ರಾಮಸಾಗರಹಟ್ಟಿ — ಕಲಾವಿದ ಗುರುಶಂಕರಪ್ಪ “ವಿಶ್ವ ತತ್ವಪದ ಜಾನಪದ ಭೂಷಣ” ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಮಸಾಗರಹಟ್ಟಿ ಜುಲೈ.25

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಮಸಾಗರಹಟ್ಟಿ ಗ್ರಾಮದ, ಖ್ಯಾತ ಹಿರಿಯ ಕಲಾವಿದರಾದ ಆರ್.ಬಿ.ಗುರುಶಂಕರಪ್ಪರವರಿಗೆ. ಧಾರವಾಡದ “ವಿಶ್ವ ದರ್ಶನ” ಪತ್ರಿಕಾ ಸಮೂಹದಿಂದ ವಿವಿದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡಲ್ಪಡುವ, 2023ನೇ ಸಾಲಿನ “ವಿಶ್ವ ತತ್ವಪದ ಜ‍ಾನಪದ ಭೂಷಣ ರಾಷ್ಟ್ರೀಯ ಪ್ರಶಸ್ತಿ” ಲಭಿಸಿದೆ. ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ ದ್ವಿತೀಯ ವಾರ್ಷೀಕೋತ್ಸವ, ಹಾಗೂ ಪತ್ರಿಕೆಯ ಸಂಪಾದಕರಾದ ಎಸ್.ಎಸ್.ಪಾಟೀಲರು. ತಮ್ಮ ನಿರಂತರ ಸೇವ‍ಾ ಅವಧಿಯಲ್ಲಿ, 55ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನಲೆಯಲ್ಲಿ. ಸಮಸ್ತ ಪತ್ರಿಕಾ ಬಳಗದಿಂದ ಅವರನ್ನು ಅಭಿನಂದನೆ ಸಲ್ಲಿಸುವ ಪ್ರಯುಕ್ತ, ವಿಶ್ವ ದರ್ಶನ ದಿನ ಪತ್ರಿಕೆ ಬಳಗ ಹಾಗೂ ಕರ್ನಾಟಕ ಪ್ರಜಾ ದರ್ಶನ ಮಾಸ ಪತ್ರಿಕೆ ಬಳಗದ ಆಶ್ರಯದಲ್ಲಿ. ಇತೀಚಿಗೆ ಧಾರವಾಡದಲ್ಲಿ ಜರುಗಿದ, 2023ನೇ ಸಾಲಿನ “ವಿಶ್ವ ದರ್ಶನ ರಾಷ್ಟ್ರೀಯ ಪ್ರಶಸ್ತಿ” ಪ್ರಧಾನ ಕಾರ್ಯಕ್ರಮದಲ್ಲಿ. ತಾಲೂಕಿನ ರಾಮಸಾಗರಹಟ್ಟಿ ಗ್ರ‍ಾಮದ ಹಿರಿಯ ಕಲಾವಿದರಾದ, ಆಧ್ಯಾತ್ಮಿಕ ಹಿರಿಯ ಚಿಂತಕರಾದ ಆದರ್ಶ ವ್ಯಕ್ತಿತ್ವದ ಗುರುಶಂಕರಪ್ಪ ರವರಿಗೆ. ವಿಶ್ವ ತತ್ವಪದ ಜಾನಪದ ಭೂಷಣ ರ‍ಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲ‍ಾಗಿದೆ.

ಕೂಡ್ಲಿಗಿ ತಾಲೂಕಿನ ಪ್ರಮುಖ ಹಿರಿಯ ಕಲಾವಿದರಲ್ಲಿ ಒರ್ವರಾದ, ತಮ್ಮ ವಿಶಿಷ್ಟವಾದ ಆದರ್ಶ ವ್ಯಕ್ತಿತ್ವದಿಂದ. ನಾಡಿನ ಹಲವೆಡೆಗಳಲ್ಲಿ ಹಾಗೂ ಹಲವಾರು ಜಿಲ್ಲೆಗಳಲ್ಲಿ, ಕೂಡ್ಲಿಗಿ ತಾಲೂಕು ನೆರೆ ಹೊರೆ ತಾಲೂಕುಗಳಲ್ಲಿ. ತತ್ವಪದ ಗಾಯಕರೆಂದು ಸರಳ ಸಜ್ಜನಿಕೆಯ ವಿಶಿಷ್ಟ ಆದರ್ಶ ವ್ಯಕ್ತಿತತ್ವದಿಂದ, ಖ್ಯಾತವೆತ್ತ ಹಿರಿಯ ಕಲಾವಿದರಾದ ರಾಮಸಾಗರಹಟ್ಟಿ ಗುರುಶಂಕರಪ್ಪರವರ. ಗಣನೀಯ ಕಲಾ ಸೇವೆ ಹಾಗೂ ಕಲಾ ಸೇವೆ ಮತ್ತು ಅವರ ಸರಳತೆ ಸಜ್ಜನಿಕೆಗೆ, ಗೌರವ ಸಲ್ಲಿಸುತ್ತಿವ ಪ್ರಯುಕ್ತ ಅವರಿಗೆ. “ವಿಶ್ವ ತತ್ವಪದ ಜಾನಪದ ಭೂಷಣ” ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲ‍ಾಗಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ನಾಡಿನ ಗಣ್ಯಾತಿ ಗಣ್ಯರು, ವಿಶ್ವ ದರ್ಶನ ದಿನಪತ್ರಿಕೆ ಸಂಪ‍ಾದಕರು ಹಾಗೂ ಸಮೂಹದ ಪ್ರಮುಖರು ಉಪಸ್ಥಿತರಿದ್ದರು. ನಾಡಿನ ವಿವಿದೆಡೆಗಳಲ್ಲಿನ ವಿವಿದ ಕ್ಷೇತ್ರಗಳಲ್ಲಿ, ಗಣನೀಯ ಸೇವೆ ಸಲ್ಲಿಸಿದ ಕಾರಣಕ್ಕೆ ಗುರುತಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದ. ಗಣ್ಯಮಾನ್ಯರನ್ನು ವೇದಿಕೆಗೆ ಸ್ವಾಗತಿಸಿ, ಅವರನ್ನ ಸನ್ಮಾಸಿ ಯೋಗ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲ‍ಾಯಿತು.

ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನಿ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button