ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆಯ ಮತದಾನವಲ್ಲ ಪ್ರತಿಯೊಬ್ಬ ನಾಗರಿಕನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ ದೇಶದಲ್ಲಿ ಪ್ರಶ್ನಿಸುವ ಹಕ್ಕು, ಅಭಿಪ್ರಾಯದ ಸ್ವಾತಂತ್ರ್ಯ ಈ ದೇಶದ ಸವಿಂದಾನದ ಆಶಯಗಳ ಗೌರವವೇ ನಿಜವಾದ ಶಕ್ತಿಯಾಗಿದೆ ವಿ.ಕೆ ನೇತ್ರಾವತಿ.
ಗುಡೇಕೋಟೆ ಸೆ.16

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿ ಬರುವ ಶ್ರೀ ಬಸವೇಶ್ವರ ವೃತ್ತದಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ತಾಲೂಕು ಆಡಳಿತದಿಂದ ಸರ್ಕಾರದ ನಿರ್ದೇಶನ ಪ್ರಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ್ದ ಈ ಕಾರ್ಯಕ್ರದ ಚಾಲನೆ ಯನ್ನು ಮಾನ್ಯ ತಹಸೀಲ್ದಾರ್ ವಿ ಕೆ ನೇತ್ರಾವತಿ ಹಾಗೂ ಡಿ ವೈ ಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ ರವರು ನೀಲಿ ಬಾವುಟ ಹಾರಿಸುವುದರ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದ ಜಾತಾ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಹಲವು ಸಂಘಟನೆಗಳ ಮುಖಂಡರು ಹಾಗೂ ಕೆಲವು ಅಧಿಕಾರಿಗಳು ಮತ್ತು ನೂರಾರು ವಿದ್ಯಾರ್ಥಿ ಗಳೊಂದಿಗೆ ಮದಕರಿ ವೃತ್ತಿವನ್ನು ಒಳಗೊಂಡು ಸಾಗಿ ಪಟ್ಟಣದ ಹೃದಯದ ಭಾಗವದಲ್ಲಿರುವರ ಡಾ, ಬಿ.ಆರ್ ಅಂಬೇಡ್ಕರ್ ರವರ ವೃತ್ತದಲ್ಲಿ ನೆರೆದಂತಹ ಎಲ್ಲಾರು ಭಾವಚಿತ್ರಕ್ಕೆ ಪುಷ್ಪವನ್ನು ಹಾಕಿ ಸರ್ಕಾರ ರೂಪಿಸಿರುವ ಕಾರ್ಯಕ್ರಮದ ಸಂವಿಧಾನ ಪೀಠಿಕೆಯನ್ನು ಡಿ ವೈ ಎಸ್ ಪಿ ಯವರು ಓದುವುದರೊಂದಿಗೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮಹತ್ವ ವನ್ನು ಪ್ರತಿಯೊಬ್ಬ ಪ್ರಜೆಗಳು ಗೌರವಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತ ತಹಶೀಲ್ದಾರರು ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆಯ ಮತದಾನವಲ್ಲ ಪ್ರತಿಯೊಬ್ಬ ನಾಗರಿಕನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ ದೇಶದಲ್ಲಿ ಪ್ರಶ್ನಿಸುವ ಹಕ್ಕು, ಅಭಿಪ್ರಾಯದ ಸ್ವಾತಂತ್ರ್ಯ ಈ ದೇಶದ ಸವಿಂದಾನದ ಆಶಯಗಳ ಗೌರವವೇ ನಿಜವಾದ ಶಕ್ತಿಯಾಗಿದೆ ಎಂದು ತಿಳಿಸಿದರು ಹಾಗೆ ಕಾರ್ಯಕ್ರಮ ಕುರಿತು ತಾಲೂಕ್ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ನರಸಪ್ಪ ವಕೀಲರ ಸಂಘದ ಅಧ್ಯಕ್ಷ ಹೊನ್ನೂರಪ್ಪ ವನಕೆ ಓಬವ್ವ ಸಂಘದ ರಾಜ್ಯಾಧ್ಯಕ್ಷರಾದ ಟಿ ಉಮೇಶ್, ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಗುಣಸಾಗರ ಕೃಷ್ಣಪ್ಪ,ಮಾತನಾಡಿದರು ಹಾಗೆ ಕಾರ್ಯಕ್ರಮ ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೈಲೇಶ್ ಬೇವೂರು ಟಿಎಚ್ಒ ಪ್ರದೀಪ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ವಸಂತ್,ಮ್ಯಾನೇಜರ್ ಪಕ್ಕೀರಪ್ಪ,ಗೃಹರಕ್ಷಕ ದಳದ ಘಟಕ ಅಧಿಕಾರಿ ಕರಿಯಪ್ಪ, ವಿರುಪಾಕ್ಷಪ್ಪ ವಕೀಲರು, ಡಿ ಎಚ್ ದುರ್ಗೇಶ್ ವಕೀಲರು, ಇನ್ನು ಹಲವು ದಲಿತಪರ ಸಂಘಟನೆಯ ಕನ್ನಡಪರ ಸಂಘಟನೆ, ಹಾಗೂ ಬಾಬುಜೀ ಸೋಬಾನ ಪದ ಕಲಾವಿದ ಮಹಿಳಾ ತಂಡದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖಂಡರು ಭಾಗವಹಿಸಿದ್ದರು.

ಕಾರ್ಯಕ್ರಮ ಮುಗಿದ ನಂತರ ಅಂಬೇಡ್ಕರ್ ಸಂಘದ ಅಧ್ಯಕ್ಷರು ಕೃಷ್ಣಪ್ಪ ಹಾಗೂ ಉಪಾಧ್ಯಕ್ಷರು ಬಂಡೆ ರಾಘವೇಂದ್ರ, ಕ ರ ವೇ ಅಧ್ಯಕ್ಷರು ಕಾಟೇರ ಹಾಲೇಶ್ ಹಾಗೂ ಇನ್ನೂ ಇತರರು ಅಂಬೇಡ್ಕರ್ ರವರ ಕಾರ್ಯಕ್ರಮ ಅಂದ ಕೂಡಲೇ ಕಾರ್ಯಕ್ರಮಕ್ಕೆ ಭಾಗವಹಿಸದೆ ಇರುವಂತ ಕಲ್ಮಶ ಮನಸ್ಸಿನ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು, ಇಂತಹ ಉತ್ತಮವಾದ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಭಾಗವಹಿಸಿರುವುದು ದುರಾದೃಷ್ಟ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ ಮುಖಂಡರು.
ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಕ್ಷೇತ್ರದ ಮಾನ್ಯ ಶಾಸಕರು ಸಹ ಭಾಗವಹಿಸದೆ ಕಾರಣ ಆಕ್ರೋಶ ವ್ಯಕ್ತಪಡಿಸಿದರು. ಹಾಗೆ ಸಂಬಂಧ ಪಟ್ಟ ಅಧಿಕಾರಗಳ ವಿರುದ್ಧ ತಹಸೀಲ್ದಾರರು ಕೂಡಲೇ ಯಾವ ಇಲಾಖೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲವೋ ಅವರ ಮೇಲೆ ಶಿತ್ತು ಕ್ರಮ ಜರುಗಿಸಿ, ಎಂದು ಈ ಸಂದರ್ಭದಲ್ಲಿ ಕ ರ ವೇ ಅಧ್ಯಕ್ಷ ಕಾಟೇರ ಹಾಲೇಶ್, ಬುಡಕಟ್ಟು ಸಮುದಾಯದ ಅಧ್ಯಕ್ಷರು ಕೆ. ಕೃಷ್ಣ ಪ್ಪ ಇತರರು ನಮ್ಮ ಮಾಧ್ಯಮದ ಮೂಲಕ ಅಸಮಧಾನ ಹೊರ ಹಾಕಿದ್ದಾರೆ.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ ಸಾಲುಮನೆ ಕೂಡ್ಲಿಗಿ
