ಕೆ.ಡಿ.ಪಿ ಸಭೆಯಲ್ಲಿ ಆಡಳಿತ ಅಧಿಕಾರಿಗಳಿಗೆ ಈ ಬಾರಿ ಬರ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಯಾಗದಂತೆ – ಕಾರ್ಯ ನಿರ್ವಹಿಸಿ ಎಂದು ಸೂಚಿಸಿದ ಶಾಸಕರು.

ಮೊಳಕಾಲ್ಮುರು ಜು.19

ತಾಲೂಕ ಆಡಳಿತ ಸಭಾಂಗಣದಲ್ಲಿ ಮಾನ್ಯ ಜನಪ್ರಿಯ ಶಾಸಕರಾದ ಶ್ರೀ ಎನ್.ವೈ ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.

ಸಭೆಯಲ್ಲಿ ತಾಲೂಕ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಮುಂಬರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮಳೆಯನ್ನೇ ನಂಬಿ ಒಣ ಬೇಸಾಯ ಮಾಡುವ ರೈತರು ಈ ತಿಂಗಳು ಇನ್ಸೂರೆನ್ಸ್ ಗಳು ಕಟ್ಟಬೇಕು ಕಾರಣ ಮಳೆ ಬಾರದೆ ಬೆಳೆ ನಷ್ಟವಾಗಿರುವುದರಿಂದ ಮುಂದೆ.

ಇನ್ಶೂರೆನ್ಸ್ ಕಟ್ಟಿದಂತಹ ರೈತನಿಗೆ ಇನ್ಸೂರೆನ್ಸ್ ಕಂಪನಿಯಿಂದ ಅನುಕೂಲವಾಗುತ್ತದೆ ಎಂದು ಈಗಿನಿಂದಲೇ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಮಾಹಿತಿ ತಿಳಿಸಬೇಕು ಎಂದು ಶಾಸಕರು ತಿಳಿಸಿದರು.

ಅಗತ್ಯ ಸಿದ್ಧತೆ ಮಾಡಿಕೊಂಡು, ಸಾರ್ವಜನಿಕರಿಗೆ ಯಾವುದೇ ತೊಂದರೆ ಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮಾನ್ಯ ಶಾಸಕರು ಸೂಚನೆ ನೀಡಿದರು.

ಸರ್ಕಾರದ ಯೋಜನೆಗಳು ಜನರಿಗೆ ಸಮಯಕ್ಕೆ ತಲುಪುವಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ ಎಚ್ ಮೀನಕೆರಿ ಹೊಂಬಾಳೆ ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button