ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ – ಆಯ್ಕೆಯಾದ ವರದಿಗಾರರು.

ಮುದ್ದೇಬಿಹಾಳ ಆ.12

ಸ್ವಾತಂತ್ರ್ಯ ದಿನಾಚರಣೆ ಮತ್ತು ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ವಿಜಯಪುರ ಪಟ್ಟಣದ ಸೋಲಾಪುರ ರಿಂಗ್ ರಸ್ತೆಯಲ್ಲಿರುವ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಮತ್ತು ಹಾಮುಲಾಲ ದೇವಸ್ಥಾನದಲ್ಲಿ ಶ್ರೀ ರೇವಣಸಿದ್ದೇಶ್ವರ ಸಂಸ್ಥೆ ವಿಜಯಪುರ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‌ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ.

ಗ್ರಾಮದ ವಿಜಯವಾಣಿ ವರದಿಗಾರರು ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮುದ್ದೇಬಿಹಾಳ ತಾಲ್ಲೂಕಿನ ಉಪಾಧ್ಯಕ್ಷರಾದ ಜಿ.ಎನ್ ಬೀರಗೊಂಡ (ಮುತ್ತು) ಹಾಗೂ ಢವಳಗಿ ಹೋಬಳಿ ವಿಜಯ ಕರ್ನಾಟಕ ವರದಿಗಾರರಾದ ಹಣಮಂತ ಬೀರಗೊಂಡ, ಆಲಮಟ್ಟಿಯ ಸಂಯುಕ್ತ ಕರ್ನಾಟಕ ವರದಿಗಾರರಾದ ಬೀರಪ್ಪ ಬೆನ್ನೂರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇನ್ನೂ ಅನೇಕ ಸಾಧಕರಿಗೂ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷರಾದ ವಾಯ್.ಬಿ ಗುಂಡಕರ್ಜಗಿ ಅವರು ಪ್ರಕಟಣೆಯಲ್ಲಿ ತಿಳಿಸಿದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button