ಕಠಿಣ ಪರಿಶ್ರಮದಿಂದ ಐಎಎಸ್, ಐಪಿಎಸ್ – ಸಾಧನೆ ಸಾಧ್ಯ – ಡಿಐಜಿ ಜಿನೇಂದ್ರ ಖಣಗಾವಿ.
ಮಾನ್ವಿ ಜು.21

ಕಠಿಣ ಪರಿಶ್ರಮ, ಸ್ಪಷ್ಟ ಗುರಿ ಹಾಗೂ ನಿರಂತರ ಅಭ್ಯಾಸದ ಮೂಲಕ ಯಾವುದೇ ವಿದ್ಯಾರ್ಥಿಯೂ ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂದು ಬೆಂಗಳೂರು ಬಂದಿಖಾನೆ ಡಿಐಜಿ ಜಿನೇಂದ್ರ ಖಣಗಾವಿ, ಐಪಿಎಸ್ ಹೇಳಿದರು.
ಪಟ್ಟಣದ ಕಲ್ಮಠ ಗುರು ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾನ್ವಿ ತಾಲೂಕು ಘಟಕ, ಮಾಧ್ಯಮ ಸಮಿತಿ ಮಾನ್ವಿ–ಸಿರವಾರ–ಕವಿತಾಳ, ತಾಲೂಕು ಖಾಸಗಿ ಕಾಲೇಜುಗಳ ಉಪನ್ಯಾಸಕರ ಸಂಘ, ಭೀಮರಾಯ ಸ್ಟಡಿ ಸರ್ಕಲ್ ಹಾಗೂ ದಿಕ್ಸೂಚಿ ಸ್ಪರ್ಧಾತ್ಮಕ ಮಾಸ ಪತ್ರಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಒಂದು ದಿನದ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಎಎಸ್ ಹುದ್ದೆಗಳು ಕೇವಲ ಉತ್ತರ ಪ್ರದೇಶದವರ ಪಾಲಲ್ಲ. ಕರ್ನಾಟಕದ ಅನೇಕರು ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಬರೆದು ಯಶಸ್ಸು ಸಾಧಿಸಿದ್ದಾರೆ. ಕೃತಕ ಬುದ್ಧಿ ಮತ್ತೆಯ ಯುಗದಲ್ಲಿ ಕೇವಲ ಶೈಕ್ಷಣಿಕ ಪದವಿಗಳಿಂದ ಉದ್ಯೋಗ ಸಿಗುವುದಿಲ್ಲ. ಹೆಚ್ಚಿನ ಸರ್ಕಾರಿ ನೇಮಕಾತಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ನಡೆಯುತ್ತಿರುವುದ ರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧತೆ ನಡೆಸಬೇಕು. ಹೈದರಾಬಾದ್ ಕರ್ನಾಟಕ ಭಾಗಕ್ಕೆ ದೊರೆತಿರುವ 371(ಜೆ) ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆ ಯಾಗಬೇಕು ಎಂದು ಕರೆ ನೀಡಿದರು.
ರಾಯಚೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಹರೀಶ್ ಮಾತನಾಡಿ, ಐಎಎಸ್ ಪರೀಕ್ಷೆಗಳು ಕಠಿಣವಲ್ಲ, ವಿಭಿನ್ನವಾಗಿರುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಬೆಳೆಸಿ ಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಪ್ರಶ್ನಿಸುವ ಮನೋಭಾವ ಬೆಳೆಸಿ ಕೊಳ್ಳಬೇಕು. ಮೊಬೈಲ್ ಅನ್ನು ಸಕಾರಾತ್ಮಕವಾಗಿ ಬಳಸಿ ಕೊಂಡು ವಿಶ್ವದ ಜ್ಞಾನವನ್ನು ಪಡೆದು ಕೊಳ್ಳುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುವರ್ಣಗಿರಿ ವಿರಕ್ತ ಮಠದ ಅಡವಿ ಅಮರೇಶ್ವರ ಶ್ರೀ ತೋಂಟದಾರ್ಯ ಮಹಾ ಸ್ವಾಮಿಗಳು ವಹಿಸಿದ್ದರು. ಮಾನ್ವಿ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ (ಕ.ಆ.ಸೇ.), ಸಂಪನ್ಮೂಲ ವ್ಯಕ್ತಿಗಳಾದ ದಿಕ್ಸೂಚಿ ಸ್ಪರ್ಧಾತ್ಮಕ ಮಾಸ ಪತ್ರಿಕೆ ಸಂಪಾದಕ ಎ.ಟಿ. ಪಾಟೀಲ್, ಮೈಸೂರಿನ ಅರ್ಥಶಾಸ್ತ್ರಜ್ಞ ನೇ.ತಿ. ಸೋಮಶೇಖರ್ ಹಾಗೂ ಧಾರವಾಡದ ರಾಜರತ್ನ ಅಕಾಡೆಮಿಯ ಜಗದೀಶ್ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಮಾನ್ವಿ ಪೊಲೀಸ್ ಠಾಣೆಯ ಪಿಐ ಸೋಮಶೇಖರ ಎಸ್.ಕೆಂಚರೆಡ್ಡಿ, ಕಲ್ಮಠದ ಸಂಗಯ್ಯಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಅರುಣಚಂದಾ, ಮಾಧ್ಯಮ ಸಮಿತಿ ಅಧ್ಯಕ್ಷ ರಾಜಶೇಖರ ಸ್ವಾಮಿ, ಗೌರವಾಧ್ಯಕ್ಷ ಸಿದ್ದರಾಮಯ್ಯಸ್ವಾಮಿ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ್, ಗುಮ್ಮ ಬಸವರಾಜ್ (ವಕೀಲರು), ತಾಲೂಕು ಖಾಸಗಿ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಆಂಜನೇಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

