ಎಸ್/ಸಿ ವಿದ್ಯಾರ್ಥಿಗಳಿಗಾಗಿ ಪ್ರೋತ್ಸಾಹ ಧನಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯಿಂದ – ಪತ್ರಿಕಾ ಪ್ರಕಟಣೆ.

ಹುನಗುಂದ ಮೇ.21

2025-26 ನೇ. ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಸ್.ಎಸ್.ಎಲ್.ಸಿ ದ್ವಿತೀಯ ಪಿ.ಯು.ಸಿ ಪದವಿ/ಸ್ನಾತಕೋತ್ತರ ಪದವಿ ಹಾಗೂ ಇತರೆ ಕೋರ್ಸ್‌ಗಳಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮಂಜೂರು ಮಾಡುವ ಕುರಿತು.

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ 2025-26 ನೇ. ಸಾಲಿನಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬಹುಮಾನ ಹಣ ಮಂಜೂರಿಗಾಗಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿ.ಯು.ಸಿ. ಪದವಿ/ಸ್ನಾತಕೋತ್ತರ ಪದವಿ ಅಂತಿಮ ಪರೀಕ್ಷೆ, ಬಿ.ಇಡಿ ಅಂತಿಮ ಪರೀಕ್ಷೆಗಳಲ್ಲಿ ಹುನಗುಂದ ಮತ್ತು ಇಲಕಲ್ಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸರಕಾರಿ/ಖಾಸಗಿ ಕಾಲೇಜುಗಳಲ್ಲಿ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಆನ್‌ ಲೈನ್ ಅರ್ಜಿ ಆಹ್ವಾನಿಸಲಾಗಿದ್ದು,

ಪ್ರಯುಕ್ತ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು https://swdservices.karnataka.gov.in/PrizeMoneyClientApp/ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳನ್ನು ವ್ಯಾಸಂಗ ಮಾಡಿದ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ ಈ ಕಾರ್ಯಾಲಯಕ್ಕೆ ಸಲ್ಲಿಸಲು ಸೂಚಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಹುನಗುಂದ ಕಾರ್ಯಾಲಯಕ್ಕೆ ಸಂಪರ್ಕಿಸಲು ಸೂಚಿಸಿದೆ. ದೂರವಾಣಿ -9480843060

2025-26 ನೇ. ಸಾಲಿನ ಬಹುಮಾನ

ಕೋರ್ಸ್

ಪ್ರೈಜ್ ಮನಿ

ಎಸ್.ಎಸ್.ಎಲ್.ಸಿ

ರೂ 15,000

II ಪಿ.ಯು.ಸಿ

ರೂ.20,000

3-ವರ್ಷದ ಪಾಲಿಟೆಕ್ನಿಕ್ ಡಿಪ್ಲೊಮಾ

ರೂ.20,000

ಪದವಿ

ರೂ.25,000

ಎಂ.ಎ, ಎಂ.ಎಸ್ಸಿ, ಇತ್ಯಾದಿ ಯಾವುದೇ ಸ್ನಾತಕೋತ್ತರ ಕೋರ್ಸ್‌ಗಳು.

ರೂ.30,000

ಕೃಷಿ, ಎಂಜಿನಿಯರಿಂಗ್, ಪಶು ವೈದ್ಯಕೀಯ, ವೈದ್ಯಕೀಯ

ರೂ.35,000

ವಿಶೇಷ ಸೂಚನೆ:-

ಪರಿಶಿಷ್ಟ ಜಾತಿ 2025-26 ನೇ. ಸಾಲಿನ ಪ್ರಥಮ ದರ್ಜೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಆನ್‌ ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಸಹಾಯಕ ನಿದೇಶಕರು (ಗ್ರೇಡ್- 2)

ಸಮಾಜ ಕಲ್ಯಾಣ ಇಲಾಖೆ ಹುನಗುಂದ

ಪ್ರತಿಗಳನ್ನು ತಮ್ಮ ಅವಗಾಹನೆಗಾಗಿ:-

1. ಮಾನ್ಯ ಉಪನಿದೇರ್ಶಕರು ಸಮಾಜ ಕಲ್ಯಾಣ ಇಲಾಖೆ ಬಾಗಲಕೋಟೆ ರವರಿಗೆ ಮಾಹಿತಿಗಾಗಿ ಗೌರವ ಪೂರ್ವಕವಾಗಿ ಸಲ್ಲಿಸಿದೆ.

2. ವಾರ್ತಾ ಮತ್ತು ಪ್ರಚಾರ ಇಲಾಖೆ ಅಧಿಕಾರಿಗಳು ಬಾಗಲಕೋಟೆ ರವರಿಗೆ 2/-ಮೇಲ್ಕಂಡ ಪ್ರಕಟಣೆಯನ್ನು ಪ್ರಮುಖ ಕನ್ನಡ ದಿನ ಪತ್ರಿಕೆಗಳಲ್ಲಿ ಉಚಿತವಾಗಿ ಪ್ರಕಟಿಸಿ ಪ್ರಚಾರ ಪಡಿಸಲು ವಿನಂತಿಸಿದೆ.

3. ಮಾನ್ಯ ತಹಶೀಲದ್ದಾರರು ಹುನಗುಂದ ರವರ ಕಾರ್ಯಾಲಯದ ಸೂಚನಾ ಫಲಕಕ್ಕೆ ವ್ಯಾಪಕ ಪ್ರಚಾರಕ್ಕಾಗಿ ಸಲ್ಲಿಸಿದೆ.

4. ಮಾನ್ಯ ಕಾರ್ಯಾನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ ಹುನಗುಂದ ರವರ ಕಾರ್ಯಾಲಯದ ಸೂಚನಾ ಫಲಕಕ್ಕೆ ವ್ಯಾಪಕ ಪ್ರಚಾರಕ್ಕಾಗಿ ಸಲ್ಲಿಸಿದೆ ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button