🚨BREAKING NEWS: ಕೋಟ ಪೊಲೀಸ್ ಠಾಣೆಯಲ್ಲಿ ಅಜಿತ್ ದೇವಾಡಿಗರಿಂದ ರಕ್ಷಾಬಂಧನ ಆಚರಣೆ..!🚨🔥ಕೋಟ ಠಾಣಾಧಿಕಾರಿಗಳಾದ PSI ಪ್ರವೀಣ್, PSI ಮಾಂತೇಶ್ ಹಾಗೂ ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟಿ, ಸಿಹಿ ಹಂಚಿ ಸಂಭ್ರಮಿಸಿದ – ಮಾಜಿ ಪಂಚಾಯತ್ ಅಧ್ಯಕ್ಷ..!🔥

ಕೋಟ ಆ.29

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಜಿತ್ ದೇವಾಡಿಗ ಕೋಟ ಅವರು ಸಾರ್ವಜನಿಕರು, ಆಟೋ ಚಾಲಕರು ಮತ್ತು ಪೊಲೀಸ್ ಇಲಾಖೆಯೊಂದಿಗೆ ಅರ್ಥ ಪೂರ್ಣವಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿ ಗಮನ ಸೆಳೆದಿದ್ದಾರೆ.

🤝 ಸಾರ್ವಜನಿಕರು ಹಾಗೂ ಆಟೋ ಚಾಲಕರೊಂದಿಗೆ ಸಂಭ್ರಮ:-

ಸಾಮಾನ್ಯ ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ಅಜಿತ್ ದೇವಾಡಿಗ ಅವರು, ಕೋಟ ವ್ಯಾಪ್ತಿಯ ಆಟೋ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರಿಗೆ ಸ್ವತಃ ರಾಖಿ ಕಟ್ಟಿ, ಸಿಹಿ ಹಂಚಿದರು.

ತಮ್ಮ ಸರಳ ಹಾಗೂ ಸಾಧು ಸ್ವಭಾವದ ನಾಯಕನಿಂದ ರಾಖಿ ಕಟ್ಟಿಸಿಕೊಂಡ ಸಾರ್ವಜನಿಕರು ಮತ್ತು ಚಾಲಕರು ಅತ್ಯಂತ ಭಾವಕರಾಗಿ, “ನಮ್ಮ ಊರಿಗೆ ನಿಮ್ಮಂತಹ ಸರಳ ಜನಪ್ರತಿನಿಧಿಯ ಅಗತ್ಯವಿದೆ. ನೀವು ಮತ್ತೊಮ್ಮೆ ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿ ಬಂದು ಊರಿನ ಸೇವೆ ಮಾಡಬೇಕು” ಎಂದು ಮನಸಾರೆ ಹರಸಿ ಶುಭ ಹಾರೈಸಿದರು.

📢ಕೋಟ ಪೊಲೀಸ್ ಠಾಣೆಯಲ್ಲಿ ಅದ್ದೂರಿ ರಕ್ಷಾ ಬಂಧನ..!

ಆಟೋ ಚಾಲಕರು ಮತ್ತು ಸಾರ್ವಜನಿಕರೊಂದಿಗೆ ಹಬ್ಬ ಆಚರಿಸಿದ ತಕ್ಷಣ, ಅಜಿತ್ ದೇವಾಡಿಗ ಅವರು ಕೋಟ ಪೊಲೀಸ್ ಠಾಣೆಗೆ ಭೇಟಿ ನೀಡಿ ರಕ್ಷಕರಿಗೆ ಗೌರವ ಸಲ್ಲಿಸಿದರು.

👮‍♂️ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ರಾಖಿ:-

ಕೋಟ ಠಾಣಾಧಿಕಾರಿಗಳಾದ PSI ಪ್ರವೀಣ್, PSI ಮಾಂತೇಶ್ ಹಾಗೂ ಠಾಣೆಯ ಪ್ರತಿಯೊಬ್ಬ ಸಿಬ್ಬಂದಿಗೂ ಸ್ವತಃ ರಾಖಿ ಕಟ್ಟಿ, ಸಿಹಿ ನೀಡಿ ಅತ್ಯಂತ ಅದ್ದೂರಿಯಾಗಿ ಹಬ್ಬವನ್ನು ಆಚರಿಸಲಾಯಿತು.

🛡️ ರಕ್ಷಕರಿಗೆ ಗೌರವ:-

ಹಗಲಿರುಳು ಸಾರ್ವಜನಿಕರ ಜೀವ ಮತ್ತು ಆಸ್ತಿಯ ರಕ್ಷಣೆಗೆ ಶ್ರಮಿಸುವ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ಸಹೋದರತೆ ಹಾಗೂ ಕೃತಜ್ಞತೆಯ ಸಂದೇಶ ಸಾರಿದ ಈ ಕಾರ್ಯಕ್ಕೆ PSI ಪ್ರವೀಣ್, PSI ಮಾಂತೇಶ್ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದರು.

ತಮ್ಮ ಜನಪರ ಕಾಳಜಿ, ಪ್ರತಿಯೊಬ್ಬರನ್ನೂ ತಲುಪುವ ಗುಣ ಮತ್ತು ಪೊಲೀಸ್ ಇಲಾಖೆಯ ಶ್ರಮಕ್ಕೆ ಗೌರವ ನೀಡಿದ ಅಜಿತ್ ದೇವಾಡಿಗ ಅವರ ಈ ನಡೆ ಕೋಟ ಜನತೆಯ ಮನ ಗೆದ್ದಿದೆ.

ವರದಿ:ಆರತಿ.ಗಿಳಿಯಾರು.ಉಡುಪಿ‌

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Check Also
Close
Back to top button