ವಿದ್ಯಾರ್ಥಿಗಳು ಆದರ್ಶವನ್ನು ಇಟ್ಟು ಕೊಳ್ಳಬೇಕು – ಮಾತಾಜೀ ತೇಜೋಮಯೀ.

ಚಳ್ಳಕೆರೆ ಆ.01

ಪೂಜ್ಯ ಮಾತಾಜೀಯವರು, ಶಿಕ್ಷಕರು, ವಿದ್ಯಾರ್ಥಿ ವೃಂದ…..

ವಿದ್ಯಾರ್ಥಿ ಜೀವನದ ಸಾರ್ಥಕತೆಗೆ ಆದರ್ಶ ಮತ್ತು ಪ್ರಾರ್ಥನೆ ಬಹಳ ಮುಖ್ಯ ಎಂದು ಹುಬ್ಬಳಿಯ ಶ್ರೀಮಾತಾ ಆಶ್ರಮದ ಅಧ್ಯಕ್ಷರಾದ ಮಾತಾಜೀ ತೇಜೋಮಯೀ‌ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಎಸ್.ಆರ್.ಎಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಾತಾಜೀ ತ್ಯಾಗಮಯೀ ನೇತೃತ್ವದಲ್ಲಿ ಧ್ಯಾನಾಭ್ಯಾಸ…..

ವಿದ್ಯಾರ್ಥಿಗಳು ಪ್ರಾಮಾಣಿಕತೆ, ಆತ್ಮವಿಶ್ವಾಸ, ಧೈರ್ಯ, ಏಕಾಗ್ರತೆ, ಸಹನೆಯಂತಹ ಸದ್ಗುಣಗಳನ್ನು ಬೆಳೆಸಿ ಕೊಳ್ಳಬೇಕು. ಆದರ್ಶಕ್ಕಾಗಿ ಬದುಕಬೇಕು. ಪ್ರತಿ ನಿತ್ಯ ಪ್ರಾರ್ಥನೆ ಮಾಡುವುದನ್ನು ರೂಢಿಸಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಯತೀಶ್ ಎಂ ಸಿದ್ದಾಪುರ ಅವರಿಂದ ಪ್ರಾರ್ಥನೆ, ಭಜನೆ ನಡೆದರೆ ಮಾತಾಜೀ ತ್ಯಾಗಮಯೀ ಅವರಿಂದ ಧ್ಯಾನಾಭ್ಯಾಸ ನಡೆಯಿತು.

ಈ ಸಂದರ್ಭದಲ್ಲಿ ಶಿಕ್ಷಕರಾದ ಲತಾ, ರಶ್ಮಿ, ಸುಧಾಮಣಿ, ವೀಣಾ, ಪುಷ್ಪಲತಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button