“ಚಿನ್ನದಂತ ಬದುಕಿಗೆ ಬೆಳಕಾಗುವರು”…..

“ಚಿನ್ನದಂತ ಬದುಕಿಗೆ ಬೆಳಕಾಗುವರು”
ಅಪ್ಪ ಅವ್ವ ಜಗದಿ ತಂದವರು
ನಿಜ ದೇವರು
ಅಜ್ಜ ಅಜ್ಜಿ ಸಂಸ್ಕಾರ ಸಂಸ್ಕ್ರೃತಿ
ಕಲಿಸುವ ಮಹಾನರು
ಗುರು ಮಹಾಗುರು ಜ್ಞಾನದ
ಅಮೃತ ದಯಪಾಲಿಪರು
ಹಿರಿಯರು ಶ್ರಮಿಕರು
ಜೀವನ ಕ್ರಮಸವಿ ಹಂಚುವರು
ಅಣ್ಣ ತಮ್ಮ ಎಡಬಲ
ಶಕ್ತಿ ದಾತರು
ಅಕ್ಕ ತಂಗಿ ರಕ್ಷಣೆಗೆ ದೈರ್ಯ
ಗೆಳೆಯ ಗೆಳತಿ ನಿಸ್ವಾರ್ಥ
ಸರಳತೆ ಕಲಿಸುವರು
ಬಂಧು ಬಾಂಧವರು
ಭಾವನೆಗೆ ಭಾಗ್ಯದಾತರು
ನೆರೆ ಹೊರೆಯವರು
ಆಸರೆಗೆ ಹೆಸರಾಗುವರು
ಪತಿ/ಪತ್ನಿ ಬಾಳಿಗೆ
ಕಿರೀಟ ಪ್ರಾಯರು
ಸುಪುತ್ರ ಸುಪುತ್ರಿ ಸಿರಿ
ಸಂಪತ್ತಿಗೆ ಬಾಗಿದಾರರು
ಅಳಿಯ ಸೋಸೆ ನೆರವಿಗೆ
ಮೆರಗು ತರುವರು
ಜೀವನ ಮಾರ್ಗದಿ ಸುರಕ್ಷಿತ
ಸರಳತೆಗಯ ಬದುಕೆಗೆ
ಪರಿಸರ ಪ್ರಾಣಿ ಸಂಕುಲಗಳ
ಸೃಷ್ಠಿಯ ಬಾಳ್ವೆಗೆ ಸಹಭಾಗಿತ್ವ
ಚಿನ್ನದಂತ ಬದುಕಿಗೆ
ಬೆಳಕಾಗುವರು
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ..