ಅರ್ಹ ಎಸ್/ಸಿ, ಎಸ್/ಟಿ ಹಾಗೂ ಇತರೆ ಜಾತಿಯ ವಿದ್ಯಾರ್ಥಿಗಳ – ವಸತಿ ನಿಲಯಗಳಿಗೆ ಪ್ರವೇಶಕ್ಕಾಗಿ ಪ್ರಕಟಣೆ.

ಹುನಗುಂದ ಮೇ.21

2026-27 ನೇ. ಸಾಲಿಗೆ ಹುನಗುಂದ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಡಾ, ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ/ನಂತರದ ಬಾಲಕರ/ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಕ್ಕಾಗಿ ಆನ್‌ ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು.

ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಕೊನೆಯ ದಿನಾಂಕ:30-06-2026 ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಕೊನೆಯ ದಿನಾಂಕ:31/07/2026 ಆಗಿರುತ್ತದೆ. ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಇತರೆ ಜಾತಿಯ ವಿದ್ಯಾರ್ಥಿಗಳು ಈ ಕೆಳಕಂಡ ದಾಖಲೆಗಳೊಂದಿಗೆ ಆನ್‌ ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

1. ವಿದ್ಯಾರ್ಥಿಯ ಕಳೆದ ಸಾಲಿನ ಅಂಕಪಟ್ಟಿ ಪ್ರತಿ (ಎಸ್ಎಸ್‌ಪಿ ಸಂಖ್ಯೆಯೊಂದಿಗೆ)

2. ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ ಪ್ರತಿ. (ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಮಾತ್ರ).

3. ವಿದ್ಯಾರ್ಥಿಯ ಹಾಗೂ ತಂದೆ ತಾಯಿಯ ಆಧಾರ ಕಾರ್ಡ್ ಪ್ರತಿ.

4. ವಿದ್ಯಾರ್ಥಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ಪ್ರತಿ.

5. ವಿದ್ಯಾರ್ಥಿಯ ಇತ್ತಿಚೀನ 2 ಪೋಟೋ (ಪಾಸ್‌ಪೋಟ್ ಸೈಜ್)

6. ಪಾಲಕರ/ ಪೋಷಕರ ಮೊಬೈಲ ಸಂಖ್ಯೆ (ಓಟಿಪಿ ಸಲುವಾಗಿ)

7. ತಹಶೀಲ್ದಾರರಿಂದ ಪಡೆದ ರಹವಾಸಿ.

8. ಆನ್‌ಲೈನ್ ಅರ್ಜಿಯನ್ನು ಶಾಲಾ ಮುಖ್ಯೋಪಾಧ್ಯಯರು/ ಪ್ರಾಂಶುಪಾಲರಿಂದ ದೃಢೀಕರಿಸಿ ಸಲ್ಲಿಸುವುದು.

ಈ ವೆಬ್‌ಸೈಟ್‌ HMIS 5 https://swdhmis.karnataka.gov.in/ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಿ, ಅದರ ಪ್ರತಿಯೊಂದಿಗೆ ಮೇಲ್ಕಂಡ ದಾಖಲೆಗಳನ್ನು ಲಗತ್ತಿಸಿ ದ್ವೀ ಪ್ರತಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹುನಗುಂದ ಕಛೇರಿಗೆ ಸಲ್ಲಿಸುವಂತೆ ಶ್ರೀ ಎಮ್ ಎಚ್ ಕಟ್ಟಿಮನಿ ಸಹಾಯಕ ನಿರ್ದೇಶಕರು (ಗ್ರೇಡ್-2) ಸಮಾಜ ಕಲ್ಯಾಣ ಇಲಾಖೆ ಹುನಗುಂದ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಕಛೇರಿ ಕೆಲಸದ ಅವಧಿಯಲ್ಲಿ ಮೊಬೈಲ್ ಸಂಖ್ಯೆ :9480843060 ಹಾಗೂ ಕಛೇರಿ ದೂರವಾಣಿ ಸಂಖ್ಯೆ:08351-260583 ಮೂಲಕ ಸಂಪರ್ಕಿಸ ಬಹುದಾಗಿದೆ.

ಸಹಾಯಕ ನಿದೇಶಕರು (ಗ್ರೇಡ್- 2) 618 ಕಲ್ಯಾಣ ಇಲಾಖೆ ಹುನಗುಂದ ಇವರ ಪ್ರಕಟಣೆ ಕೋರಿಕೆ ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button