ರಂಜಿತಾ ಕೊಲೆ ಖಂಡಿಸಿ ಸಿ.ಬಿ.ಐ ಗೆ ಆಗ್ರಹಿಸಿ – ಮಹಾತ್ಮ ಪ್ರೊ, ಬಿ ಕೃಷ್ಣಪ್ಪ ಸ್ಥಾಪಿತ ಡಿ.ಎಸ್.ಎಸ್ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ.

ಬಾಗಲಕೋಟೆ ಮೇ.09

ದಿನಾಂಕ:11-03-2026 ರ ರಂಜಿತಾಳನ್ನು ಪುಸಲಾಯಿಸಿ ಬೆಂಗಳೂರಿನ ಕೊಡತಿ ಗ್ರಾಮದ ಮನೆಯಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಕುತ್ತಿಗೆಗೆ ವೈರ್ ಬಿಗಿದು ಕೊಲೆ ಮಾಡಿರುತ್ತಾರೆ. ಆದ್ದರಿಂದ ರಂಜಿತಾಳ ಕೊಲೆಯು ಅತ್ಯಂತ ವ್ಯವಸ್ಥಿತ ಪಿತೂರಿಯಾಗಿದ್ದು.

ಈ ಕೊಲೆ ಪ್ರಕರಣವನ್ನು ಕರ್ನಾಟಕ ಸರ್ಕಾರ ಸಿ.ಬಿ.ಐ ತನಿಖೆಗೆ ಒಪ್ಪಿಸಿ. ಪಿತೂರಿ ಮಾಡಿರುವ ಭೂ ಮಾಲೀಕರ ವಿರುದ್ಧವು ಕ್ರಮ ಜರುಗಿಸಬೇಕು. ಪ್ರೀತಿ ಪ್ರೇಮದ ಹೆಸರಿನಲ್ಲಿ ದಲಿತ ಹೆಣ್ಣುಮಕ್ಕಳನ್ನು ಜಾತಿ ಕಾರಣದಿಂದ ಯಾವುದೇ ಭಯ ಭೀತಿ ಇಲ್ಲದೆ ಕೊಲೆ ಮಾಡಲಾಗುತ್ತಿದೆ. ಇಂಥ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು.

ಸಿ.ಬಿ.ಐ ಗೆ ಆಗ್ರಹಿಸಿ ದಿನಾಂಕ:-11-05-2026 ರಂದು ಸೋಮವಾರ ಸಮಯ 11:30 ಕ್ಕೆ ನವನಗರದ ಡಿ.ಸಿ ಆಫೀಸ್ ಎದುರಿಗೆ ಇರುವ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಬಳಿ ಜಮಾವಣೆ ಗೊಂಡು ಅಂಬೇಡ್ಕರ್ ಪ್ರತಿಮೆಗೆ ಗಾರ್ಲ್ಯಾಂಡ್ ಮಾಡಿದ ನಂತರ ಪ್ರತಿಭಟನೆಯಾಗಿ ಮಾರ್ಪಾಡು ಮಾಡಲಾಗುವುದೆಂದು.

ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಡಿ.ಎಸ್.ಎಸ್ ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ.ಬಿ ಹೊಸಮನಿ, ಬೆಳಗಾವಿ ವಿಭಾಗೀಯ ಸಂಚಾಲಕರು ಹನಮಂತ.ಎಚ್ ಹೀರೆಮನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಲಕ್ಷ್ಮಣ್.ಎಸ್ ಹಾದಿಮನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಪರಸಪ್ಪ.ದುರುಗಪ್ಪ ಮಾದರ, ಜಿಲ್ಲಾ ಸಂಘಟನಾ ಸಂಚಾಲಕರಾದ ಯಮನಪ್ಪ ಭಜಂತ್ರಿ, ಹುನಗುಂದ ತಾಲೂಕ ಸಂಚಾಲಕರಾದ ಮುತ್ತಪ್ಪ ಭಜಂತ್ರಿ, ಭರಮಪ್ಪ. ಫಕೀರಪ್ಪ.ಮಾದರ ತಾಲೂಕ ಸಂಘಟನಾ ಸಂಚಾಲಕರಾದ ಎಮ್.ರವಿ ಸೂಳೇಭಾವಿ, ಮುಧೋಳ ತಾಲೂಕ ಸಂಚಾಲಕರಾದ ಮಲೆಪ್ಪ. ರಾಣಪ್ಪ ತಳಿಗೇರಿ. ಪದಾಧಿಕಾರಿಗಳು, ಕಾರ್ಯಕರ್ತರು ಪ್ರಗತಿಪರ ಹಿತಚಿಂತಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಕೋರುತ್ತೀರುವ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರಾದ ಯಮನಪ್ಪ.ಸಿ ಹಲಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button