ಮಧುರಚೆನ್ನರು ಜನ ಮಾನಸದಲ್ಲಿ ಉಳಿದ ದಾರ್ಶನಿಕ ಕವಿ – ಸಿ.ಎಂ ಬಂಡಗಾರ.
ಆಲಮೇಲ ಆ.01

ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಕವಿ ಮಧುರ ಚೆನ್ನರು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದ ದಾರ್ಶನಿಕ ಕವಿ ಭೀಮೆಯ ತಟದಲ್ಲಿ ಹುಟ್ಟಿ ಬೆಳೆದ ಅವರು ತಮ್ಮ ಕಾವ್ಯದ ಮೂಲಕ ನಮ್ಮ ನೆಲದ ಅಸ್ಮಿತೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ ಎಂದು ಸಾಹಿತಿ ಸಿ.ಎಂ ಬಂಡಗಾರ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲಸಂಗಿ ಗೆಳೆಯ ವತಿಯಿಂದ ಪ್ರತಿಷ್ಠಾನ ಹಾಗೂ ಕಲ್ಪವೃಕ್ಷ ಕಲಾವಾಣಿಜ್ಯ ಮತ್ತು ವಿಜ್ಞಾನ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಮಧುರಚೆನ್ನರ 123 ನೇ. ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಸರ್ಗದೊಂದಿಗೆ ಕಾವ್ಯದ ಲೇಪನ ಮಾಡಿ ಜಾಗತಿಕ ಆಧ್ಯಾತ್ಮಿಕ ಸಾಹಿತ್ಯಲೋಕದಲ್ಲಿ ಮಧುರ ಚೆನ್ನರು ವಿಶಿಷ್ಟ ಹೆಸರನ್ನು ಗಳಿಸಿದ್ದು, ಹಲಸಂಗಿಯನ್ನು ನವೋದಯ ಕಾವ್ಯದ ಕೇಂದ್ರವನ್ನಾಗಿ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಪವೃಕ್ಷ ಕಾಲೇಜಿನ ಪ್ರಾಂಶುಪಾಲ ಎ.ಬಿ ಸಿಂದಗಿ ಮಾತನಾಡಿ ಮಧುರ ಚೆನ್ನರ ಸಾಹಿತ್ಯ ಮತ್ತು ಚಿಂತನೆಯ ಮೇಲೆ ಶ್ರೀ ಅರವಿಂದರ ಪ್ರಭಾವ ಸಾಕಷ್ಟಿತ್ತು.
ಅನುಭಾವದ ನೆಲೆಯಲ್ಲಿ ಅವರು ಸೃಷ್ಟಿಸಿದ ವಿಶಿಷ್ಟ ಸಾಹಿತ್ಯ ಕನ್ನಡಕ್ಕೆ ಅಮೂಲ್ಯ ಕೊಡುಗೆ ಯಾಗಿದ್ದು, ಅವರ ಸಾಹಿತ್ಯ ಪರಂಪರೆ ಸದಾ ಅವಿಸ್ಮರಣೀಯವಾಗಿರಲಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಜ್ಯೋತಿಬೆಳಗಿಸಿ ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಉದ್ಘಾಟಿಸಿದರು.
ಮಧುರ ಚೆನ್ನರ ಮೊಮ್ಮಕ್ಕಳಾದ ಜಗದೀಶ ಗಲಗಲಿ, ಹಾಗೂ ಮಹಾದೇವಿ ಗಲಗಲಿ ಮಾತನಾಡಿ, ಕವಿಯ ಬದುಕು, ಸಾಹಿತ್ಯ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಸ್ಮರಿಸಿದರು.
ಪ್ರತಿಷ್ಠಾನದ ಸದಸ್ಯ ಬಿ.ಆರ್ ಬನಸೋಡೆ ಪ್ರಾಸ್ತಾವಿಕವಾಗಿ ಮಾತನಾಡಿ ಮಧುರಚೆನ್ನರು ಓದಿದ್ದು ೭ ನೇ.ತರಗತಿಯಿದ್ದರೂ ೨೨ ಭಾಷೆಗಳನ್ನು ಬಲ್ಲವರಾಗಿದ್ದರು ಎಂದರು.
ವೇದಿಕೆಯಲ್ಲಿ ಪ್ರತಿಷ್ಠಾನದ ಸದಸ್ಯರಾದ ಪುಲಕೇಶಿ ಪುರುಷೋತ್ತಮ ಗಲಗಲಿ ಹಾಗೂ ದಾಕ್ಷಾಯಣಿ ಬಿರಾದಾರ, ಅಂಜನಾ ಇಜೇರಿ ಜಿಲಾನಿ ನಾಗಾವಿ ಉಪಸ್ಥಿತರಿದ್ದರು.ಪ್ರತಿಷ್ಠಾನದ ಕಾರ್ಯದರ್ಶಿ ಸಂತೋಷ ಭೋವಿ ಸ್ವಾಗತಿಸಿದರು. ಸದಸ್ಯ ಡಾ, ರಮೇಶ ಕತ್ತಿ ವಂದಿಸಿದರು.
ಪ್ರೊ. ಜಿ.ಎಂ ಪಾಟೀಲ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಲಾವಿದ ಭೀಮು ಕಟ್ಟಿಮನಿ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆದವು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಪ್ಪಯ್ಯ ಹಿರೇಮಠ ಆಲಮೇಲ

