ಸ್ಪೂರ್ತಿದಾಯಕ ಪ್ರವಚನಗಳ ಸರದಾರ ಸ್ವಾಮಿ ರಂಗನಾಥಾನಂದಜೀ – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಜು.19

ಶ್ರೀರಾಮಕೃಷ್ಣ ಮಹಾಸಂಘದ ಪರಮಾಧ್ಯಕ್ಷರಾಗಿದ್ದ ಸ್ವಾಮಿ ರಂಗನಾಥಾನಂದಜೀ ಅವರ ಪ್ರವಚನಗಳು ಸ್ಪೂರ್ತಿದಾಯಕವಾಗಿದ್ದವು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯ ಪಟ್ಟರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಸ್ವಾಮಿ ರಂಗನಾಥಾನಂದಜೀ” ಅವರ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಸ್ವಾಮಿ ರಂಗನಾಥಾನಂದಜೀ ಅವರು ಕಿರಿಯ ಸಾಧು-ಬ್ರಹ್ಮಚಾರಿಗಳಿಗೂ ಸೂಕ್ತವಾದ ಗೌರವ ಕೊಡುತ್ತಿದ್ದರು.ಅವರು ದೇಶ ಕಾಲಗಳ ಗಡಿಯನ್ನು ಮೀರಿ ನಿಂತ ಮಹಾನ್ ಸಂತ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗದಲ್ಲಿ ಶ್ರೀಮತಿ ವನಜಾಕ್ಷಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಪಂಕಜಾ, ಕವಿತಾ,ಶ್ರೀಪಾದ್, ಚೇತನ್, ಬಿ.ಸುಮನಾ, ಪ್ರವಲ್ಲಿಕಾ, ಸುಧಾಮಣಿ, ಅಂಬುಜಾ, ಹೃತಿಕ್, ಲಕ್ಷ್ಮೀ, ಚೆನ್ನಕೇಶವ, ಗೀತಾ ವೆಂಕಟೇಶ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ..

