ಶ್ರೀನರಹರೇಶ್ವರ ದೇವಸ್ಥಾನದಲ್ಲಿ ಗಣಪತಿ ಭಜನಾ – ಮಂಡಳಿಯಿಂದ ಭಜನೆ.
ಚಳ್ಳಕೆರೆ ಆ.09


ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸೇವಾ ಪ್ರತಿಷ್ಠಾನದಲ್ಲಿ ಯತೀಶ್ ಎಂ ಸಿದ್ದಾಪುರ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ಸನ್ಮಾನಿಸಿ ಗೌರವಿಸಿದ ಅದ್ಭುತ ಕ್ಷಣಗಳು….. 🌹🌸🌺
ನಗರದ ಹೊರ ವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಶ್ರೀನರಹರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶಾಂತಿ ನಗರದ ಶ್ರೀಗಣಪತಿ ಮಹಿಳಾ ಭಜನಾ ಮಂಡಳಿಯ ಮುಖ್ಯಸ್ಥರಾದ ಶ್ರೀಮತಿ ಸುನೀತಾ ಗೋಪಾಲಕೃಷ್ಣ ಮತ್ತು ಸಂಗಡಿಗರು, ಮಾಕಂಸ್ ಲಕ್ಷ್ಮೀ ಬಾಲಾಜೀ, ಗೀತಾ ಪ್ರಕಾಶ್, ಗೀತಾ ನಾಗರಾಜ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಅಂಬಿಕಾ ಪರಮೇಶ್ವರ್, ಯತೀಶ್ ಎಂ ಸಿದ್ದಾಪುರ ಅವರಿಂದ ವಿಶೇಷ ಭಜನೆ ನಡೆದರೆ ಭಜನೆ ಮತ್ತು ಸತ್ಸಂಗದ ದಿವ್ಯ ಸಾನಿಧ್ಯ ವಹಿಸಿ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಡಾ, ವೈ ರಾಜಾರಾಮ್ ಗುರುಗಳು “ಗುರು ಪೂರ್ಣಿಮೆ”ಯ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಶ್ರೀನರಹರೇಶ್ವರ ದೇವಸ್ಥಾನದಲ್ಲಿ ನಡೆದ ವಿಶೇಷ ಭಜನೆಯಲ್ಲಿ ಭಾಗವಹಿಸಿದ್ದ ಸದ್ಭಕ್ತ ವೃಂದ….. 💐🌺
ವಿಶೇಷ ಭಜನಾ ಕಾರ್ಯಕ್ರಮದಲ್ಲಿ ರಾಮಚಂದ್ರಪ್ಪ, ಹೆಚ್ ಲಕ್ಷ್ಮೀದೇವಮ್ಮ,ಪ್ರೇಮಾ, ಸುಧಾಮಣಿ,ಜಿ ಯಶೋಧಾ ಪ್ರಕಾಶ್, ಮಂಗಳಾ,ಲತಾ, ಜಯಮ್ಮ, ನರಸಿಂಹಮೂರ್ತಿ, ಗೀತಾ ಸತ್ಯನಾರಾಯಣರೆಡ್ಡಿ, ಲೀಲಾವತಿ, ವೀರಮ್ಮ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
