🚨ಬ್ರೇಕಿಂಗ್ ನ್ಯೂಸ್! ಬ್ರೇಕಿಂಗ್ ನ್ಯೂಸ್! ಬ್ರೇಕಿಂಗ್ ನ್ಯೂಸ್!🚨 🌟ಭಕ್ತಿಯ ಕಳಶ, ಸಂಪ್ರದಾಯದ ಅರಮನೆ: ಮೂಡು ಗಿಳಿಯಾರಿನಲ್ಲಿ ಮೂವತ್ನಾಲ್ಕರ ಮೈಲಿಗಲ್ಲ; ಗಣೇಶೋತ್ಸವದ ಅದ್ದೂರಿ ಸ್ವಾಗತಕ್ಕೆ ಸಜ್ಜಾದ ಊರು!🌟

ಉಡುಪಿ ಸೆ.16

ಮಣ್ಣಿನ ಸತ್ವ, ಗಿಳಿಯಾರಿನ ಗರಿಗೆದರಿದ ಸಂಸ್ಕೃತಿಯ ಹಸಿರು ನೆನಪುಗಳ ನಡುವೆ ಮತ್ತೊಮ್ಮೆ ಆ ಗಜ ಮುಖನ ಆಗಮನದ ಘಳಿಗೆ ಹತ್ತಿರವಾಗಿದೆ. ವಿಘ್ನಗಳನ್ನು ಕರಗಿಸುವ ವಿಘ್ನರಾಜನ ಚರಣಗಳಿಗೆ ಶಿರಬಾಗಿ ನಮಸ್ಕರಿಸಲು ಇಡೀ ಊರು ಒಂದೇ ವೇದಿಕೆಯಲ್ಲಿ ಕೈ ಜೋಡಿಸಿದೆ. ಹೌದು, ಮೂಡು ಗಿಳಿಯಾರಿನ ಸಮಸ್ತ ನಾಗರಿಕರ ಹೆಮ್ಮೆಯ ಪ್ರತೀಕವಾದ 34 ನೇ. ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಈ ಬಾರಿ ಅತ್ಯಂತ ವೈಭವೋಪೇತವಾಗಿ, ಗೌರವಯುತವಾಗಿ ಕಳೆ ಗಟ್ಟಲು ಮುಹೂರ್ತ ಕೂಡಿ ಬಂದಿದೆ.

ಬಾಳಿನ ನೂರಾರು ಏಳು-ಬೀಳುಗಳ ನಡುವೆಯೂ ಧರ್ಮದ ಬೇರನ್ನು, ಸಂಸ್ಕೃತಿಯ ಮರವನ್ನು ಗಟ್ಟಿಯಾಗಿ ಕಡಿದು ಕೊಂಡು ಬಂದಿರುವ ಇಲ್ಲಿನ ಹಿರಿಯರ ಕನಸು ಮತ್ತು ಯುವಕರ ಉತ್ಸಾಹದ ಸಂಗಮವೇ ಈ ಉತ್ಸವ. ಗಣೇಶನೆಂದರೆ ಕೇವಲ ಮಣ್ಣಿನ ಮೂರ್ತಿಯಲ್ಲ; ಅದು ನಮ್ಮತನದ ಸಂಕೇತ, ನಮ್ಮ ಅಸ್ಮಿತೆಯ ದ್ಯೋತಕ. ಅದೇ ಸೌಹಾರ್ದತೆ ಮತ್ತು ಭಕ್ತಿಯ ಪವಿತ್ರ ಭಾವದೊಂದಿಗೆ ಇಡೀ ಗಿಳಿಯಾರು ಈಗ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದೆ.

🌟 ಪವಿತ್ರ ಕಾರ್ಯಕ್ರಮದ ವಿವರ:-

ದಿನಾಂಕ:-

14/09/2026 ನೇ. ಸೋಮವಾರ ದಿಂದ 16/09/2026 ಬುಧವಾರದ ತನಕ.

ಸ್ಥಳ:-

ಮೂಡು ಗೆಳೆಯರು ಶಾಲಾ ಆವರಣ, ಗಿಳಿಯಾರು.ಮೂರು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹೋತ್ಸವದಲ್ಲಿ ಸಂಜೆ ಮೈ ಮರೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅದ್ದೂರಿ ವೈಭವ ಮೂಡಿ ಬರಲಿದೆ. ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಊರಿನ ಯುವ ಶಕ್ತಿಯನ್ನು ಒಗ್ಗೂಡಿಸುವ ಕ್ರೀಡಾ ಸ್ಪರ್ಧೆಗಳು, ಮೈ ರೋಮಾಂಚನ ಗೊಳಿಸುವ ಹಗ್ಗ ಜಗ್ಗಾಟ ಹಾಗೂ ಹತ್ತು ಹಲವು ವಿನೂತನ ಜನಪರ ಕಾರ್ಯಕ್ರಮಗಳು ಈ ಬಾರಿಯ ಉತ್ಸವದ ಕಿರೀಟಕ್ಕೆ ಮತ್ತಷ್ಟು ನವಿಲು ಗರಿಗಳನ್ನು ತೊಡಿಸಲಿವೆ.

🏛️ ಉತ್ಸವದ ಗೌರವಾನ್ವಿತ ಸಾರಥಿಗಳು:-

ಈ ಬೃಹತ್ ಸಾಂಸ್ಕೃತಿಕ ಮಹೋತ್ಸವ ಯಶಸ್ವಿಯಾಗಿ ಮೂಡಿ ಬರಲು ಹಗಲಿರುಳು ಶ್ರಮಿಸುತ್ತಿರುವ, ಊರಿನ ಹಿರಿಯ-ಕಿರಿಯ ನಾಯಕರ ದಳದ

ಪ್ರಮುಖ ಪದಾಧಿಕಾರಿಗಳು:-

ಕಾರ್ಯಧ್ಯಕ್ಷರು:-

ಶ್ರೀ ಮಂಜುನಾಥ ಸ್ವಾಮಿ, ಗಿಳಿಯಾರು

ಗೌರವ ಅಧ್ಯಕ್ಷರು:-

ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಮೈನಾಡಿ ಮನೆ

ಶ್ರೀ ವಿಜಯ ಗರಡಿಮಕ್ಕಿ

ಶ್ರೀ ಸತೀಶ ದೇವಾಡಿಗ ಶಿಲ್ಪ ಹೊಲಿಗೆಮನೆ ಬೆಂಗಳೂರು

ಶ್ರೀ ರಾಜೇಂದ್ರ ಬತ್ಕಾಳ್ ಹೇಳಿಕೆಬೈಲ್ ಗಿಳಿಯಾರು

ಶ್ರೀ ಭಾಸ್ಕರ ಸ್ವಾಮಿ ನೇತಾಜಿನಗರ ಗಿಳಿಯಾರು

ಶ್ರೀ ಮಹೇಶ ಪೂಜಾರಿ ಗಿಳಿಯಾರು

ಶ್ರೀ ಸೋಮಶೇಖರ ಶೆಟ್ಟಿ ಗಿಳಿಯಾರು ದೊಡ್ಡಬಸವನಕಲ್ಲು

ಅಧ್ಯಕ್ಷರು:-

ಶ್ರೀ ರಾಘವೇಂದ್ರ ಶೆಟ್ಟಿ ಹಂಡಿಕೆರೆಮನೆ ಗಿಳಿಯಾರು

ಉಪಾಧ್ಯಕ್ಷರು:-

ಶ್ರೀ ನಾರಾಯಣ ಹೇಳಿಕೆಬೈಲ್

ಶ್ರೀ ಗೋಪಾಲ (ಸಿ.ಬಿ. ಬ್ಯಾಂಕ್) ಗರಡಿಮಕ್ಕಿ ಗಿಳಿಯಾರು

ಶ್ರೀ ಸುಬ್ರಹ್ಮಣ್ಯ ಹೇಳಿಕ್ ಗಿಳಿಯಾರು ಶ್ರೀ ಉದಯ ಹೇಳಿಕೆಬೈಟ್ಟು

ಶ್ರೀ ಯೋಗೇಂದ್ರ ಪೂಜಾರಿ ಗಿಳಿಯಾರು

ಶ್ರೀ ಉದಯ ದೇವಾಡಿಗ ಹೇಳಿಕೆಬೈಟ್ಟು ಗಿಳಿಯಾರು

ಕಾರ್ಯದರ್ಶಿ:-

ಶ್ರೀ ಜಿ. ಕೃಷ್ಣ ಗಿಳಿಯಾರು ಜೊತೆ

ಕಾರ್ಯದರ್ಶಿ:-

ಶ್ರೀ ರಾಸ್ತಿ ರವಿ ಗಿಳಿಯಾರು

ಖಜಾಂಚಿ:-

ಶ್ರೀ ರಾಘವೇಂದ್ರ ಮೊಗೇರ

ಸಾಂಸ್ಕೃತಿಕ ಕಾರ್ಯದರ್ಶಿ:-

ಶ್ರೀ ಭಾರ್ಗವ ಬತ್ತಾಡ ಗಿಳಿಯಾರು

ಸ್ವಚ್ಛತಾ ಕಾರ್ಯದರ್ಶಿ:-

ಶ್ರೀ ನಾಗೇಂದ್ರ ಗರಡಿಮಕ್ಕಿ ಗಿಳಿಯಾರು

ಸಹಕಾರ ಸಮಿತಿ ಸದಸ್ಯರು:-

ಶ್ರೀ ಸಂತೋಷ (ಪ್ರವೀಣ) ಗಿಳಿಯಾರು, ಶ್ರೀ ಸುಧೀರ ಸುಂಕ್ರೆಬೈಟ್ಟು ಗಿಳಿಯಾರು, ಶ್ರೀ ಚಂದ್ರ ಸುಂಕ್ರೆಬೈಟ್ಟು ಗಿಳಿಯಾರು, ಶ್ರೀ ಗಣೇಶ್ ಗಿಳಿಯಾರು (ಡೈರಿ), ಶ್ರೀ ಸುದರ್ಶನ ಗಿಳಿಯಾರು ಹಾಗೂ ಇತರೆ ಗೌರವಾನ್ವಿತರು.

ಕ್ರೀಡಾ ಕಾರ್ಯದರ್ಶಿ:-

ಶ್ರೀ ಗಣೇಶ ಎನ್.ಬಿ. ಹಾಗೂ ಶ್ರೀ ಗಿಳಿಯಾರ್ ನಾಗ.

ಊರಿನ ಸಮಸ್ತ ಭಕ್ತಾದಿಗಳ ಸಹಕಾರದಿಂದ ರೂಪು ಗೊಂಡಿರುವ ಈ ಸಮಿತಿಯು ಪ್ರತಿಯೊಬ್ಬರನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿದೆ.

ಬಾಳಿನ ನಾನಾ ಬಗೆಯ ಓಟದ ನಡುವೆ, ಕೊಂಚ ವಿರಾಮ ತೆಗೆದುಕೊಂಡು ಭಕ್ತಿಯ ಸಾಗರದಲ್ಲಿ ಮಿಂದೇಳಲು ಬನ್ನಿ. ಸೆಪ್ಟೆಂಬರ್ 14 ರಿಂದ ಮೂಡು ಗೆಳೆಯರ ಶಾಲಾ ಆವರಣದಲ್ಲಿ ನಿಮ್ಮೆಲ್ಲರಿಗೂ ಆದರದ ಸ್ವಾಗತ!

ನಿಮ್ಮ ಊರಿನ ಈ ಮಹಾಸಂಭ್ರಮದ ಪ್ರತಿಯೊಂದು ಹೆಜ್ಜೆಯ ನೇರ ಹಾಗೂ ಜೀವಂತ ನೋಟಗಳಿಗಾಗಿ

ಸಂಪರ್ಕಿಸಿ:-

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮೂಡುಗಿಳಿಯಾರು.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button