳಾದ ಹಗ್ಗಜಗ್ಗಾಟ ಮತ್ತು ಕಬಡ್ಡಿ ಪಂದ್ಯಾಟ!
📲 ತುರ್ತು ಆಂಬ್ಯುಲೆನ್ಸ್ ಸೇವೆಗಾಗಿ ಸಂಪರ್ಕಿಸಿ:-
* 8867075108
* 9845338044
* 9986369067
* 9741421973
ಶುಭ ಕೋರುವವರು:-
ಶ್ರೀ ಸಂಕಪ್ಪ ಎ. (ವಕೀಲರು, ಉಡುಪಿ) ಹಾಗೂ ಸೌಹಾರ್ದ ಟ್ರಸ್ಟ್‌ನ ಗೌರವಾಧ್ಯಕ್ಷರು, ಕಾರ್ಯದರ್ಶಿ, ಉಪಾಧ್ಯಕ್ಷರು, ಸಲಹೆಗಾರರು ಮತ್ತು ಸಮಸ್ತ ಪದಾಧಿಕಾರಿಗಳು.ಸಾಹಸ ಮತ್ತು ಕರುಣೆಯ ಸಂಕೇತವಾಗಿರುವ ಈಶ್ವರ್ ಮಲ್ಪೆಯವರ ಸನ್ಮಾನ ಹಾಗೂ ಉಚಿತ ಆಂಬ್ಯುಲೆನ್ಸ್ ಲೋಕಾರ್ಪಣೆಗೆ ಇಡೀ ಸಾಸ್ಥಾನವೇ ಕಾದು ಕುಳಿತಿದೆ. ಸೇವೆಯ ಈ ಮಹಾ ಸಂಗಮಕ್ಕೆ ನೀವೂ ಸಾಕ್ಷಿಯಾಗಿ..!
ವರದಿ:ಆರತಿ.ಗಿಳಿಯರು,ಉಡುಪಿ

