ಸೋಮವಾರದಿಂದ ಶ್ರೀ ಹುಲ್ಲಪ್ಪ ಚಂದಪ್ಪ – ದೇವರ ಜಾತ್ರೆ ಜರುಗುವುದು.
ಬಿದರಕುಂದಿ ಆ.29


ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಶ್ರೀ ಹುಲ್ಲಪ್ಪ ಚಂದಪ್ಪ ದೇವರ ಜಾತ್ರಾ ಮಹೋತ್ಸವವು ಆಗಸ್ಟ್ 31 ರಿಂದ ಸ, 4 ರ ವರೆಗೆ ಅದ್ದೂರಿಯಾಗಿ ನೆರವೇರುವುದು.
ಆ, 31 ರಂದು ಬೆಳಿಗ್ಗೆ 6=00 ಗಂಟೆಗೆ ದೇವರ ಅಭಿಷೇಕ ಮುಂಜಾನೆ 8=00 ಗಂಟೆಗೆ ಬಿದರಕುಂದಿ ಕ್ರಾಸಿನಿಂದ ಕುಂಭ ಮೆರವಣಿಗೆ ಹಾಗೂ ಹೊಸ (ತೇರಬಂಡಿ) ಆಗಮನ ಕರಡಿ ಮಜಲು ಹಾಗೂ ಜ್ಯೋಗತಿ ನೃತ್ಯ ಮತ್ತು ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ಬರಮಾಡಿ ಕೊಳ್ಳಲಾಗುತ್ತದೆ.
ನಂತರ ಸಂಜೆ 4=00 ಗಂಟೆಗೆ ಪುರುಷರಿಗೆ ಕುರ್ಚಿ ಸ್ಪರ್ಧೆ ಜರಗುವುದು, ನಂತರ ಸಂಜೆ 5=00 ಗಂಟೆಗೆ ಮಹಿಳೆಯರಿಗೆ ಕುರ್ಚಿ ಸ್ಪರ್ಧೆ ಜರುಗುವುದು, ಸ, 1-9-2026 ರಂದು ಬೆಳಗ್ಗೆ 10=00 ಗಂಟೆಗೆ ರಾಜ್ಯಮಟ್ಟದ ತೇರುಬಂಡಿ ಸ್ಪರ್ಧೆ ಇರುವುದು, ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (ಎಚ್ಎಫ್ ಡೀಲಕ್ಸ್ ಬೈಕ್) ಸೇರಿದಂತೆ ಒಟ್ಟು 8 ಬಹುಮಾನಗಳನ್ನು ಆಯೋಜಿಸಲಾಗಿದೆ.
ಅಂದೇ ರಾತ್ರಿ 10=00 ಗಂಟೆಗೆ 55 ಕೆಜಿ ತೂಕದ ಕಬಡ್ಡಿ ಪಂದ್ಯಾವಳಿಗಳು ಜರುಗುತ್ತದೆ, 2-9-2026 ರಂದು ಬೆಳಿಗ್ಗೆ 7=00 ಗಂಟೆಗೆ ಕಬಡ್ಡಿ ಪಂದ್ಯಾವಳಿಗಳು ಮುಂದುವರಿಯುವುದು.
ಬೆಳಿಗ್ಗೆ 10=00 ಗಂಟೆಗೆ ಟ್ರೆಂಡಿಂಗ್ ಸ್ಟಾರ್ ಮ್ಯೂಸಿಕ್ ಮೈಲಾರಿ ಅವರಿಂದ ಸಂಗೀತ ಕಾರ್ಯಕ್ರಮ ಜರುವುದು,3-9-2026 ರಂದು ಬೆಳಗ್ಗೆ 10 =00 ಗಂಟೆಗೆ ಪುರುಷ ರಿಂದ ಪುಟ್ಟಿ ಗಾಡಿ ರೇಸ್, ಮಧ್ಯಾಹ್ನ 12=00 ಗಂಟೆಗೆ ಒಂದು ಎತ್ತು ಒಂದು ಕುದುರೆ ಗಾಡಿರೇಸ ಇರುವುದು.
4-9-2026 ರಂದು ಬೆಳಿಗ್ಗೆ 10=00 ಗಂಟೆಗೆ ಚಕ್ಕಾ ಆಡುವ ಸ್ಪರ್ಧೆ ಜರುಗುವುದು, ಜಾತ್ರೆಯ ಅಂಗವಾಗಿ ಪ್ರತಿದಿನ ಅನ್ನ ಸಂತರ್ಪಣೆ ಇರುತ್ತದೆ, ಅಂದೇ ಸಂಜೆ 6=00 ಗಂಟೆಗೆ ಎಲ್ಲಾ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗುವುದು, ಎಂದು ಜಾತ್ರಾ ಕಮಿಟಿಯು ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಈ ಮೊಬೈಲ್ ನಂಬರಿಗೆ ಸಂಪರ್ಕಿಸಿರಿ =9945819520= 9448946523 =7411160500= 7349061917 ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

