🪔ನಿಧನ ವಾರ್ತೆ – ತೀವ್ರ ಅನಾರೋಗ್ಯದಿಂದ ಬಿ. ಹನುಮೇಶ್ ನಿಧನ🪔
ಗೆದ್ದಲಗಟ್ಟೆ ಸೆ.20

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ಗೆದ್ದಲಗಟ್ಟೆ ಗ್ರಾಮದ ನಿವಾಸಿಯಾದ ಇವರು ತಮ್ಮ ಜೀವನದ ಸರಿ ಸುಮಾರು 30 ವರ್ಷಗಳು ದಲಿತ ಜನರ ಏಳಿಗೆಗಾಗಿ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತವಾದ ದಲಿತ ಸಂಘರ್ಷ ಸಮಿತಿಯಲ್ಲಿ ಮುಖಂಡರು ಆಗಿದ್ದು ಕೇಲವು ವರ್ಷಗಳು ತಾಲ್ಲೂಕು ಅಧ್ಯಕ್ಷರು, ಹಾಗೂ ಜಿಲ್ಲಾ ಸಂಘಟನೆಯ ಸಲಹೆಗಾರನಾಗಿಯೂ ಕಾರ್ಯ ನಿರ್ವಹಿಸಿ ಅನೇಕ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ರೀತಿಯ ಹೋರಾಟಗಳಲ್ಲಿ ಭಾಗವಹಿಸಿ.
ತಮ್ಮದೇ ಆದ ಸಮುದಾಯದಕ್ಕೆ ಹಾಗೂ ಇನ್ನೂ ಇತರ ಸಮುದಾಯದ ಜನಗಳಿಗೆ ತಮ್ಮದೇ ರೀತಿಯಲ್ಲಿ ಜನಗಳಿಗೆ ಸರ್ಕಾರದಿಂದ ಆಗುವಂತಹ ಕೆಲಸಗಳನ್ನು ಅಧಿಕಾರಿಗಳ ಮತ್ತು ಸರ್ಕಾರದ ವಿರುದ್ಧ ಹೋರಾಟಗಳನ್ನು ರೂಪಿಸಿ ಕೆಲಸ ಮಾಡುವುದರೊಂದಿಗೆ ಸಮಾಜ ಸೇವೆಯಲ್ಲಿ ತಮ್ಮ ಜೀವನವನ್ನು ತೊಡಗಿಸಿ ಕೊಂಡಂತ ಇವರು ಡಿ.ಎಸ್.ಎಸ್ ಎಂಬ ಹೋರಾಟಗಾರ ಎಂದು ತಮ್ಮ ಗ್ರಾಮದ ಸುತ್ತಮುತ್ತಲಿನ ಜನಗಳಿಗೆ ಎಲ್ಲಾ ಜನರಿಗೂ ಚಿರ ಪರಿಚಿತ ನಾಗಿರುವಂತವರು ಕೆಲವು ಸಂಘಟನೆಯ ಯುವಕರುಗಳಿಗೆ ಸಲಹೆ ನೀಡುತಿದ್ದರು.
ನಿನ್ನೆ ಇವರು ಬಾರದ ಲೋಕಕ್ಕೆ ಮರೆಯಾದರೂ ಇವರು ಮಾಡಿರುವಂತ ಒಳ್ಳೆಯ ಕೆಲಸಗಳು ಯಾವಾಗಲು ನೆನಪು ಮಾತ್ರ ಒಬ್ಬ ಒಳ್ಳೆಯ ಮುಖಂಡನ ಕಳೆದು ಕೊಂಡ ದಲಿತ ಸಮುದಾಯದಕ್ಕೆ ತುಂಬಾಲಾರದ ನಷ್ಟ ಉಂಟಾಗಿದೆ.
ಇವರಿಗೆ ಸಹೋದರರು 2 ಜನ ಸಹೋದಿಯರು 2 ಗೆದ್ದಲಗಟ್ಟೆ ಗ್ರಾಮದ ನಿವಾಸಿಗಳಾದ (55) ವರ್ಷ ಸೆಪ್ಟೆಂಬರ್ 19. ಶನಿವಾರ ರಾತ್ರಿ 10:15 ನಿಮಿಷಗಳ ಸಮಯಕ್ಕೆ ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಅನಾರೋಗ್ಯ ನಿಮಿತ್ಯವಾಗಿ ದಾಖಲಾಗಿ ಚಿಕಿತ್ಸೆ ಫಲಕರಿಯಾಗದೆ ನಿಧನ ಹೊಂದಿದ್ದಾರೆ.
ಇವರಿಗೆ ಮೃತರ ತಮ್ಮಂದಿರು, ತಂಗಿಯರು ಸೊಸೆಯಂದಿರು ಸೇರಿದಂತೆ, ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಹೊಂದಿದವರಾಗಿದ್ದರು. “ಅಂತ್ಯ ಕ್ರಿಯೆ”ಸೆಪ್ಟೆಂಬರ್ 20 ರ ಭಾನುವಾರ ಮಧ್ಯಾಹ್ನ 3, ಗಂಟೆ ಗೆದ್ದಲಗಟ್ಟೆ ಗ್ರಾಮದಲ್ಲಿ ಬರುವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಗುರು ಹಿರಿಯರು ತಿಳಿಸಿರುತ್ತಾರೆ.
“ಸಂತಾಪ” ಕೂಡ್ಲಿಗಿ ತಾಲೂಕಿನ ಡಾ, ಬಿ.ಆರ್ ಅಂಬೇಡ್ಕರ್ ಸಂಘ, ಡಾ, ಬಾಬು ಜಗಜೀವನ್ ರಾಮ್ ಸಂಘ, ಕರ್ನಾಟಕ ಮಾದಿಗ ದಂಡೋರ ಸಮಿತಿ, ದಲಿತ ಸಂಘರ್ಷ ಸಮಿತಿ, ಮತ್ತು ಕೂಡ್ಲಿಗಿ ತಾಲೂಕಿನ ಎಲ್ಲಾ ದಲಿತ ಮುಖಂಡರು ಹಾಗೂ ಹಲವಾರು ಗ್ರಾಮದ ವಾಲ್ಮೀಕಿ ಸಮುದಾಯದ ಬಂಧುಗಳು ಹಾಗೂ ದಲಿತ ಸಮುದಾಯದವರು, ಸ್ಥಳೀಯ ಗ್ರಾಮವಾದ ಗೆದ್ದಲಗಟ್ಟೆ ಗ್ರಾಮದ ಸಂಬಂಧಿಕರು ಹಾಗೂ ವಿವಿಧ ಸಮುದಾಯದವರು ಸಮಸ್ತ ಗ್ರಾಮಸ್ಥರು.
ಹಲವು ಸಮುದಾಯದವರು ಸೇರಿದಂತೆ, ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳು ಸೇರಿದಂತೆ, ಪತ್ರಕರ್ತರು ರೈತರು ಕಾರ್ಮಿಕರು ಮಹಿಳೆಯರು ಕನ್ನಡಪರ ಸಂಘಟನೆಗಳ ಮುಖಂಡರು ಪದಾಧಿಕಾರಿಗಳು ಸರ್ವ ಸದಸ್ಯರು. ಶಾಸಕರು ಮೊದಲ್ಗೊಂಡು ತಾಲೂಕಿನ ವಿವಿಧ ಜನ ಪ್ರತಿನಿಧಿಗಳು, ಹಾಗೂ ಹೋರಾಟಗಾರರು ಗಣ್ಯರು. ಕೂಡ್ಲಿಗಿ ತಾಲೂಕಿನ ಪ್ರಮುಖ ನಾಗರಿಕರು,ಗೆದ್ದಲಗಟ್ಟೆ ಗ್ರಾಮದ ನೆರೆ ಹೊರೆ ಗ್ರಾಮಸ್ಥರು. ಮೃತ ಬಿ.ಹನುಮೇಶ್ ರವರ ಅಗಲಿಕೆಗೆ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ ಸಾಲುಮನೆ ಕೂಡ್ಲಿಗಿ
