🔥BREAKING NEWS🔥🚨ವಿಶೇಷ ವರದಿ, ಸಾಸ್ತಾನದಲ್ಲಿ ಬೃಹತ್ ಸಂಭ್ರಮದಲ್ಲಿ ‘ಕರುಣೆಯ ಹರಿಕಾರ’ ನಿತ್ಯಾನಂದ ಒಳಕಾಡು ಅವರಿಗೆ – ಗೌರವ ಸನ್ಮಾನ..!🚨

ಉಡುಪಿ/ಸಾಸ್ತಾನ ಆ.13

ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದು ನರಳುವ ಜೀವಗಳನ್ನು, ಯಾರೂ ಮುಟ್ಟಲು ಹಿಂಜರಿಯುವ ರಕ್ತ ಸಿಕ್ತ ದೇಹಗಳನ್ನು ಹೆತ್ತ ತಾಯಿಯಂತೆ ಅಪ್ಪಿ, ಉಪಚರಿಸಿ ಜೀವ ತಂದು ಕೊಡುವ ಉಡುಪಿಯ ಮಹಾನ್ ಚೇತನ ‘ಶ್ರೀ ನಿತ್ಯಾನಂದ ಒಳಕಾಡು’ ಅವರಿಗೆ ಈಗ ಮತ್ತೊಂದು ಅಪರೂಪದ ಗೌರವ ಒಲಿದು ಬಂದಿದೆ!ಸಾಸ್ಥಾನದ ಮಣ್ಣಿನಲ್ಲಿ ಕರುಣೆ, ನಿಸ್ವಾರ್ಥ ಸೇವೆ ಮತ್ತು ನಾಡಿನ ಸೌಹಾರ್ದತೆ ಒಂದಾಗುವ ಮಹತ್ವದ ದಿನಾಂಕ ಹತ್ತಿರವಾಗಿದೆ.

A 2 Z Scrap ಸಂಸ್ಥೆಯ ಬೆನ್ನೆಲುಬಿನ ಸಹ ಭಾಗಿತ್ವದಲ್ಲಿ ‘ಸೌಹಾರ್ದ ಟ್ರಸ್ಟ್ ಸಾಸ್ಥಾನ’ ಹಮ್ಮಿಕೊಂಡಿರುವ ಬೃಹತ್ ಉಚಿತ ಆಂಬ್ಯುಲೆನ್ಸ್ ಉದ್ಘಾಟನೆ ಹಾಗೂ ಸ್ವಾತಂತ್ರ್ಯೋತ್ಸವ ಸಂಭ್ರಮದ ವೇದಿಕೆಯಲ್ಲಿ, ಬೀದಿ ಬದಿಯ ಅನಿಕೇತನರ ಆಪತ್ಬಾಂಧವ ಶ್ರೀ ನಿತ್ಯಾನಂದ ಒಳಕಾಡು ಅವರಿಗೆ ಸಾರ್ವಜನಿಕವಾಗಿ ಗೌರವ ಸನ್ಮಾನ ನೆರವೇರಲಿದೆ.

🏥 ಯಾರೀ ನಿತ್ಯಾನಂದ ಒಳಕಾಡು? ಇಲ್ಲಿದೆ ನಿಸ್ವಾರ್ಥ ಸೇವಕನ ಕಂಪ್ಲೀಟ್ ರಿಪೋರ್ಟ್..!

ಉಡುಪಿಯ ಗಲ್ಲಿ-ಗಲ್ಲಿಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಅಥವಾ ರೈಲ್ವೇ ಸ್ಟೇಷನ್‌ಗಳಲ್ಲಿ ಯಾರಾದರೂ ಅಸಹಾಯಕರು, ಹುಚ್ಚರು ಅಥವಾ ತೀವ್ರ ಕಾಯಿಲೆ ಯಿಂದ ನರಳುವವರು ಕಂಡರೆ ಸಾರ್ವಜನಿಕರಿಗೆ ತಕ್ಷಣ ನೆನಪಾಗುವುದೇ ನಿತ್ಯಾನಂದ ಒಳಕಾಡು.

ಉಚಿತ ಆಂಬ್ಯುಲೆನ್ಸ್ ಸೇವೆ:-

ತಮ್ಮದೇ ಆಂಬ್ಯುಲೆನ್ಸ್‌ನಲ್ಲಿ ಹಗಲು-ರಾತ್ರಿ ಎನ್ನದೆ, ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ಅನಾಥರನ್ನು, ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸುವ ಕೆಲಸವನ್ನು ದಶಕಗಳಿಂದ ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ.

ಅನಾಥ ಶವಗಳ ಸಂಸ್ಕಾರ:-

ವಾರಸುದಾರರಿಲ್ಲದೆ, ಯಾರೂ ಮುಟ್ಟಲೂ ಹಿಂಜರಿಯುವ ಮೃತ ದೇಹಗಳಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ನೆರವೇರಿಸಿ, ಆ ಜೀವಗಳಿಗೆ ಮುಕ್ತಿ ನೀಡುವ ಮಹತ್ಕಾರ್ಯವನ್ನು ಇವರು ಧರ್ಮದ ಹಂಗಿಲ್ಲದೆ ಮಾಡುತ್ತಾ ಬಂದಿದ್ದಾರೆ.

ವಿನೂತನ ಪ್ರತಿಭಟನೆಗಳು:-

ಕೇವಲ ರೋಗಿಗಳ ಸೇವೆಯಷ್ಟೇ ಅಲ್ಲ, ರಸ್ತೆ ಗುಂಡಿ ಮುಚ್ಚುವುದು ಹಾಗೂ ಸಾರ್ವಜನಿಕ ಸಮಸ್ಯೆಗಳ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿ ಆಡಳಿತದ ಕಣ್ಣು ತೆರೆಸುವಲ್ಲಿ ಇವರು ಸದಾ ಮುಂಚೂಣಿಯಲ್ಲಿರುತ್ತಾರೆ.

🚑 ಕಾರ್ಯಕ್ರಮದ ವಿವರ ಹಾಗೂ ಉಚಿತ ಆಂಬ್ಯುಲೆನ್ಸ್ ಲೋಕಾರ್ಪಣೆ..!

ಬಡವರ, ಕಷ್ಟದಲ್ಲಿದ್ದವರ ತುರ್ತು ರಕ್ಷಣೆಗೆ “24X7 ಸೌಹಾರ್ದ ಉಚಿತ ಆಂಬ್ಯುಲೆನ್ಸ್” ಸೇವೆ ಇದೇ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಗೊಳ್ಳಲಿದೆ.

ದಿನಾಂಕ & ಸಮಯ:-

15-08-2026 (ಶನಿವಾರ) ಬೆಳಿಗ್ಗೆ 9.30 ಕ್ಕೆ

ಸ್ಥಳ:-

ಶಿವರಾಮ ಶೆಟ್ಟಿ ಆದರ್ಶ ಐಸ್‌ಪ್ಲಾಂಟ್ ಕಂಪೌಂಡ್ ಸಾಸ್ತಾನ, ಪಾಂಡೇಶ್ವರ

ವಿಶೇಷ ಆಕರ್ಷಣೆ:-

ಮಧ್ಯಾಹ್ನ 12 ಗಂಟೆಗೆ ಸ್ಥಳೀಯರಿಗಾಗಿ ಮಣ್ಣಿನ ಆಟಗಳಾದ ಹಗ್ಗಜಗ್ಗಾಟ ಮತ್ತು ಕಬಡ್ಡಿ ಪಂದ್ಯಾಟ!

📲 ತುರ್ತು ಆಂಬ್ಯುಲೆನ್ಸ್ ಸೇವೆಗಾಗಿ ಸಂಪರ್ಕಿಸಿ:-

* 8867075108

* 9845338044

* 9986369067

* 9741421973

ಶುಭಕೋರುವವರು:-

ಶ್ರೀ ಸಂಕಪ್ಪ ಎ. (ವಕೀಲರು, ಉಡುಪಿ) ಹಾಗೂ ಸೌಹಾರ್ದ ಟ್ರಸ್ಟ್‌ನ ಗೌರವಾಧ್ಯಕ್ಷರು, ಕಾರ್ಯದರ್ಶಿ, ಉಪಾಧ್ಯಕ್ಷರು, ಸಲಹೆಗಾರರು ಮತ್ತು ಸಮಸ್ತ ಸದಸ್ಯರು.

“ರಸ್ತೆಯಲ್ಲಿ ಬಿದ್ದಿರುವ ಪ್ರತಿಯೊಂದು ಜೀವದಲ್ಲೂ ದೇವರನ್ನು ಕಾಣುತ್ತೇನೆ” ಎನ್ನುವ ಕರುಣಾಮಯಿ ನಿತ್ಯಾನಂದ ಒಳಕಾಡು ಅವರ ಸನ್ಮಾನ ಕಾರ್ಯಕ್ರಮಕ್ಕೆ ಹಾಗೂ ಉಚಿತ ಆಂಬ್ಯುಲೆನ್ಸ್ ಸೇವೆಯ ಉದ್ಘಾಟನೆಗೆ ಸಮಸ್ತ ಜನತೆಗೆ ಆದರದ ಸ್ವಾಗತ..!

ವರದಿ:ಆರತಿ.ಗಿಳಿಯರು,ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button