ಶ್ರೀರಾಮಕೃಷ್ಣ ವಚನವೇದ ಕರತಲ ದೇವಸ್ಥಾನ – ಗೀತಾ ನಾಗರಾಜ್.

ಚಳ್ಳಕೆರೆ ಆ.29

ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ ವಚನವೇದ ಗ್ರಂಥವೆಂದರೆ ಅದೊಂದು ಕರತಲ ದೇವಸ್ಥಾನ, ತಪೋರಂಗ, ಪುಣ್ಯಕ್ಷೇತ್ರ ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಉಪಾಧ್ಯಕ್ಷರಾದ ಶ್ರೀಮತಿ ಎಂ ಗೀತಾ ನಾಗರಾಜ್ ತಿಳಿಸಿದರು.

ನಗರದ ವಾಲ್ಮೀಕಿ ನಗರದ ಸದ್ಭಕ್ತರಾದ ಶ್ರೀಮತಿ ದಾಕ್ಷಾಯಣಿ ಗಿರೀಶ್ ಅವರ ನಿವಾಸದಲ್ಲಿ ಶ್ರಾವಣ ಮಾಸದ ಪ್ರಯುಕ್ತ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಜನೆ ನಡೆಸಿ ಕೊಟ್ಟ ಅವರು “ಶ್ರೀರಾಮಕೃಷ್ಣ ವಚನವೇದದ ಮಹತ್ವ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಶ್ರೀರಾಮಕೃಷ್ಣರ ಸಂಪೂರ್ಣ ಜೀವನ,ಅವರ ಸರಳ ಸಂಭಾಷಣೆಗಳು, ಹಾಗೂ ಕ್ಲಿಷ್ಟಕರವಾದ ಆಧ್ಯಾತ್ಮಿಕ ವಿಚಾರಗಳನ್ನು ಅತ್ಯಂತ ನಿಖರವಾಗಿ ತಿಳಿಸುವ ಅಪರೂಪದ ಮಹಾಸದ್ಗ್ರಂಥವಿದು.

ಮಹೇಂದ್ರನಾಥಗುಪ್ತ ಅವರು ಬಂಗಾಳಿ ಭಾಷೆಯಲ್ಲಿ ಬರೆದಿದ್ದ “ಶ್ರೀಶ್ರೀ ರಾಮಕೃಷ್ಣ ಕಥಾಮೃತ”ವನ್ನು ಕನ್ನಡದ ಯತಿವರ್ಯರಾದ ಸ್ವಾಮಿ ಜ್ಞಾನಘನಾನಂದಜೀ ಅವರ ಮಾರ್ಗದರ್ಶನದಲ್ಲಿ ಸ್ವಾಮಿ ಸೋಮನಾಥಾನಂದಜೀ, ಕುವೆಂಪು, ಜಿ.ಎಸ್ ಶಿವರುದ್ರಪ್ಪ, ಡಾ, ಪ್ರಭುಶಂಕರ ತಂಡ ಕನ್ನಡ ಭಾಷೆಗೆ ತಂದಿತು.

ಈ ಪವಿತ್ರ ಗ್ರಂಥದ ಶ್ರವಣ ಮಾತ್ರದಿಂದಲೇ ಮನುಷ್ಯ ಪರಿಪಕ್ವನಾಗಿ ಎಲ್ಲ ರೀತಿಯ ಸುಖ-ಶಾಂತಿ- ನೆಮ್ಮದಿ ಲಭ್ಯವಾಗುತ್ತದೆ ಎಂದು ಅವರು ಹೇಳಿದರು.

ಸತ್ಸಂಗದ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ವನಜಾಕ್ಷಿ ಪಂಚಾಕ್ಷರಿ, ಮಂಜುಳಾ ಬಸವರಾಜ್, ಮಂಗಳಾ, ಯತೀಶ್ ಎಂ ಸಿದ್ದಾಪುರ ಅವರಿಂದ ವಿಶೇಷ ಭಜನೆ,ಆರತಿ, ಅನ್ನಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ದಾಕ್ಷಾಯಣಿ ಗಿರೀಶ್, ದಿವ್ಯ ದರ್ಶನ್, ದರಣೇಶ್, ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ಸುಭದ್ರ, ಜಾನಕಿ, ಲಾವಣ್ಯ, ಸವಿತಾ ತಿಪ್ಪೇರುದ್ರಪ್ಪ, ಗಾಯತ್ರಿ, ಜಯಮ್ಮ, ಗಿರಿಜಾ ಜಗದೀಶ್, ಸರಸ್ವತಿ ನಾಗರಾಜ್, ಸರಸ್ವತಿ ರಾಜು, ಸೌಮ್ಯ ಪ್ರಸಾದ್ ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button