ಸಂನ್ಯಾಸಿಗಳಿಗೆ ಅಹಂಕಾರ ಇರಬಾರದು – ಶ್ರೀಮತಿ ಜಿ.ಯಶೋಧಾ ಪ್ರಕಾಶ್.
ಚಳ್ಳಕೆರೆ ಮೇ.09

ಶ್ರೀಮತಿ ಪಾರ್ವತಮ್ಮ ಅವರಿಂದ ಶಿವನ ಭಜನೆ
ಶ್ರೀಮಾತೆ ಶಾರದಾದೇವಿಯವರು ತಿಳಿಸಿದಂತೆ ಸಂನ್ಯಾಸಿಗಳಿಗೆ ಅಹಂಕಾರ ಇರಬಾರದು ಅದು ಅವರ ಆಧ್ಯಾತ್ಮಿಕ ಜೀವನಕ್ಕೆ ಮಾರಕವಾದದ್ದು ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು.
ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರ ನೇತೃತ್ವದಲ್ಲಿ ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ತರಗತಿ
ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಮುನ್ನಡೆಸುವ ಮಹಾಶಕ್ತಿ” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಶ್ರೀರಾಮಕೃಷ್ಣರ ನಾಮಸ್ಮರಣೆ
ಸತ್ಸಂಗದ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮಕೃಷ್ಣರ ನಾಮಸ್ಮರಣೆ, ಪಾರ್ವತಮ್ಮ ಮತ್ತು ಯತೀಶ್ ಎಂ ಸಿದ್ದಾಪುರ ಅವರಿಂದ ವಿಶೇಷ ಭಜನೆ ಹಾಗೂ ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ತರಗತಿ ನಡೆಯಿತು.
ಸತ್ಸಂಗ ಸಭೆಯಲ್ಲಿ ಶ್ರೀಮತಿ ಶಾಂತಮ್ಮ, ಕರಿಬಸಮ್ಮ, ಶಾಂತಾ ನಾಗರಾಜ್, ಈಶ್ವರಮ್ಮ, ತ್ರಿವೇಣಿ, ಪಾರ್ವತಮ್ಮ, ರತ್ನಮ್ಮ, ನಾಗರತ್ನಮ್ಮ, ವಿಜಯಲಕ್ಷ್ಮೀ, ರಶ್ಮಿ ವಸಂತ, ಯಶಸ್ವಿ, ಶೈಲಜಾ, ಕೃಷ್ಣವೇಣಿ, ಸಂಗೀತ, ಭ್ರಮರಂಬಾ, ವೀರಮ್ಮ, ಧ್ರುವ ನಾರಾಯಣ, ನಿಖಿಲೇಶ್ ಯಾದವ್, ಸರಸ್ವತಿ, ಗೀತಾಲಕ್ಷ್ಮೀ, ಮಂಗಳಾ ಯಶವಂತ್ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

