2026 ನೇ. ಸಾಲಿನ ಮುಂಗಾರು ಅಧಿವೇಶನದಲ್ಲಿ ಹಡಪದ ಸಮಾಜದ ಪರವಾಗಿ ಧ್ವನಿ ಎತ್ತಲು – ಮತ್ತಿಮೂಡ ಅವರಿಗೆ ಮನವಿ.
ಕಲಬುರ್ಗಿ ಆ.13

ಇಂದು ನೀಡುವ ಆಶ್ವಾಸನೆಗಳು ಬರೀ ಸುಳ್ಳಾಗದೆ, ಕೊಟ್ಟ ಮಾತು ತಪ್ಪದೆ, ಸಣ್ಣ ಸಣ್ಣ ಕಾಯಕ ಸಮಾಜಗಳಿಗೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಬೇಕು.
ಹಡಪದ ಅಪ್ಪಣ್ಣ ಸಮಾಜದ ಪ್ರಮುಖ ಬೇಡಿಕೆಗಳು:-
ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ ₹100 ಕೋಟಿ ಅನುದಾನ ಮೀಸಲಿಡ ಬೇಕು.
ಜಾತಿ ನಿಂದನೆಗೆ ಕಠಿಣ ಕಾನೂನು ಜಾರಿಗೆ ತಂದು, ಜಾತಿ ನಿಂದನೆ ಪ್ರಕರಣಗಳಿಗೆ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸು ವಂತಾಗಬೇಕು.
ಬಸವ ಕಲ್ಯಾಣದಲ್ಲಿರುವ ಬಸವಣ್ಣನವರ ಅರಿವಿನ ಮನೆಯ ಗವಿಯ ಪಕ್ಕದಲ್ಲಿರುವ ನಿಜಸುಖಿ ಹಡಪದ ಅಪ್ಪಣ್ಣನವರ ಗವಿ (ಅರಿವಿನ ಮನೆ) ಬಿ.ಕೆ.ಡಿ.ಬಿಯನ್ನು ಅಭಿವೃದ್ಧಿ ಪಡಿಸಬೇಕು.
ನಿಜಸುಖಿ ಹಡಪದ ಅಪ್ಪಣ್ಣನವರ ಗವಿಯ ಸ್ಥಳದಲ್ಲಿ ಅನ್ಯ ಮೂರ್ತಿಯನ್ನು ರಾತ್ರೋ ರಾತ್ರಿ ಸ್ಥಾಪಿಸಿರುವ ಕುರಿತು ಸೂಕ್ತ ತನಿಖೆ ನಡೆಸಿ, ಬಸವಾದಿ ಕಾಯಕ ಶರಣರಾದ ನಿಜಸುಖಿ ಹಡಪದ ಅಪ್ಪಣ್ಣನವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸ ಬೇಕು.
ಸಣ್ಣ ಸಣ್ಣ ಕಾಯಕ ಶರಣರಿಗೆ ಅನ್ಯಾಯ ಮಾಡಬಾರದು. ಕಾಯಕ ಶರಣರ ಇತಿಹಾಸ, ಪರಂಪರೆ ಮತ್ತು ಸ್ಮಾರಕಗಳನ್ನು ಸಂರಕ್ಷಿಸಿ ಗೌರವಿಸಬೇಕು.
ಈ ಎಲ್ಲ ಬೇಡಿಕೆಗಳನ್ನು ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಿ, ಹಡಪದ ಸಮಾಜದ ಪರವಾಗಿ ಧ್ವನಿಯಾಗಿ ಮಾತನಾಡಬೇಕು ಹಾಗೂ ಸಮಾಜದ ಅಭಿವೃದ್ಧಿ ನಿಗಮಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿ, ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿಯ ಜನಪ್ರಿಯ ಶಾಸಕರಾದ ಶ್ರೀ ಬಸವರಾಜ ಮತ್ತಿಮೂಡ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಲಬುರಗಿ ಜಿಲ್ಲೆಯ ಹಡಪದ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀ ಈರಣ್ಣ ಸಿ. ಹಡಪದ ಸಣ್ಣೂರ ಹಾಗೂ ಶ್ರೀ ಸುನೀಲ್ ಕುಮಾರ್ ಭಾಗಹಿಪ್ಪರರ್ಗಾ ಅವರು ಸೇರಿದಂತೆ ಸಮಾಜದ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಅನೇಕ ಮುಖಂಡರು ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.
“ಹಡಪದ ಸಮಾಜದ ನ್ಯಾಯಯುತ ಬೇಡಿಕೆಗಳಿಗೆ ಧ್ವನಿಯಾಗಿ — ಕಾಯಕ ಶರಣರ ಗೌರವ ಮತ್ತು ಹಕ್ಕುಗಳನ್ನು ರಕ್ಷಿಸೋಣ.
”ಮಲ್ಲಿಕಾರ್ಜುನ.ಬಿ ಹಡಪದ ಸುಗೂರ ಎನ್.ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಹಡಪದ ಸಮಾಜ, ಕಲಬುರಗಿ ಅವರು ಪತ್ರಿಕೆಯಲ್ಲಿ ತಿಳಿಸಿದರು ಎಂದು ವರದಿಯಾಗಿದೆ.
