ಶ್ರೀಶಾರದಾಶ್ರಮದಲ್ಲಿ ಮಹಾ ತೀರ್ಥಗಳಲ್ಲಿ – ಮಹಾ ಮಾತೆಯ ಪ್ರವಚನ.

ಚಳ್ಳಕೆರೆ ಜೂ.07

ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ದಿವ್ಯತ್ರಯರಿಗೆ ಮಂಗಳಾರತಿ…

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು “ಮಹಾ ತೀರ್ಥಗಳಲ್ಲಿ ಮಹಾಮಾತೆ” ಎಂಬ ವಿಷಯವಾಗಿ ವಿಶೇಷ ಪ್ರವಚನವನ್ನು ನೀಡಿದರು.

ಪಾಹಿ ಪಾಹಿ ಗಜಾನನ-ಶ್ರೀಮತಿ ವನಜಾಕ್ಷಿ ಮೋಹನ್ ಅವರಿಂದ…

ಶ್ರೀಮಾತೆ ಶಾರದಾದೇವಿಯವರು ಶ್ರೀರಾಮಕೃಷ್ಣರ ಮಹಾ ಸಮಾಧಿಯ ನಂತರ ವೈದ್ಯನಾಥ, ವಾರಾಣಾಸಿ, ಬೃಂದಾವನ, ಪ್ರಯಾಗರಾಜ್ ಗೆ ಕೈಗೊಂಡ ತೀರ್ಥ ಯಾತ್ರೆಯ ಬಗ್ಗೆ ವಿವರಿಸಿದರು.

ಸತ್ಸಂಗದ ಆರಂಭದಲ್ಲಿ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

“ಮಹಾತೀರ್ಥಗಳಲ್ಲಿ ಮಹಾಮಾತೆ” ಎಂಬ ವಿಷಯವಾಗಿ ಪೂಜ್ಯ ಮಾತಾಜೀ ಅವರಿಂದ ಪ್ರವಚನ.🌺

ಕಾರ್ಯಕ್ರಮದಲ್ಲಿ ವನಜಾಕ್ಷಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಅಂಬುಜಾ, ಕವಿತಾ, ಮಂಜುಳಮ್ಮ, ಗೀತಾ ವೆಂಕಟೇಶ್, ದೇವೇಂದ್ರಪ್ಪ, ಶ್ರೀನಿವಾಸಲು, ಚೆನ್ನಕೇಶವ, ವೆಂಕಟೇಶ್, ಬಿ.ಸುಮನಾ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button