ಸರ್ಕಾರದ ಆತುರ ನಿರ್ಧಾರಕ್ಕೆ ಜೀವಗಳ ಬಲಿ ಪರಿಹಾರಕ್ಕೆ – ಆಲೂರ್.ಲಿಂಗರಾಜ ಒತ್ತಾಯ.
ಡಾವಣಗೇರಿ ಜೂ.06

ಕನ್ನಡಿಗರ ಜನಪ್ರಿಯ ಕ್ರಿಕೇಟ್ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹದಿನೆಂಟು ವರ್ಷಗಳ ನಂತರ ಚಾಂಪಿಯನ್ ಪಟ್ಟ ಪಡೆದು ಕೊಂಡಿದ್ದು ನಾಡಿಗೆಲ್ಲ ಹೆಮ್ಮೆಯ ಮತ್ತು ಸಂತೋಷಕರವಾದ ವಿಷಯ ಹಾಗೂ ಅಭಿನಂದನೆಗಳನ್ನು ತಿಳಿಸಿ ಮಾತನಾಡಿದ ದಾವಣಗೆರೆ ಜಿಲ್ಲಾ ಭಾ.ಜ.ಪ ಮೂಖಂಡರು ಹಾಗೂ ಮಾಜಿ ತಾಲೂಕು ಪಂಚಾಯತ ಸದಸ್ಯರಾದ ಆಲೂರ್ ಲಿಂಗರಾಜ ರವರು ರಾಜ್ಯ ಸರ್ಕಾರವನ್ನು ನೇರ ತರಾಟೆಗೆ ತೆಗೆದುಕೊಂಡಿದ್ದು ಆರ್.ಸಿ.ಬಿ ತಂಡದ ಅಭಿನಂದನಾ ಸಮಾರಂಭವನ್ನು ಪೊಲೀಸ್ ಇಲಾಖೆಗೆ ಹೆಚ್ಚಿನ ಸಮಯ ಕೊಡದೆ ಆತುರದ ನಿರ್ಧಾರದಿಂದ ಅಮಾಯಕರು ಬಲಿಯಾಗಿದ್ದು ಆರ್.ಸಿ.ಬಿ ತಂಡ ಗೆದ್ದ ಪಟ್ಟವನ್ನು ರಾಜ್ಯ ಸರ್ಕಾರ ತನ್ನ ಕ್ರೆಡಿಟ್ ಮಾಡಿಕೊಳ್ಳಲು ಹೋಗಿ ಸರಿಯಾಗಿ ಪೂರ್ವ ಸಿದ್ಧತೆ ಇಲ್ಲದೆ ನೂಕು ನುಗ್ಗಲಿಕೆಯಿಂದ ಜೀವಗಳು ಬಲಿಯಾಗಿದ್ದು ರಾಜ್ಯ ಸರ್ಕಾರ ಹೊಣೆ ಹೊತ್ತು ಮೃತರ ಕುಟುಂಬಗಳಿಗೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.