ಶ್ರೀನರಹರೇಶ್ವರ ದೇವಸ್ಥಾನದಲ್ಲಿ ಲಕ್ಷ್ಮೀ ನೃಸಿಂಹಸ್ವಾಮಿಗಳ – 61 ನೇ. ಆರಾಧನಾ ಮಹೋತ್ಸವ.
ಚಳ್ಳಕೆರೆ ಸೆ.23

ನಗರದ ಹೊರ ವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಶ್ರೀನರಹರೇಶ್ವರ ದೇವಸ್ಥಾನದಲ್ಲಿ ಶ್ರೀನರಹರಿ ಸಾಂಪ್ರದಾಯದ ಸದ್ಗುರುಗಳಾದ ಶ್ರೀಲಕ್ಷ್ಮೀ ನೃಸಿಂಹಸ್ವಾಮಿಗಳ 61 ನೇ. ಆರಾಧನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಆರಾಧನಾ ಮಹೋತ್ಸವದ ಪ್ರಯುಕ್ತ ಶ್ರೀನರಹರಿ ಸದ್ಗುರು ಮಹಿಳಾ ಸಂಘದಿಂದ ಗುರು ಸ್ತೋತ್ರಗಳು, ಭಜನೆ, ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ನೇತೃತ್ವದಲ್ಲಿ ಶ್ರೀರಾಮಕೃಷ್ಣರ ನಾಮಸ್ಮರಣೆ,ಶ್ರೀಮದ್ ಭಗವದ್ಗೀತೆಯ ಜ್ಞಾನಯೋಗದ ಶ್ಲೋಕಗಳ ಪಠಣ, ಯತೀಶ್ ಎಂ ಸಿದ್ದಾಪುರ, ವನಜಾಕ್ಷಿ ಮೋಹನ್, ಗೀತಾ ಪ್ರಕಾಶ್ ಅವರಿಂದ ಶಿವನ ಭಜನೆಗಳು, ವೇದ ವಿದ್ವಾಂಸ ನಾಗಶಯನ ಗೌತಮ್ ಅವರಿಂದ ಸೊಗಸಾದ ಸಂಕೀರ್ತನೆ, ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳಿಂದ ಲಕ್ಷ್ಮೀ ನೃಸಿಂಹಸ್ವಾಮಿಗಳ ಬಗ್ಗೆ ವಿಶೇಷ ಆಶೀರ್ವಚನ, ಆರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.

ವಿಶೇಷ ಭಜನೆಯಲ್ಲಿ ಮಾಕಂ ಶ್ರೀನಿವಾಸಲು, ಗೀತಾ ಭಕ್ತವತ್ಸಲ, ಸರಸ್ವತಿ , ಗೋವಿಂದರಾಜು, ಪ್ರೇಮಲೀಲಾ, ಸುಶೀಲಮ್ಮ, ಅಯ್ಯಪ್ಪ, ಕವಿತಾ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಲೀಲಾವತಿ, ವೀರಮ್ಮ, ಜಯಮ್ಮ, ಭಾಗ್ಯಲಕ್ಷ್ಮೀ, ದಾಕ್ಷಾಯಣಿ, ವಿಜಯಲಕ್ಷ್ಮೀ, ಸಂಗೀತ, ಕೃಷ್ಣವೇಣಿ, ಶೈಲಜಾ, ಭ್ರಮರಂಬಾ, ಜಯಶೀಲಮ್ಮ, ಜ್ಯೋತಿ ನಾಗರಾಜ್, ಗೀತಾ, ಸೌಮ್ಯ, ಬಿ.ಸಿ ವೆಂಕಟೇಶಮೂರ್ತಿ, ಧನಂಜಯ, ರೇವಣಸಿದ್ದಯ್ಯ, ರಾಮಚಂದ್ರಪ್ಪ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

