ಅಕ್ಕಮಹಾದೇವಿ ಇವರ ವಚನ ಸಾಹಿತ್ಯ ಗಾಯನ ಸಂಗೀತ ಇವರ ಸಂಕಲ್ಪದೊಂದಿಗೆ ಗಿಡಕ್ಕೆ ನೀರು – ಎರೆದು ಶ್ಲಾಘನೆ ಮೆರೆದರು.

ಮೊಳಕಾಲ್ಮುರು ಜು.06

ಕನ್ನಡ ಸಾಹಿತ್ಯಕ್ಕೆ ಪ್ರಥಮ ಕವಿತ್ರಿಯಾಗಿ ಸ್ತ್ರೀ ಸಮಾನತೆಗೆ ಮೇರು ಪರ್ವತವಾಗಿ ಅತಿ ಕಿರಿಯ ವಯಸ್ಸಿನಲ್ಲಿ ವೈರಾಗ್ಯ ಆಧ್ಯಾತ್ಮ ಮೈಗೂಡಿಸಿ ಕೊಂಡು ಚೆನ್ನ ಮಲ್ಲಿಕಾರ್ಜುನನೇ ನನ್ನ ಆರಾಧ್ಯ ದೈವ ಎಂದ ವೈರಾಗ್ಯ ನಿಧಿ, ಅಕ್ಕಮಹಾದೇವಿ ಇವರ ಹೆಸರಿನ ಅಕ್ಕ ನ ಬಳಗ ಸಾಂಸ್ಕೃತಿಕ ಕಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸದಸ್ಯರು ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಸೇವೆಗಳನ್ನ ಅವಿರತವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಬಸವ ಕೇಂದ್ರದ ಅಧ್ಯಕ್ಷರು ಶರಣ ಶ್ರೀ ಭೋಗೇಶ್ ಗೌಡರು ತಿಳಿಸಿದರು.

ಸಿದ್ದಯ್ಯ ಕೋಟೆ, ಶ್ರೀ ಮಠದಲ್ಲಿ, ವಚನ ಗಾಯನ, ಜಾನಪದ ಗಾಯನ, ಸೋಬಾನೆ, ಲಾವಣಿ ತತ್ವಪದ, ಸುಗಮ ಸಂಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಮಠದ ಕಾರ್ಯದರ್ಶಿ ಪಿ. ಆರ್.ಕಾಂತರಾಜ್ ಅಕ್ಕನ ಬಳಗದ ಸದಸ್ಯರು ಪ್ರತಿ ಒಂದು ವಿಶೇಷವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರೋದು ಈ ತಿಂಗಳಿನಲ್ಲಿ ಸುಗಮ ಸಂಗೀತ ಕಾರ್ಯಕ್ರಮವನ್ನು ಶ್ರೀ ಮಠದ ಸದ್ಭಕ್ತರಿಗೆ ವಚನ ಗಾಯನ, ತುಂಬಾ ಆನಂದ ಪಡಿಸಿದ್ದು ವಿಶೇಷವಾಗಿ ಕೆ. ಓ.ಶಿವಣ್ಣ ತಂಡ, ವಚನ ಗಾಯನದಲ್ಲಿ ನಾಡಿನಾದ್ಯಂತ ರಾಜ್ಯ ಹೋರ ರಾಜ್ಯಗಳಲ್ಲಿ ಹಲವು ಧರ್ಮ ಕ್ಷೇತ್ರಗಳು ಶ್ರೀಮಠಗಳಲ್ಲಿ ನಮ್ಮ ತಾಲೂಕಿನ ಕೀರ್ತಿಯನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿದ ಸಂಗೀತ ಶಿಕ್ಷಕ ಶಿವಣ್ಣರವರ, ಗಾಯನವೇ ಮಂತ್ರಮುಗ್ಧರನ್ನಾಗಿ ಮಾಡಿ ತಿರುಗುವುದು ತುಂಬಾ ಹೆಮ್ಮೆಯ ವಿಷಯ, ಹಾಗೆ ಗುರು ಶಂಕ್ರಪ್ಪ ರವರ ಭಜನಾ ಜಾನಪದ ಸಂಗೀತ, ಅದ್ಭುತ ವೆನಿಸಿತು, ಎಂ ನುಂಕೇಶ್ ರವರ, ಸುಗಮ ಸಂಗೀತ ಭಾವನಾತ್ಮಕವಾಗಿ ಪ್ರಸ್ತುತ ಪಡಿಸಲಾಯಿತು.

ಇದೇ ಸಂದರ್ಭದಲ್ಲಿ, ಅಕ್ಕನ ಬಳಗದ ಅಧ್ಯಕ್ಷರು ಶರಣೆ ಶ್ರೀ ಎಂ. ಬಿ.ಮಹಾಂತಮ್ಮ, ಕಾರ್ಯದರ್ಶಿಗಳು ಶರಣ ಶ್ರೀ ರುದ್ರಮ್ಮ ಸಿದ್ದಯ್ಯನಕೋಟೆ, ಶರಣ ಶ್ರೀ ಈಶಮ್ಮ, ಶರಣ ಶ್ರೀ ಸಂಧ್ಯಾ, ಶರಣ ಶ್ರೀ ಸುನೀತಾ, ಶರಣೆ ಶ್ರೀ ರೂಪ ಕುಮಾರಿ ಅಕ್ಕಮಹಾದೇವಿ, ಹಾಗೂ ಅಕ್ಕನ ಬಳಗದ ಸದಸ್ಯರು ಭಾಗವಹಿಸಿದರು, ಶರಣ ಶ್ರೀ ಚೇತನ್ ಗೌಡರು, ಕಲಾವಿದರಾದ ಪ್ಯಾಡ್ ವಾದಕರು ಮನೋಜ್ ಕುಮಾರ್, ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ತಿಪ್ಪೇಸ್ವಾಮಿ.ಎಚ್.(ಮೀನಕೆರಿ) ಹೊಂಬಾಳೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button