ಪರಿಸರ ವೃದ್ಧಿ ಹಾಗೂ ಸಂರಕ್ಷಣೆಗೆ ಪ್ರತಿಯೊಬ್ಬರು ಶ್ರಮಿಸಬೇಕು – ಜೋಗೂರ.

ಆಲಮೇಲ ಜೂ.06

ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಮಕ್ಕಳಿಂದ ಸಸಿಗೆ ನಿರೂಣಿಸುವ ಮೂಲಕ ಆಚರಿಸಲಾಯಿತು.

ಈ ವೇಳೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಶೈಲಪ್ಪ ಜೋಗೂರ ರವರು ಇಂದಿನ ಜಾಗತಿಕ ತಾಪಮಾನ ಗಮನಿಸಿದರೆ ಗಿಡ ಮರಗಳ ಕೊರತೆ ಎಷ್ಟು ಇದೆ ಎಂಬುದು ಉಷ್ಣಾಂಶದ ಮುಖಾಂತರ ತಿಳಿದು ಬರತಾ ಇದೆ.

ಹಾಗಾಗಿ ಪರಿಸರದಲ್ಲಿನ ಈ ಅಸಮತೋಲನ ಕಾಪಾಡಿ ಕೊಂಡು ಹೋಗ ಬೇಕಾದರೆ ಇಂದು ನಾವೆಲ್ಲರೂ ಜಾಗೃತರಾಗಿ ಪ್ರತಿ ಮನೆ, ರಸ್ತೆ, ಶಾಲೆ ಹೀಗೆ ಎಲ್ಲಿ ಸಾಧ್ಯವೋ ಅಲ್ಲಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಸಂರಕ್ಷಣೆ ಮಾಡಲು ಪ್ರತಿಜ್ಞೆ ಮಾಡಬೇಕು.

ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಜನ್ಮ ದಿನಾಚರಣೆಯಂದು ಒಂದು ಸಸಿ ಯನ್ನು ನೆಟ್ಟು ಅದರ ಪೋಷಣೆಯ ಜವಾಬ್ದಾರಿ ತೆಗೆದು ಕೊಳ್ಳಬೇಕು ಅಂದಾಗ ಮಾತ್ರ ತಮ್ಮ ಹುಟ್ಟು ಹಬ್ಬದ ರೂಪದಲ್ಲಿ ಪರಿಸರಕ್ಕೆ ಅತ್ಯಮೂಲ್ಯ ಕೊಡುಗೆ ಕೊಟ್ಟಂತಾಗುತ್ತದೆ ಎಂದರು.

ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ಮಾತನಾಡಿ ನಾವೆಲ್ಲರೂ ಉಸಿರಾಟಕ್ಕೆ ಆಮ್ಲಜನಕವನ್ನು ಪಡೆದುಕೊಳ್ಳ ಬೇಕಾದರೆ ಗಿಡಗಳು ಬೇಕೆ ಬೇಕು ಮತ್ತು ನಾವು ಉಸಿರಾಟದ ಮುಖಾಂತರ ಬಿಡುಗಡೆ ಮಾಡುವ ಇಂಗಾಲದ ಡೈಆಕ್ಸೈಡ್ ಅನ್ನು ಗಿಡಗಳು ಪಡೆದುಕೊಂಡು ಜೀವಿಸುತ್ತವೆ ಹಾಗಾಗಿ ನಮಗೂ ಹಾಗೂ ಸಸ್ಯಗಳಿಗೂ ಅವಿನಾಭಾವ ಸಂಬಂಧವಿದೆ ಆದ್ದರಿಂದ ನಮ್ಮ ಜೀವದ ಪ್ರಮುಖ ಅಂಶವಾದ ಸಸ್ಯ ಸಂಕುಲವನ್ನು ಉಳಿಸಿ ಕೊಂಡು ಬೆಳೆಸಿ ಕೊಂಡು ಹೋಗುವುದು ನಮ್ಮೆಲ್ಲರ ಹೊಣೆ.

ಪರಿಸರ ಮಾಲಿನ್ಯ ಮಾಡದೆ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿ ಕಾಪಾಡಿ ಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ಈ ವೇಳೆ ಶಿಕ್ಷಕರಾದ ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೆಮನಿ, ಸುವರ್ಣ ಸಾರಂಗಮಠ, ಸರುಬಾಯಿ ಬಂಡಗರ, ಸುನೀತಾ ಗುಂಡದ, ಐಶ್ವರ್ಯ ಬೇಪಾರಿ ಇದ್ದರು ಚಂದ್ರಕಾಂತ ದೇವರಮನಿ ನಿರೂಪಿಸಿದರು ಸೀತಾ ಆರೇಶಂಕರ ವಂದಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಹಿರೇಮಠ.ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button