ಅನರ್ಘ್ಯ ರತ್ನಗಳ ಭಂಡಾರ ಶ್ರೀಮದ್ ಭಗವದ್ಗೀತೆ – ಮಾತಾಜೀ ತ್ಯಾಗಮಯೀ.

ಚಳ್ಳಕೆರೆ ಜೂ.06

ಪೂಜ್ಯ ಮಾತಾಜೀ ತ್ಯಾಗಮಯೀ ಅವರ ಮಾರ್ಗದರ್ಶನದಲ್ಲಿ ಧ್ಯಾನಾಭ್ಯಾಸ

ಶ್ರೀಕೃಷ್ಣನಿಂದ ಅರ್ಜುನನಿಗೆ ಕುರುಕ್ಷೇತ್ರ ರಣರಂಗದಲ್ಲಿ ಬೋಧಿಸಲ್ಪಟ್ಟ ಶ್ರೀಮದ್ ಭಗವದ್ಗೀತೆಯು ಅಸಂಖ್ಯಾತ ಅನರ್ಘ್ಯ ರತ್ನಗಳ ಭಂಡಾರ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಭಕ್ತರಿಗಾಗಿ ಆಯೋಜಿಸಿದ್ದ ಒಂದು ದಿನದ “ಆಧ್ಯಾತ್ಮಿಕ ಶಿಬಿರ” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಧ್ಯಾನಾಭ್ಯಾಸ ನಡೆಸಿ ಕೊಟ್ಟ ಅವರು “ಶ್ರೀಮದ್ ಭಗವದ್ಗೀತೆಯ ಅನರ್ಘ್ಯ ರತ್ನಗಳು” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡುತ್ತಾ ಮಾತನಾಡಿದರು.

ಶ್ರೀಮದ್ ಭಗವದ್ಗೀತೆಯಲ್ಲಿ ನಾವು ಪ್ರಧಾನವಾಗಿ ಆತ್ಮವಾನ್, ಧರ್ಮ ಸಂಸ್ಥಾಪನಾರ್ಥಯ ಎಂಬ ಅನರ್ಘ ರತ್ನಗಳನ್ನು ಗುರುತಿಸಬಹುದು. ನಮ್ಮಲ್ಲೇ ನಾವು ಸದಾ ಇರುವುದರಿಂದ ಆತ್ಮಸ್ವರೂಪವನ್ನು ಕಂಡು ಕೊಳ್ಳಬಹುದು‌.

“ಶ್ರೀಮದ್ ಭಗವದ್ಗೀತೆಯ ಅನರ್ಘ್ಯ ರತ್ನಗಳು” ಎಂಬ ವಿಷಯವಾಗಿ ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ವಿಶೇಷ ಪ್ರವಚನ

ಭಗವಂತ ಅವತಾರವನ್ನು ಎತ್ತುವುದು ಧರ್ಮದ ಪುನರ್ ಸ್ಥಾಪನೆಗಾಗಿ-ಶಿಷ್ಟರ ರಕ್ಷಣೆಗಾಗಿ ದುಷ್ಟರ ಸಂಹಾರಕ್ಕಾಗಿ ಎಂಬುದನ್ನು ಭಗವದ್ಗೀತೆ ತಿಳಿಸುತ್ತದೆ ಎಂದರು.

ಆತ್ಮಾರಾಮ ಆನಂದರಮಣ

ಶಿಬಿರದ ಪ್ರಯುಕ್ತ ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರಿಂದ ವಿಶೇಷ ಭಜನೆ, ಆಧ್ಯಾತ್ಮಿಕ ಪ್ರಶ್ನೋತ್ತರ, ಶ್ರೀಶಾರದಾದೇವಿ ಜೀವನಗಂಗಾ ಕ್ವಿಜ್, ಯತೀಶ್ ಎಂ ಸಿದ್ದಾಪುರ ಅವರಿಂದ “ಆಧ್ಯಾತ್ಮಿಕ ಜೀವನದಲ್ಲಿ ಭಜನೆಗಳ ಪಾತ್ರ” ಎಂಬ ವಿಷಯವಾಗಿ ಉಪನ್ಯಾಸ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ ಅವರಿಂದ ಆಧ್ಯಾತ್ಮಿಕ ಪ್ರಶ್ನೋತ್ತರ ಉಪನ್ಯಾಸ, ಕಾಫಿ ವಿತರಣೆ, ಅನ್ನಪ್ರಸಾದ ವಿನಿಯೋಗ ನಡೆಯಿತು.

ಪನ್ನಗಭೂಷಣ ಪರಮಶಿವ

ಶಿಬಿರದಲ್ಲಿ ಎಚ್ ಲಕ್ಷ್ಮೀದೇವಮ್ಮ, ಪ್ರೇಮಾ, ಮಲ್ಲಿಕಾರ್ಜುನ, ಲೋಕೇಶ್, ಪದ್ಮಾವತಿ, ಮದ್ದಿಹಳ್ಳಿ ಜಯಪ್ಪ, ಗೌರಮ್ಮ, ಜಯಮ್ಮ, ಕೆಂಚಮ್ಮ, ಮಹಾದೇವಮ್ಮ, ದೊಡ್ಡಜ್ಜಯ್ಯ, ಗೋವಿಂದರೆಡ್ಡಿ, ಅಂಬುಜಾ, ಕವಿತಾ, ವನಜಾಕ್ಷಿ,ಜಿ ಯಶೋಧಾ, ಸುಮಂಗಳಮ್ಮ, ವಿಜಯಲಕ್ಷ್ಮೀ, ಸಂಗೀತ, ಸರಸ್ವತಿ, ಗೋವಿಂದರಾಜು, ಜಿ.ಬಿ ಗೀತಾ, ಸರಸ್ವತಿ ಪಾಂಡು, ಪಂಕಜಾ, ಯತೀಶ್ ಎಂ ಸಿದ್ದಾಪುರ, ಗಂಗಾಧರಶೆಟ್ಟಿ, ಹೂವಿನ ಲಕ್ಷ್ಮೀದೇವಿ, ರಾಧಾ, ನಾಗರತ್ನಮ್ಮ, ಕಲ್ಪನಾ, ಪ್ರೇಮಲೀಲಾ, ಮಂಜುಳಮ್ಮ, ಸುಧಾಮಣಿ, ಸೌಮ್ಯ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button